ನೈಸಾಗಿ ಪಾಲಿಶ್ ಹಾಕ್ತಿನಿ ಅಂತ ಬಂದವ ತಗ್ಲಾಕ್ಕೊಂಡ/ ಕಾರಿಗೆ ಲಾರಿ ಡಿಕ್ಕಿ/ KSRTC ಬಸ್​ ಚಾಲಕನಿಗೆ ಇನ್ನೋವ್ಹಾ ಡ್ರೈವರ್ ಆವಾಜ್ TODAY ಸುದ್ದಿ

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS

ಕಾರಿಗೆ ಲಾರಿ ಡಿಕ್ಕಿ, ಚಾಲಕ ಪರಾರಿ/ ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಕಾರು ಹಾಗೂ ಲಾರಿ ನಡುವೆ ಡಿಕ್ಕಿಯಾದ ಬಗ್ಗೆ ವರದಿಯಾಗಿದೆ. ಕಾರೊಂದಕ್ಕೆ ಡಿಕ್ಕಿಯಾದ ಬೆನ್ನಲ್ಲೆ ಲಾರಿಯನ್ನು ಸೈಡ್​ಗೆ ಹಾಕಿ ಚಾಲಕ ಪರಾರಿಯಾಗಿದ್ದಾನೆ. ಈ ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.  

Malenadu Today Shivamogga

ಪಾಲಿಶ್ ಪಂಗನಾಮ/ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ  ಚಿನ್ನ, ಬೆಳ್ಳಿ ಬಂಗಾರಕ್ಕೆ ಪಾಲಿಶ್ ಹಾಕುವುದಾಗಿ ಹೇಳಿ ಮೋಸ ಮಾಡಲು ಯತ್ನಿಸಿದ ಘಟನೆ ಬಗ್ಗೆ ವರದಿಯಾಗಿದೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿನ್ನವನ್ನು ಪಾಲಿಶ್ ಮಾಡಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬ ಮೋಸ ಮಾಡುತ್ತಿರುವುದಾಗಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ತಳಕ್ಕೆ ಬಂದ ಪೊಲೀಸರು ಆರೋಪಿತ ವ್ಯಕ್ತಿಯನ್ನು ಸ್ಟೇಷನ್​ಗೆ ಕರೆದೊಯ್ದು ವಿಚಾರಣೆ ನಡೆಸಿದದ್ಧಾರೆ.  

Malenadu Today Shivamogga

ಬಸ್​ ಅಡ್ಡಗಟ್ಟಿ ಹಲ್ಲೆ/ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನ್ಯೂಟೌನ್ ಪೊಲೀಸ್ ಸ್ಟೇಷನ್ (Newtown Police Station bhadravati) ವ್ಯಾಪ್ತಿಯಲ್ಲಿ  KSRTC ಬಸ್ಸಿಗೆ ಇನೋವಾ ಕಾರನ್ನು ಅಡ್ಡಹಾಕಿ,  ಚಾಲಕನೊಬ್ಬ ಬಸ್​ ಡ್ರೈವರ್​ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಲ್ಲದೆ  ಹಲ್ಲೇ ಮಾಡಿದ್ದಾನೆ. ಇದನ್ನ ಗಮನಿಸಿ ಅಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ಚಾಲಕರನ್ನು ಸ್ಟೇಷನ್​ಗೆ ಕರೆದೊಯ್ದಿದ್ದಾರೆ.  

Malenadu Today Shivamogga


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

 

Leave a Comment