ಮಹಿಳೆಗೆ ಬಂತು ಅಪರಿಚಿತ ಸಂಖ್ಯೆಯಿಂದ ಕರೆ. ಹೀಗೂ ಮಾಡ್ತಾರೆ ಹುಷಾರ್​

ಶಿವಮೊಗ್ಗ| ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು, ಮಹಿಳೆಯೊಬ್ಬರ  ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಪೋಸ್ಟ್  ಮಾಡಿದ್ದಾರೆ ಎಂದು ಆರೋಪದ ಹಿನ್ನೆಲೆ  ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Fake Profile Created in Woman s Name in Bhadravathi
Fake Profile Created in Woman s Name in Bhadravathi

ಶಿವಮೊಗ್ಗ : ಈ ಭಾನುವಾರ ಮಕ್ಕಳಿಗೆ ಪಲ್ಸ್​ ಪೋಲಿಯೋ ಹನಿ ಮರೆಯದೆ ಲಸಿಕೆ ಹಾಕಿಸಿ! ಇಲ್ಲಿದೆ ಡಿಟೇಲ್ಸ್​!

ಘಟನೆ ವಿವರ

ಶಿವಮೊಗ್ಗದ  ತಾಲೂಕು ಒಂದರ ಮಹಿಳೆಯೊಬ್ಬರಿಗೆ (ಹೆಸರನ್ನು ಗೌಪ್ಯವಾಗಿ ಇಡಲಾಗಿದೆ )   ಕಳೆದ ಕೆಲವು ದಿನಗಳಿಂದ ಅಪರಿಚಿತ ನಂಬರ್‌ಗಳಿಂದ ನಿರಂತರವಾಗಿ ಫೋನ್ ಕರೆಗಳು ಬರಲು ಆರಂಭವಾಗಿದ್ದವು. ಈ ಕರೆಗಳನ್ನು ಮಹಿಳೆ ನಿರ್ಲಕ್ಷಿಸಿ ನಿರಾಕರಿಸಿದ್ದರು. ಆದರೆ, ಇದರಿಂದ ಕೆರಳಿದ ದುಷ್ಕರ್ಮಿಗಳು ಮರುದಿನವೇ ಇನ್ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಮಹಿಳೆಯ ಹೆಸರಿನಲ್ಲೇ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ.

ದುಷ್ಕರ್ಮಿಗಳು ಮಹಿಳೆಯ ಫೊಟೋವನ್ನು  ಅಶ್ಲೀಲ ಚಿತ್ರಗಳೊಂದಿಗೆ ಮಾರ್ಫಿಂಗ್ (Edit) ಮಾಡಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮಹಿಳೆ ಹಾಗೂ ಅವರ ಪತಿಯ ಫೋಟೋವನ್ನು ಸ್ಟೇಟಸ್ ಹಾಕಿಕೊಂಡು, ಅದರ ಕೆಳಗೆ ಅತ್ಯಂತ ಕೆಟ್ಟದಾದ ಹಾಗೂ ಅವಹೇಳನಕಾರಿ ಶಬ್ದಗಳನ್ನು ಬಳಸಿ ಬ್ಲಾಗ್ ಮಾದರಿಯಲ್ಲಿ ಸೃಷ್ಟಿಸಿ ಹರಿಬಿಟ್ಟಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

Fake Profile Created in Woman s Name in Bhadravathi

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು