ನಾನ್ ಬರ್ತಿದ್ದೀನಿ ಚಿನ್ನ, ಡೆವಿಲ್​ ಟ್ರೈಲರ್​ಗೆ ಕೌಂಟ್​ಡೌನ್​ ಸ್ಟಾರ್ಟ್​​

ಹಂಚಿಕೊಳ್ಳಿ
WhatsApp Facebook X Telegram
Darshan Devil movie Trailer Release Date 
Darshan Devil movie Trailer Release Date 

ದರ್ಶನ್ ತೂಗುದೀಪ ಅವರು ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಚಿತ್ರದ  ಟ್ರೈಲರ್ ಬಿಡುಗಡೆಗೆ ಡೇಟ್​ ಫೀಕ್ಸ್​ ಆಗಿದೆ. ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 05 ರಂದು ಬೆಳಿಗ್ಗೆ 10:05 ಗಂಟೆಗೆ ಸರಿಗಮಪ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. 

ಕೃಷ್ಣಮೃಗಗಳ ಮೇಲೆ ನಿಗಾ, 3 ದಿಕ್ಕುಗಳಿಗೂ ಶಿವಮೊಗ್ಗದಿಂದ ರೈಲು ಸಂಪರ್ಕ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಚಿತ್ರವು ತೆರೆಗೆ ಬರಲು ಕೇವಲ ಹತ್ತು ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡವು ಪ್ರಚಾರ ಕಾರ್ಯಗಳನ್ನು ಬಿರುಸಿನಿಂದ ಕೈಗೊಂಡಿದೆ. ಬಿಡುಗಡೆ ದಿನಾಂಕಕ್ಕೆ ಕೇವಲ 15 ದಿನಗಳಿದ್ದರೂ ಸಹ, ಟ್ರೈಲರ್​  ರಿಲೀಸ್ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ದಾಸ’ನ ಅಭಿಮಾನಿಗಳು ಟ್ರೈಲರ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಟ್ರೈಲರ್ ಅನೌನ್ಸ್ ಆಗಿರುವುದು ದರ್ಶನ್ ಅಭಿಮಾನಿಗಳಲ್ಲಿ ದೊಡ್ಡ ಸಂತಸವನ್ನು ತಂದಿದೆ. 

Darshan Devil movie Trailer Release Date 
Darshan Devil movie Trailer Release Date

Darshan Devil movie  ದರ್ಶನ್​ ಸಿಗ್ನೇಚರ್​​ ಸ್ಟೈಲ್​ನಲ್ಲಿ ಟ್ರೈಲರ್​ ಅನೌನ್ಸ್​​ 

ಕೆಲ ಟ್ರೈಲರ್​ ಅನೌನ್ಸ್​ ಮಾಡಬೇಕಾದರೆ ಚಿತ್ರದ ನಿರ್ದೇಶಕರು ಕೆಲವೊಂದು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆದೇ ರೀತಿ ದರ್ಶನ್​ ಸಿನಿಮಾದಲ್ಲಿ ಸಹ ಇದು ಕಾಮನ್​. ಈ ಹಿಂದೆ ಯಾಜಮಾನ ಹಾಗೂ ಕಾಟೇರ ಚಿತ್ರದ ಟ್ರೈಲರ್​ ರಿಲೀಸ್​ ಸಂದರ್ಭದಲ್ಲಿ ದರ್ಶನ್​ರವರ ಕೈಯನ್ನು ಪೋಕಸ್​ ಮಾಡಿ ಚಿತ್ರತಂಡ ಟ್ರೈಲರ್​ನ್ನು ಅನೌನ್ಸ್​ ಮಾಡಿತ್ತು. ಇದೀಗ ಡೆವಿಲ್​ ಚಿತ್ರದ ಟ್ರೈಲರ್​ ರಿಲೀಸ್​ ವಿಡಿಯೋದಲ್ಲಿಯೂ ಸಹ ಚಿತ್ರತಂಡ ಅದೇ ರೀತಿಯ ಸಿಗ್ನೇಚರ್​​ ಸ್ಟೈಲ್​​ನ್ನು ಯೂಸ್​ ಮಾಡಿದೆ. ರಿಲೀಸ್​ ಆಗಿರುವ ವಿಡಿಯೋದಲ್ಲಿ  ದರ್ಶನ್​ರವರು ನಗುತ್ತಾ ಕೈ ಎತ್ತಿ ಚಿಟಿಕೆ ಹೊಡೆದು ಬರ್ತಿದ್ದೀನಿ ಚಿನ್ನ ಎಂಬ ಡೈಲಾಗ್​ ಹೇಳುವ ಮೂಲಕ ಚಿತ್ರದ ಟ್ರೈಲರ್​ ರಿಲೀಸ್​ ಡೇಟ್​ನ್ನು ಅನೌನ್ಸ್​ ಮಾಡುತ್ತಾರೆ.

Darshan Devil movie Trailer Release Date 
Darshan Devil movie Trailer Release Date

ಈ ಹಿಂದೆ ಚಿತ್ರವನ್ನು ಡಿಸೆಂಬರ್ 12 ರಂದು ಬಿಡುಗಡೆ ಮಾಡಲು ಚಿತ್ರತಂಡವು ಯೋಚಿಸಿತ್ತು. ಆದರೆ, ಅಭಿಮಾನಿಗಳ ನಿರಂತರ ಒತ್ತಾಯದ ಮೇರೆಗೆ, ದರ್ಶನ್ ಅವರ ಅನುಪಸ್ಥಿತಿಯಲ್ಲೇ ಚಿತ್ರವು ಒಂದು ದಿನ ಮುಂಚಿತವಾಗಿ, ಅಂದರೆ ಡಿಸೆಂಬರ್ 11 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕಿಯಾಗಿ ರಚನಾ ರೈ ನಟಿಸಿದ್ದು, ಅಚ್ಯುತ್ ಕುಮಾರ್, ಗಿಲ್ಲಿನಟ, ಹುಲಿ ಕಾರ್ತಿಕ್ ಸೇರಿದಂತೆ ಹಲವಾರು ನಟರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor