ಶಿಕಾರಿಪುರ:ಕಾಡುಹಂದಿ ಬೇಟೆಯಾಡಿ ಮಾಂಸ ಮಾರುತ್ತಿದ್ದವನ ಬಂಧನ; 27 ಕೆಜಿ ಮಾಂಸ ಜಪ್ತಿ!

ಹಂಚಿಕೊಳ್ಳಿ
WhatsApp Facebook X Telegram
Crime Man Arrested For Hunting Wild Boar
Crime Man Arrested For Hunting Wild Boar

Crime ಶಿಕಾರಿಪುರ : ತಾಲ್ಲೂಕಿನ ಗಾಮ ಗ್ರಾಮದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿ, ತನ್ನ ಮನೆಯಲ್ಲೇ ಮಾಂಸ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. 

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೀತು ಇ-ಪೇಪರ್​​ ಓದಿ

ಗಾಮ ಗ್ರಾಮದ ನಿವಾಸಿಯಾದ ಕುಮಾರ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿಗಳು ಆರೋಪಿಯಿಂದ ಬರೋಬ್ಬರಿ 27 ಕೆ.ಜಿ ತೂಕದ ಕಾಡು ಹಂದಿಯ ಹಸಿ ಮಾಂಸ ಹಾಗೂ ವನ್ಯಜೀವಿಯನ್ನು ಕೊಲ್ಲಲು ಮತ್ತು ಮಾಂಸ ಕತ್ತರಿಸಲು ಕೃತ್ಯಕ್ಕೆ ಬಳಸಿದ್ದ ಕತ್ತಿ, ಮಚ್ಚು ಹಾಗೂ ತೂಕದ ತಕ್ಕಡಿಯನ್ನು ಸ್ಥಳದಲ್ಲೇ ವಶಪಡಿಸಿಕೊಂಡಿದ್ದಾರೆ .

ಈ ಯಶಸ್ವಿ ಕಾರ್ಯಾಚರಣೆಯನ್ನು ಶಿಕಾರಿಪುರ ಉಪವಿಭಾಗದ ಅಂಬ್ಲಿಗೊಳ ವಲಯ ಅರಣ್ಯಾಧಿಕಾರಿ ಶಾಂತಪ್ಪ ಪೂಜಾರ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ದಾಳಿಯ ತಂಡದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾ ಅಬ್ದುಲ್ ಕರೀಮ್, ಅಮಿತ್ ಹಾಗೂ ಗಸ್ತು ಅರಣ್ಯ ಪಾಲಕರಾದ ಕೃಷ್ಣಮೂರ್ತಿ, ಸುರೇಶ್ ಮತ್ತು ಚಂದ್ರಪ್ಪ ಲಮಾಣಿ ಅವರು ಪಾಲ್ಗೊಂಡಿದ್ದರು. ಸದ್ಯ ಬಂಧಿತ ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.

Shikaripura Crime Man Arrested For Hunting Wild Boar

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor