All Gates of Tunga Reservoir Opened / ಮಲೆನಾಡು ಟುಡೆ / ಶಿವಮೊಗ್ಗ / ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ತುಂಗಾ ನದಿಗೆ ಒಳಹರಿವಿನ ಪ್ರಮಾಣ ಭಾರೀ ಏರಿಕೆ ಆಗಿದೆ ಬೆಳಗ್ಗೆ ಗಿಂತಲೂ ಇದೀಗ ಬಂದ ಮಾಹಿತಿ ಪ್ರಕಾರ, ತುಂಗಾ ಡ್ಯಾಮ್ನಿಂದ ನಲವತ್ತು ಸಾವಿರ ಕ್ಯೂಸೆಕ್ಸ್ಗೂ ಅಧಿಕ ನೀರು ಹೊರಬಿಡಲಾಗುತ್ತಿದೆ.
ಜಲಾಶಯದ ಅಧಿಕಾರಿಗಳು ನೀಡಿರುವ ವರದಿಯ ಪ್ರಕಾರ, ಜುಲೈ 7 ರಂದು ಅಂದರೆ ಇವತ್ತು ಬೆಳಗ್ಗಿನ ಅವಧಿಯಲ್ಲಿ ಜಲಾಶಯಕ್ಕೆ 21,508 ಕ್ಯೂಸೆಕ್ ಒಳಹರಿವು ಇತ್ತು. ಈ ಸಂದರ್ಭದಲ್ಲಿ ಒಟ್ಟು ಹೊರಹರಿವು 19,078 ಕ್ಯೂಸೆಕ್ ಆಗಿತ್ತು.
ಆದರೆ ಮಳೆಯ ಆರ್ಭಟ ಹೆಚ್ಚಾದ ಪರಿಣಾಮ ಸಂಜೆ 3:30 ಗಂಟೆಯ ವೇಳೆಗೆ ಜಲಾಶಯದ ಒಳಹರಿವು 46,385 ಕ್ಯೂಸೆಕ್‌ಗಳಿಗೆ ಏರಿಕೆಯಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಜಲಾಶಯದ ಎಲ್ಲಾ ಗೇಟ್‌ಗಳನ್ನು ತೆರೆದು, ಅದೇ ಪ್ರಮಾಣದ ಅಂದರೆ 46,385 ಕ್ಯೂಸೆಕ್ ನೀರನ್ನು ಒಟ್ಟು ಹೊರಹರಿವಾಗಿ ಹೊರಬಿಡಲಾಗುತ್ತಿದೆ, ಇದರಲ್ಲಿ 43,305 ಕ್ಯೂಸೆಕ್ ನೀರನ್ನು ನೇರವಾಗಿ ನದಿಗೆ ಹರಿಸಲಾಗುತ್ತಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
