ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಇಂದು ನಿಮ್ಮ ಭವಿಷ್ಯ ಹೇಗಿದೆ, ಮಂಗಳವಾರ ಮಂಗಳಕರವಾಗಿರಲಿದೆಯಾ ಎಂಬುದನ್ನು ಗಮನಿಸೋಣ

ಇವತ್ತಿನ ದಿನವಿಶೇಷ /Daily horoscope for 12 zodiac signs
ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷದ ದ್ವಾದಶಿ ತಿಥಿ (ಮಧ್ಯಾಹ್ನ 12.19 ರವರೆ ನಂತರ ತ್ರಯೋದಶಿ ತಿಥಿ). ಅಶ್ವಿನಿ ನಕ್ಷತ್ರದ ಈ ದಿನ ರಾಹುಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಮತ್ತು ಯಮಗಂಡ ಕಾಲ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.ಇಂದಿನ ಮಳೆ ನಕ್ಷತ್ರವು ಅನರಾಧ. ನಾಲ್ಕನೇ ಪಾದ.

ಶಿವಮೊಗ್ಗ, ಶಿರಸಿ ಮಾರುಕಟ್ಟೆಯಲ್ಲಿ ಅಡಿಕೆಗೆ ಬಂಪರ್! ಜಿಗಿದ ರೇಟ್! ಲೇಟೆಸ್ಟ್ ಮಾಹಿತಿ
ಇವತ್ತು ಶುಭಕರವಾದ ಅಮೃತಸಿದ್ಧಿ ಯೋಗವಿದೆ. ಈ ಯೋಗದಲ್ಲಿ ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಇದೆ. ಚಾಂದ್ರ ಮುಕ್ಕೋಟಿ ದ್ವಾದಶಿ, ಕೈಶಿಕ ದ್ವಾದಶಿ, ಅನಂತ ತ್ರಯೋದಶೀ, ಭೌಮ ಪ್ರದೋಷ ಮತ್ತು ತಿಥಿಯ ಪಾರಣೆಯನ್ನು ಆಚರಿಸಲಾಗುತ್ತದೆ.
ಇನ್ನೂ ಇವತ್ತು ಚನ್ನಪಟ್ಟಣದ ವಂದಾರುಗುಪ್ಪೆಯಲ್ಲಿ ಆಂಜನೇಯ ಉತ್ಸವ, ಹಂಪಿಯಲ್ಲಿ ವಿರೂಪಾಕ್ಷೇಶ್ವರ ಕಾರ್ತಿಕ ಉತ್ಸವ, ಸಾತೇನಹಳ್ಳಿ ಶಾಂತೇಶ ಕಾರ್ತಿಕ ಉತ್ಸವಗಳು ನಡೆಯಲಿವೆ. ಹಾಗೆಯೇ ಹೊಸದುರ್ಗ ತಾಲ್ಲೂಕಿನ ಬೆಲಗೂರು ಸೋಮಸಂದ್ರ ಆಂಜನೇಯ ರಥೋತ್ಸವ, ಕಟಪಾಡಿ ಕಾರ್ಕಳ ಬೆಟ್ಟದಲ್ಲಿ ಶ್ರೀ ಕಾಳಿಕಾದೇವಿ ಉತ್ಸವ ಮತ್ತು ಹಾವೇರಿ ಜಿಲ್ಲೆಯ ದೇವಗಿರಿ ಯಲ್ಲಮ್ಮ ದೇವಿಯ ಕಾರ್ತಿಕ ಉತ್ಸವ ಹಾಗೂ ಜಾತ್ರೆಯು ಸಹ ಇಂದಿನ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಾಗಿವೆ.
