ಹಬ್ಬದದಿನ ತವರಿನಿಂದ ಗಂಡನೊಂದಿಗೆ ಹೋದ ಯುವತಿ ಸಾವನ್ನಪ್ಪಲು ಕಾರಣವಾಗಿದ್ದೇನು? FIR ನಲ್ಲಿ ಏನಿದೆ ಆರೋಪ

ಹಂಚಿಕೊಳ್ಳಿ
WhatsApp Facebook X Telegram
ಹಬ್ಬದದಿನ ತವರಿನಿಂದ ಗಂಡನೊಂದಿಗೆ ಹೋದ ಯುವತಿ ಸಾವನ್ನಪ್ಪಲು ಕಾರಣವಾಗಿದ್ದೇನು? FIR  ನಲ್ಲಿ ಏನಿದೆ ಆರೋಪ

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಮದುವೆಯಾಗಿ ಏಳು ತಿಂಗಳು ಕಳೆದಿದ್ದ ಯುವತಿ ಸಾವನ್ನಪ್ಪಿದ ಪ್ರಕರಣದಲ್ಲಿ ಇದೀಗ ಎಫ್ಐಆರ್ ದಾಖಲಾಗಿದ್ದು, ಯುವತಿಯ ಪತಿ ಹೊಡೆದಿದ್ದರಲೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಅಲ್ಲದೆ ಯುವಕ ಹಾಗೂ ಆತನ ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಮಾಡಲಾಗಿದೆ. ಈ ಸಂಬಂಧ  IPC 1860 (U/s-498A,304B,34); DOWRY PROHIBITION ACT, 1961 (U/s-3,4) ಅಡಿಯಲ್ಲಿ ಕೇಸ್ ದಾಖಲಾಗಿದೆ. 

ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?

ಏನಿದೆ FIR ನಲ್ಲಿ?

ನಮಿತಾ ಗಣೇಶನ ಹಬ್ಬದ ದಿನ ರಾತ್ರಿ ತವರು ಮನೆಯಿಂದ ಗಂಡನೊಂದಿಗೆ ತೆರಳಿದ್ದಳು. ಮಾವನ ಮನೆಗೆ ಹೋದ ಕೆಲ ಹೊತ್ತಿನಲ್ಲಿಯೇ ಆಕೆ ಸಾವನ್ನಪ್ಪಿದ್ದಳು. ಆನಂತರ ನಮಿತಾಳ ಪತಿ ಸತೀಶ್​ ನಮಿತಾಳಿಗೆ ಹೊಡೆದಿದ್ದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. 

ಈ ಸಂಬಂಧ ಮೃತಳ ತಂದೆ ದೂರು ನೀಡಿದ್ದು, ಸತೀಶ್​ ಕುಟುಂಬಸ್ಥರು ನಾಲ್ಕು ಲಕ್ಷ ವರದಕ್ಷಿಣೆ ಕೇಳಿದ್ದರು. 2 ಲಕ್ಷ ರೂಪಾಯಿ ನೀಡಿ ಮದುವೆ ಮಾಡಿಸಿದ್ದು, ಆನಂತರ ವರದಕ್ಷಿಣೆಗಾಗಿ ಪದೇ ಪದೇ ಒತ್ತಾಯ ಮಾಡುತ್ತಿದ್ದರು. ಇದೇ ಕಾರಣಕ್ಕೆ ಹಬ್ಬದ ದಿನ ನಮಿತಾಳ ಪತಿ ಸತೀಶ್​ ನಮಿತಾಳ ಮನೆಯ ಒಳಗೆ ಬರದೇ ಹೊರಗಡೆಯೇ ನಿಂತಿದ್ದನಂತೆ. ಅಲ್ಲದೆ ನಮಿತಾಳನ್ನ ಕರೆದುಕೊಂಡು ತನ್ನ ಮನೆಗೆ ಹೋಗಿದ್ದಾನೆ.

ಅಲ್ಲಿ ನಮಿತಾ ಪತಿಯನ್ನ ತನ್ನ ಮನೆಯಲ್ಲಿ ಏಕೆ ಊಟ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾಳೆ. ಈ ವಿಚಾರಕ್ಕೆ ಪರಸ್ಪರ ಮಾತಾಗಿದೆ. ಈ ವೇಳೆ ಸತೀಶ್​ ನಮಿತಾಳಿಗೆ ಹೊಡೆದಿದ್ದಾನೆ. ಪರಿಣಾಮ ಅಲ್ಲಿಯೇ ಕುಸಿದು ಬಿದ್ದ ನಮಿತಾ ಸಾವನ್ನಪ್ಪಿದ್ದಾಳೆ ಎಂದು ಸತೀಶ್​ ಕೂಡ ವಿಚಾರಣೆ ವೇಳೆ ತಿಳಿಸಿದ್ದಾನೆಂದು ಏಫ್ಐಆರ್​ನಲ್ಲಿ ಆರೋಪಿಸಲಾಗಿದೆ. 


ಇನ್ನಷ್ಟು ಸುದ್ದಿಗಳು 

 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor