ಡಾ. ಪಿ. ಗೌರಿ ಶಂಕರ್ ವಿರುದ್ಧ ಸುಳ್ಳು ಸುದ್ದಿ ಪ್ರಸಾರಕ್ಕೆ ಬ್ರೇಕ್, ನ್ಯಾಯಾಲಯದಿಂದ ತಡೆಯಾಜ್ಞೆ 

ಶಿವಮೊಗ್ಗ | ಡಾ. ಪಿ. ಗೌರಿ ಶಂಕರ್ ಅವರ ವ್ಯಕ್ತಿತ್ವಕ್ಕೆ ಕುಂದು ತರುವಂತಹ ಯಾವುದೇ ಅವಹೇಳನಕಾರಿ ವಿಷಯಗಳನ್ನು ಪ್ರಕಟಿಸದಂತೆ  ನ್ಯಾಯಾಲಯವು ಕಟ್ಟುನಿಟ್ಟಿನ ತಡೆಯಾಜ್ಞೆ ನೀಡಿದೆ. ಕಳೆದ ಡಿಸೆಂಬರ್ 19, 2025 ರಂದು ಈ ಮಹತ್ವದ ಆದೇಶ ಹೊರಬಿದ್ದಿದ್ದು, ಮಾನನಷ್ಟ ಉಂಟುಮಾಡುವ ಪೋಸ್ಟ್‌ಗಳಿಗೆ ಬ್ರೇಕ್ ಬಿದ್ದಿದೆ. 

Court Bans Defamatory Content Against Gauri Shankar
Court Bans Defamatory Content Against Gauri Shankar

ಬೆಂಗಳೂರಿನ ಪ್ರಧಾನ ನಗರ ನಾಗರೀಕ (ಸಿವಿಲ್) ಮತ್ತು ಸತ್ರ (ಸೆಷನ್ಸ್) ನ್ಯಾಯಾಲಯವು ನೀಡಿರುವ ಆದೇಶದ ಪ್ರಕಾರ, ಯಾವುದೇ ವ್ಯಕ್ತಿಗಳು ಸೋಶಿಯಲ್ ಮೀಡಿಯಾ, ಇಂಟರ್ನೆಟ್, ಟಿವಿ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಡಾ. ಗೌರಿ ಶಂಕರ್ ವಿರುದ್ಧ ಸುಳ್ಳು ಮತ್ತು ಅವಹೇಳನಕಾರಿ ವಿಷಯಗಳನ್ನು ಹಂಚಿಕೊಳ್ಳುವಂತಿಲ್ಲ. 

ಅಷ್ಟೇ ಅಲ್ಲದೆ, ಈಗಾಗಲೇ ಫೇಸ್​ಬುಕ್​ ಸೇರಿದಂತೆ ವಿವಿಧೆಡೆ ಡಾ.ಗೌರಿ ಶಂಕರ್​ ವಿರುದ್ಧ ಹಾಕಿರುವ ಎಲ್ಲಾ ಮಾನನಷ್ಟಕಾರಿ ಪೋಸ್ಟ್‌ಗಳನ್ನು ಕೂಡಲೇ ತೆಗೆದುಹಾಕುವಂತೆ (Delete) ನ್ಯಾಯಾಲಯವು ನಿರ್ದೇಶಿಸಿದೆ. 

ಒಂದು ವೇಳೆ ನ್ಯಾಯಾಲಯದ ಈ ಆದೇಶವನ್ನು ಉಲ್ಲಂಘಿಸಿ, ಅಂತಹ ಪೋಸ್ಟ್‌ಗಳನ್ನು ಮುಂದುವರಿಸಿದರೆ, ಹಂಚಿಕೊಂಡರೆ ಅಥವಾ ಮರು-ಪೋಸ್ಟ್ ಮಾಡಿದರೆ ಅದನ್ನು ‘ನ್ಯಾಯಾಂಗ ನಿಂದನೆ’ ಎಂದು ಪರಿಗಣಿಸಲಾಗುವುದು. ಅಂತಹ ವ್ಯಕ್ತಿಗಳು ಗಂಭೀರ ಸ್ವರೂಪದ ನಾಗರಿಕ ಮತ್ತು ಕ್ರಿಮಿನಲ್ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೋರ್ಟ್​ ಆದೇಶಿಸಿದೆ.

Court Bans Defamatory Content Against Gauri Shankar

Court Bans Defamatory Content Against Gauri Shankar
Court Bans Defamatory Content Against Gauri Shankar