Daily horoscope for 12 zodiac signs
ಇವತ್ತಿ ದಿನ ಭವಿಷ್ಯ
ಮೇಷ: ಈ ರಾಶಿಯವರಿಗೆ ಇಂದು ವಿಶೇಷ ದಿನ, ಅನ್ಯರಿಂದ ಮಹತ್ವದ ಮಾಹಿತಿ ದೊರೆಯಲಿದೆ. ಹೊಸ ಸಂಸ್ಥೆ ಪ್ರಾರಂಭಿಸುವ ಯೋಗವಿ. ವಸ್ತುಲಾಭ ಹಾಗೂ ವಾಹನಯೋಗ ಕೂಡಿಬರುತ್ತದೆ. ವ್ಯವಹಾರ ಲಾಭದಾಯಕವಾಗಿದ್ದು, ಉದ್ಯೋಗದಲ್ಲಿ ಉತ್ತಮ ವಾತಾವರಣ ಇರಲಿದೆ. (Daily horoscope for 12 zodiac signs)
ವೃಷಭ : ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದ ಕಾರಣ ನಿರಾಸೆ ಎದುರಾಗಬಹುದು. ಆಸ್ತಿ ಸಂಬಂಧಿತ ವಿವಾದ, ಆರ್ಥಿಕ ಪರಿಸ್ಥಿತಿ ಸಂಬಂಧ ತಲೆಬಿಸಿ ಆಗಬಹುದು. ಆರೋಗ್ಯದಲ್ಲಿ ಏರುಪೇರು, ಪ್ರಮುಖ ಕಾರ್ಯಗಳನ್ನು ಮುಂದಕ್ಕೆ ಹೋಗುವುದು. ವ್ಯವಹಾರ ನಿಧಾನಗತಿಯಲ್ಲಿ ಸಾಗಲಿವೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಗೊಂದಲ
ಮಿಥುನ: ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಉತ್ಸಾಹ ಹೆಚ್ಚಲಿದೆ. ಪ್ರತಿಭೆ ಇಂದು ಬೆಳಕಿಗೆ ಬರಲಿದೆ. ಕೈಗೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದಾರೆ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುತ್ತದೆ. ನೌಕರಿಯಲ್ಲಿನ ಸಮಸ್ಯೆ ದೂರವಾಗಲಿದೆ.

Daily horoscope for 12 zodiac signs
ಕರ್ಕಾಟಕ : ಹೊಸ ಉದ್ಯೋಗ ಅವಕಾಶ, ಪ್ರಭಾವಿ ವ್ಯಕ್ತಿಗಳ ಪರಿಚಯ. ಶುಭ ಸಮಾರಂಭ. ಆರ್ಥಿಕವಾಗಿ ಅಭಿವೃದ್ಧಿ, ನಿರ್ಣಾಯಕ ವಿಚಾರಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವಿರಿ. ವಹಿವಾಟುಗಳಲ್ಲಿ ವಿಜಯದ ದಿನ, ಉದ್ಯೋಗ ಕ್ಷೇತ್ರದಲ್ಲಿ ಹಿರಿಯರಿಂದ ಪ್ರೋತ್ಸಾಹ
ಸಿಂಹ : ವಿದ್ಯಾರ್ಥಿಗಳ ಪ್ರಯತ್ನಗಳಿಗೆ ಯಶಸ್ಸು. ಕೆಲಸ ನಿಧಾನವಾಗಿ ಸಾಗಲಿದ್ದು, ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ದೂರ ಪ್ರಯಾಣ, ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ವಾಗ್ವಾದ. ವ್ಯವಹಾರಗಳಲ್ಲಿ ಗೊಂದಲದ ವಾತಾವರಣ, ಉದ್ಯೋಗದಲ್ಲಿ ಹೊಸ ತಾಪತ್ರಯ
ಕನ್ಯಾ : ಪರಿಶ್ರಮಕ್ಕೆ ತಕ್ಕ ಫಲಿತಾಂಶ. ಬಂಧು ಮಿತ್ರರೊಂದಿಗೆ ಭಿನ್ನಾಭಿಪ್ರಾಯ. ಹೊಸದಾಗಿ ಸಾಲ ಮಾಡುವ ಪರಿಸ್ಥಿತಿ. ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯಾಪಾರದಲ್ಲಿ ಏರಿಳಿತ, ಉದ್ಯೋಗದಲ್ಲಿ ಸ್ಥಾನಪಲ್ಲಟ.
missing case shivamogga : ಇವರುಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ
ತುಲಾ : ಹೊಸ ಜನರ ಭೇಟಿ, ಶುಭ ಸುದ್ದಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸ್ನೇಹಿತರು ಮತ್ತು ಹತ್ತಿರದ ಸಂಬಂಧಿಕರಿಂದ ನೆರವು. ವಾಹನ ಖರೀದಿ ಯೋಗ. ವ್ಯವಹಾರಗಳಲ್ಲಿ ಹೆಚ್ಚಿನ ಲಾಭ, ಉದ್ಯೋಗ ಕ್ಷೇತ್ರದಲ್ಲಿ ಹೊಸ ಉತ್ಸಾಹ ಮತ್ತು ಹುಮ್ಮಸ್ಸು
ವೃಶ್ಚಿಕ : ಹಳೆಯ ನೆನಪುಗಳನ್ನು ಮೆಲುಕು ಹಾಕಲಿದ್ದಾರೆ. ಆತ್ಮೀಯರಿಂದ ಸಂತಸದ ಸುದ್ದಿಗಳನ್ನು ಕೇಳಲಿದ್ದಾರೆ. ವಾಹನ ಯೋಗ, ಮಾತುಕತೆಗಳಲ್ಲಿ ಯಶಸ್ಸು. ಭೂಮಿ ಸಂಬಂಧಿತ ವಿವಾದ ಬಗೆಹರಿಯಲಿವೆ. ವ್ಯವಹಾರ ಮತ್ತಷ್ಟು ಅನುಕೂಲಕರವಾಗಿದ್ದು, ಉದ್ಯೋಗದಲ್ಲಿ ಹೊಸ ಭರವಸೆ ಚಿಗುರಲಿವೆ.
