Financial Changes From April 1 / ದಿಲ್ಲಿ ಸುದ್ದಿ / ಏಪ್ರಿಲ್ ಒಂದರಿಂದಲೇ ಕೆಲವೊಂದು ಬದಲಾವಣೆಗಳಾಗಲಿದೆ. ಅಂದರೆ ನಾಳೆಯಿಂದ ಕೆಲವೊಂದು ನಿಯಮ ಬದಲಾವಣೆ ಆಗಲಿದ್ದು, ಈ ಪೈಕಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಿತರಿಸುವ ವಾರ್ಷಿಕಫಾಸ್ಟ್‌ಟ್ಯಾಗ್ ಪಾಸ್ ದರದಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಇದುವರೆಗೂ 23 ಸಾವಿರ ರೂಪಾಯಿಗಳಿದ್ದ ಶುಲ್ಕವನ್ನು ಬರುವ ಏಪ್ರಿಲ್ 1ರಿಂದ ಅನ್ವಯವಾಗುವಂತೆ 23,075 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ನೂತನ ಪರಿಷ್ಕೃತ ದರವು 2026-27ನೇ ಹಣಕಾಸು ವರ್ಷದ ಪೂರ್ತಿ ಅವಧಿಗೆ ಚಾಲ್ತಿಯಲ್ಲಿ ಇರಲಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಇನ್ನೂ ಮಾರುಕಟ್ಟೆಯಲ್ಲಿನ ಕರೆನ್ಸಿ ಮೌಲ್ಯದಲ್ಲಿ ಉಂಟಾಗಿರುವ ಬದಲಾವಣೆ ಹಾಗೂ ವಾಹನಗಳ ಉತ್ಪಾದನಾ ವೆಚ್ಚದಲ್ಲಿ ಆಗಿರುವ ಗಣನೀಯ ಏರಿಕೆಯ ಪರಿಣಾಮವಾಗಿ, ಪ್ರಮುಖ ವಾಹನ ತಯಾರಿಕಾ ಕಂಪನಿಗಳಾದ ಮರ್ಸಿಡಿಸ್ ಬೆಂಜ್, ಟಾಟಾ ಮೋಟರ್ಸ್ ಹಾಗೂ ಜೆಎಸ್‌ಡಬ್ಲ್ಯು ಎಂ.ಜಿ ಮೋಟರ್ ಸೇರಿದಂತೆ ಹಲವು ಸಂಸ್ಥೆಗಳು ತಮ್ಮ ವಾಹನಗಳ ಮಾರಾಟ ದರವನ್ನು ಹೆಚ್ಚಳ ಮಾಡಿವೆ. ಈ ಪರಿಷ್ಕೃತ ನೂತನ ಬೆಲೆ ಸಹ ಏಪ್ರಿಲ್ 1ರಿಂದಲೇ ಮಾರುಕಟ್ಟೆಯಲ್ಲಿ ಜಾರಿಗೆ ಬರಲಿವೆ.
ಇತ್ತ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ (ಎಂಎಸ್‌ಇ) ಉತ್ತೇಜನ ನೀಡುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಉದ್ದಿಮೆಗಳ ಆರ್ಥಿಕ ಸ್ಥಿತಿಗತಿ ಹಾಗೂ ಹಿಂದಿನ ಹಣಕಾಸಿನ ವ್ಯವಹಾರಗಳ ಹಿನ್ನೆಲೆಯನ್ನು ಅವಲೋಕಿಸಿ, ಯಾವುದೇ ರೀತಿಯ ಅಡಮಾನವನ್ನು ಪಡೆಯದೆ ಗರಿಷ್ಠ 125 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಒದಗಿಸಬಹುದಾಗಿದೆ. ಸಾಲ ನೀಡಿಕೆಯ ಈ ಹೊಸ ನಿಯಮಾವಳಿಗಳು ಏಪ್ರಿಲ್ 1ರಿಂದ ಅನ್ವಯ ಆಗಲಿವೆ.

ಮತ್ತೊಂದೆಡೆ ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ, ಷೇರು ಮಾರುಕಟ್ಟೆಯ ಫ್ಯೂಚರ್ಸ್ ಟ್ರೇಡಿಂಗ್ ವಹಿವಾಟಿನ ಮೇಲಿನ ಷೇರು ವಹಿವಾಟು ತೆರಿಗೆಯನ್ನು (ಎಸ್‌ಟಿಟಿ) ಶೇಕಡಾ 0.02 ರಿಂದ ಶೇಕಡಾ 0.05 ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ, ಆಪ್ಷನ್ಸ್ ಟ್ರೇಡಿಂಗ್ ಮೇಲಿನ ಎಸ್‌ಟಿಟಿಯನ್ನು ಶೇಕಡಾ 0.100 ರಿಂದ ಶೇಕಡಾ 0.158 ಕ್ಕೆ ಹೆಚ್ಚಳ ಮಾಡಲಾಗಿದ್ದು, ಈ ಹೊಸ ತೆರಿಗೆ ದ ಏಪ್ರಿಲ್ 1ರಿಂದಲೇ ಕಡ್ಡಾಯವಾಗಿ ಜಾರಿಗೆ ಬರಲಿವೆ.
ಉಳಿದಂತೆ ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯ ಬದಲಾಗಿ, ಕೇಂದ್ರ ಸರ್ಕಾರವು ತಂದಿರುವ ನೂತನ ಆದಾಯ ತೆರಿಗೆ ಕಾಯ್ದೆಯು ಏಪ್ರಿಲ್ 1ರಿಂದ ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಹೊಸ ಕಾಯ್ದೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಈ ಹಿಂದೆ ಬಳಸಲಾಗುತ್ತಿದ್ದ ಹಣಕಾಸು ವರ್ಷ ಹಾಗೂ ಮೌಲ್ಯಮಾಪನ ವರ್ಷ ಎಂಬ ಪದಗಳ ಬದಲು ಇನ್ನು ಮುಂದೆ ತೆರಿಗೆ ವರ್ಷ ಎಂಬ ಒಂದೇ ಪದವನ್ನು ಬಳಸಲಾಗುತ್ತದೆ. ಅಲ್ಲದೆ, ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವ ದೃಷ್ಟಿಯಿಂದ ಕಾಯ್ದೆಯ ಭಾಷೆಯನ್ನು ಮತ್ತಷ್ಟು ಸರಳಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ವಿಶೇಷ ಸಮಾಚಾರ ಅಂದರೆ, ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಮೋಟಾರು ಅಪಘಾತ ಕ್ಷೇಮ್ ನ್ಯಾಯಮಂಡಳಿಯ ಮೂಲಕ ಸಂತ್ರಸ್ತರು ಪಡೆದುಕೊಳ್ಳುವ ಪರಿಹಾರ ಮೊತ್ತದ ಮೇಲಿನ ಬಡ್ಡಿ ರೂಪದ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ತಿದ್ದುಪಡಿಯು ಸಹ ನಾಳೆ ಅಂದರೆ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದ್ದು, ಇನ್ನು ಮುಂದೆ ಇಂತಹ ಬಡ್ಡಿ ಆದಾಯದ ಮೇಲೆ ಯಾವುದೇ ಆದಾಯ ತೆರಿಗೆಯನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ.

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
What are the major financial rules including the FASTag fee hike, new vehicle prices, and the revised Income Tax Act taking effect across India from April 1?
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.