Honda Activa ಶಿವಮೊಗ್ಗ : ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಪಾರ್ಸಲ್ ಹಾಕಲು ತೆರಳಿದ್ದ ಯುವಕನ ಬೈಕ್ ಕಳ್ಳತನವಾಗಿರುವ ಘಟನೆ ನಡೆದಿದೆ. ಈ ಹಿನ್ನೆಲೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಶಿವಮೊಗ್ಗ: ಬಕ್ರೀದ್ ವೇಳೆ ಅಕ್ರಮ ಗೋ ಸಾಗಾಟ ತಡೆಗೆ ಬಜರಂಗದಳ ಆಗ್ರಹ; ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಘಟನೆ ವಿವರ
ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ಯುವನೊಬ್ಬ ತನ್ನ ಹೊಂಡಾ ಆ್ಯಕ್ಟಿವಾ ಎಂಬ ಹೆಸರಿನ ಸ್ಕೂಟಿಯಲ್ಲಿ ಪಾರ್ಸಲ್ ಹಾಕಲು ಬಸ್ಟ್ಯಾಂಡ್ಗೆ ತೆರಳಿದ್ದ. ತನ್ನ ಸ್ಕೂಟಿಯನ್ನು ಶಿವಮೊಗ್ಗದ ಖಾಸಗಿ ಬಸ್ಟ್ಯಾಂಡ್ನಲ್ಲಿ ನಿಲ್ಲಿಸಿ 5:30 ಕ್ಕೆ ಪಾರ್ಸಲ್ ಹಾಕಲು ತೆರಳಿದ್ದ. ಪಾರ್ಸಲ್ ಹಾಕಿ ಸಂಜೆ 5:40 ರ ವೇಳೆಗೆ ವಾಪಾಸ್ ಬಂದಾಗ ಯುವಕನಿಗೆ ಶಾಕ್ ಕಾದಿತ್ತು.
ಅದೇನೆಂದರೆ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ನ್ನು ಯಾರೋ ಕಳ್ಳರು ಕದ್ದು ಪರಾರಿಯಾಗಿದ್ದರು. ಯುವಕ ಸುತ್ತಾ ಮುತ್ತಾ ಎಲ್ಲಾ ಕಡೆ ಹುಡುಕಿದರೂ ಬೈಕ್ ಕಾಣದ ಕಾರಣ ಬೈಕ್ನ್ನು ಹುಡುಕಿಕೊಡುವಂತೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Honda Activa Stolen from Private Bus Stand
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