ಧನುಸ್ಸು: ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮನಸ್ತಾಪ. ಆಲೋಚನೆಗಳಲ್ಲಿ ಸ್ಥಿರತೆ ಇರದು, ದೈಹಿಕ ಶ್ರಮ. ಕೆಲಸ ಪೂರ್ಣಗೊಳಿಸುವಲ್ಲಿ ಅಡೆತಡೆ ಎದುರಾಗಬಹುದು. ದೇವಾಲಯಗಳಿಗೆ ಭೇಟಿ, ಅನಾರೋಗ್ಯದ ಸಮಸ್ಯೆ. ವ್ಯವಹಾರ ನಿಧಾನಗತಿಯಲ್ಲಿ ಸಾಗಲಿದ್ದು, ಉದ್ಯೋಗದಲ್ಲಿ ಕೆಲವು ತೊಡಕುಗಳು ಎದುರಾಗಲಿವೆ.
ಮಕರ: ಭೂಮಿ ಸಂಬಂಧಿತ ವಿವಾದ ತಲೆನೋವು ತರಬಹುದು. ಸಹೋದರರೊಂದಿಗೆ ಕಲಹ. ಹೊಸದಾಗಿ ಸಾಲ ಮಾಡುವ ಒತ್ತಡ ಬರಬಹುದು. ಆಕಸ್ಮಿಕವಾಗಿ ಪ್ರಯಾಣ, ಮನೆಯೊಳಗೆ ಮತ್ತು ಹೊರಗೆ ಸಮಸ್ಯೆ. ವ್ಯವಹಾರ ನಿರುತ್ಸಾಹಗೊಳಿಸಲಿವೆ ಮತ್ತು ಉದ್ಯೋಗದಲ್ಲಿ ಕೆಲವು ತೊಂದರೆ
ಕುಂಭ : ಹೊಸ ಯೋಜನೆಗಳಿಗೆ ಚಾಲನೆ ನೀಡಲು ಇದು ಶುಭ ದಿನ. ಆಕಸ್ಮಿಕ ಧನಲಾಭ. ಹೊಸ ವಿದ್ಯಾರ್ಹತೆ ಅಥವಾ ಅಧ್ಯಯನದ ಅವಕಾಶ. ಬಾಲ್ಯದ ಮಿತ್ರರನ್ನು ಭೇಟಿಯಾಗುವ ಸಾಧ್ಯತೆ. ವ್ಯವಹಾರಗಳಲ್ಲಿ ಪ್ರಗತಿ, ಉದ್ಯೋಗದಲ್ಲಿನ ಎಲ್ಲಾ ಸಮಸ್ಯೆ ಪರಿಹಾರವಾಗಲಿವೆ.

ಮೀನ : ಸ್ನೇಹಿತರು ಮತ್ತು ಸಂಬಂಧಿಕರಿಂದ ಒತ್ತಡ, ಆಧ್ಯಾತ್ಮಿಕ ಚಿಂತನೆಯ ಕಡೆಗೆ ಒಲವು. ಮುಖ್ಯ ಕೆಲಸಕ್ಕೆ ಅಡೆತಡೆ. ಆರ್ಥಿಕ ಸ್ಥಿತಿಯು ನಿರೀಕ್ಷಿತ ಮಟ್ಟದಲ್ಲಿ ಅನುಕೂಲಕರವಾಗಿಲ್ಲ. ಅನಾವಶ್ಯಕ ಖರ್ಚು-ವೆಚ್ಚ, ಅನಾರೋಗ್ಯ. ವ್ಯವಹಾರ ಸಾಧಾರಣವಾಗಿ ಸಾಗಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಅಡಚಣೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,
ಸಿದ್ದಾಪುರ-ಹೊಸನಗರ ಹೆದ್ದಾರಿಯಲ್ಲಿ ಹೊಳೆಗೆ ಪಲ್ಟಿಯಾದ ಇಂಧನ ಲಾರಿ!






