ಭಗವಂತನ ಕೃಪೆಯಿಲ್ಲದೆ ಪ್ರಯತ್ನ ನಡೆಯದು!ಶಿವಮೊಗ್ಗದಲ್ಲಿ ಪೇಜಾವರ ಶ್ರಿಗಳ ಆಶೀರ್ವಚನ! ಹೇಗಿತ್ತು , ವಿಷ್ಣು ಸಹಸ್ರನಾಮ ಪಾರಾಯಣ!

ಹಂಚಿಕೊಳ್ಳಿ
WhatsApp Facebook X Telegram
Shivamogga Vishnu Sahasranama Parayana by Sreegandha Samsthe Pejavara Seer Ashirvachana
Shivamogga Vishnu Sahasranama Parayana by Sreegandha Samsthe Pejavara Seer Ashirvachana

ಶಿವಮೊಗ್ಗ / ನಗರದ ಕುವೆಂಪು ರಂಗಮಂದಿರದಲ್ಲಿ ನಿನ್ನೆ ದಿನ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಉಭಯ ಶ್ರೀಗಳ ಆಶೀರ್ವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

Shivamogga Vishnu Sahasranama Parayana by Sreegandha Samsthe Pejavara Seer Ashirvachana
Shivamogga Vishnu Sahasranama Parayana by Sreegandha Samsthe Pejavara Seer Ashirvachana

ಶ್ರೀಗಂಧ ಸಂಸ್ಥೆ, ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್ ಹಾಗೂ ಭಜನಾ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಪೂಜೆಯ ಪುಣ್ಯ ಫಲವು ನಾಡಿನ ಸಮಸ್ತ ಜನರಿಗೂ ಪ್ರಾಪ್ತವಾಗಲಿ ಹಾಗೂ ಎಲ್ಲೆಡೆ ಸುಖ ಮತ್ತು ಶಾಂತಿ ನೆಲೆಸುವಂತಾಗಲಿ ಎಂದು ಹಾರೈಸಿದರು.

ಮಹಾಭಾರತದ ಕುರುಕ್ಷೇತ್ರ ಮಹಾಯುದ್ಧವು ಮುಕ್ತಾಯಗೊಂಡ ಬಳಿಕ, ಮುಂದಿನ ಹಾದಿಯ ಬಗ್ಗೆ ಮಾರ್ಗದರ್ಶನ ನೀಡುವಂತೆ ಧರ್ಮರಾಯನು ಶ್ರೀಕೃಷ್ಣನನ್ನು ಪ್ರಾರ್ಥಿಸಿದನು. ಆ ಸಂದರ್ಭದಲ್ಲಿ ಕೃಷ್ಣನು ಭೀಷ್ಮಾಚಾರ್ಯರ ಬಳಿ ತೆರಳಿ ಸಲಹೆ ಪಡೆಯುವಂತೆ ಸೂಚಿಸಿದನು. ಭೀಷ್ಮರು ಧರ್ಮರಾಯನಿಗೆ ಉಪದೇಶಿಸುತ್ತಾ, ಈ ಜಗತ್ತಿನಲ್ಲಿ ವಿಷ್ಣು ಸಹಸ್ರನಾಮವು ಅತ್ಯಂತ ಶ್ರೇಷ್ಠವಾದದ್ದು ಎಂದು ಅರ್ಥಸಹಿತವಾಗಿ ವಿವರಿಸಿದರು. ಆಕಾಶದಲ್ಲಿ ಹಕ್ಕಿಯೊಂದು ಮುಕ್ತವಾಗಿ ಹಾರಾಡಲು ಎರಡು ರೆಕ್ಕೆಗಳ ಅವಶ್ಯಕತೆ ಇರುವಂತೆಯೇ, ಮನುಷ್ಯನ ಜೀವನದಲ್ಲಿ ಕೇವಲ ಪ್ರಯತ್ನವಿದ್ದರೆ ಸಾಲದು, ಅದರ ಜೊತೆಗೆ ಭಗವಂತನ ಕೃಪಾಕಟಾಕ್ಷವೂ ಅಷ್ಟೇ ಮುಖ್ಯವಾಗಿದೆ 

ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀಗಳು

ಬಾಳಗಾರ ಮಠದ ಕಿರಿಯ ಪೀಠಾಧಿಪತಿ ಅಶೋಭರಾಮಪ್ರಿಯತೀರ್ಥ ಶ್ರೀಪಾದರು ಮಾತನಾಡುತ್ತಾ ಭಗವಂತನನ್ನು ನಿರಂತರವಾಗಿ ಆರಾಧಿಸುವ ಭಕ್ತರಿಗೆ ಶ್ರೀ ವಿಷ್ಣುವು ಎಂದಿಗೂ ಕಷ್ಟಗಳನ್ನು ನೀಡುವುದಿಲ್ಲ. ಸಮಾಜದಲ್ಲಿ ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣುವುದು ಸರಿಯಲ್ಲ. ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವುದೇ ಈ ವಿಷ್ಣು ಸಹಸ್ರನಾಮ ಪಾರಾಯಣದ ಮುಖ್ಯ ಆಶಯವಾಗಿದೆ. ಮನುಷ್ಯನ ಜೀವನದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದಿರುವುದೇ ಅತಿದೊಡ್ಡ ತಪಸ್ಸು ಎಂದರು 

Shivamogga Vishnu Sahasranama Parayana by Sreegandha Samsthe Pejavara Seer Ashirvachana
Shivamogga Vishnu Sahasranama Parayana by Sreegandha Samsthe Pejavara Seer Ashirvachana

ಮುಂದಿನ ದಿನಗಳಲ್ಲಿ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ 5,000 ಜನರನ್ನು ಸೇರಿಸಿ ಬೃಹತ್ ಮಟ್ಟದ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಬೃಹತ್ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಎಲ್ಲಾ ಜಾತಿ ಹಾಗೂ ಸಮುದಾಯಗಳ ಭಕ್ತರು ಒಟ್ಟಾಗಿ ಸೇರಿ ಪಾರಾಯಣ ಪಠಣ ಮಾಡಲಿದ್ದಾರೆ ಎಂದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರೂ ಆದ ಕೆ.ಎಸ್. ಈಶ್ವರಪ್ಪ ಘೋಷಿಸಿದ್ರು

[su_image_carousel source=”media: 33622,33623,33624,33625,33626,33627″ controls_style=”light” crop=”16:9″ target=”self”]

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Shivamogga Vishnu Sahasranama Parayana by Sreegandha Samsthe Pejavara Seer Ashirvachana

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor