SHIVAMOGGA | Jan 20, 2024 | ಶಿವಮೊಗ್ಗ ನಗರ ನಾಗರಿಕರ ಗಮನಕ್ಕೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಪ್ರಕಟಣೆಯೊಂದನ್ನ ನೀಡಿದೆ. ಪ್ರಕಟಣೆಯಲ್ಲಿ ಇದೇ ಜನವರಿ 21 ಮತ್ತು 22 ರಂದು ಶಿವಮೊಗ್ಗ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ಕುಡಿಯುವ ನೀರು ವ್ಯತ್ಯಯ: ಸಹಕರಿಸಲು ಮನವಿ
ಶಿವಮೊಗ್ಗ, ಜನವರಿ 20: (ಕರ್ನಾಟಕ ವಾರ್ತೆ): ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಜ.21 ಮತ್ತು 22 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯವಾಗಲಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
