ಮಲೆನಾಡು ಟುಡೆ ಸುದ್ದಿ / ನವದೆಹಲಿ / ಚೀನಾದ ಜನಪ್ರಿಯ ವಿಡಿಯೊ ವೇದಿಕೆ ಬಿಲಿಬಿಲಿ ಇದೀಗ ಜಾಗತಿಕ ಮಾರುಕಟ್ಟೆಗೆ ಕಾಲಿಡುತ್ತಿದೆ. ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಿದ್ಧತೆ ನಡೆಸಿ ಬಿಲಿಬಿಲಿ (Chinese Video Platform) ಚೀನಾದದಿಂದ ಹೊರಗಿನ ದೇಶಗಳಲ್ಲೂ ತನ್ನ ಪ್ಲಾಟ್ಫಾರಮ್ ಆರಂಭಿಸುವುದಾಗಿ ಘೋಷಿಸಿದೆ. ಇದು ಕಂಟೆಂಟ್ ಪ್ಲಾಟ್ಫಾರಮ್ನ ಏಕಸ್ವಾಮ್ಯ ಹೊಂದಿದಂತಿರುವ ಯೂಟ್ಯೂಬ್‌ಗೆ ನೇರ ಪೈಪೋಟಿ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ನೆಟ್ವರ್ಕ್ ಆಜ್ ತಕ್ ಸಂಸ್ಥೆ ಸುದ್ದಿ ಮಾಡಿದೆ. ಅದರ ವರದಿ ಪ್ರಕಾರ, ಬಿಲಿಬಿಲಿಯಲ್ಲಿ ವಿಡಿಯೊ ನೋಡುವುದರ ಜೊತೆಗೆ ಅದರ ಬಳಕೆದಾರರ ಪರಸ್ಪರ ಸಂವಹನ ನಡೆಸುವ ಅವಕಾಶವೂ ಲಭ್ಯವಿದೆಯಂತೆ ಈ ವೈಶಿಷ್ಟ್ಯ ಇತರ ವಿಡಿಯೊ ಕಟೆಂಟ್ ಪ್ಲಾರಮ್ಗಿಂತ ಇದನ್ನು ಭಿನ್ನವಾಗಿಸಿದೆ ಎನ್ನಲಾಗುತ್ತಿದೆ.
ಅಂದಹಾಗೆ, ಬಿಲಿಬಿಲಿ ಚೀನಾದ ದೇಶದಾಗಿದ್ದು, ಅಲ್ಲಿನ ಯುವ ಬಳಕೆದಾರರ ನಡುವೆ ಹೆಚ್ಚು ಜನಪ್ರಿಯವಾಗಿದೆ. ಆರಂಭದಲ್ಲಿ ಅನಿಮೆ, ಗೇಮಿಂಗ್ ಮತ್ತು ಕಾಮಿಕ್ಸ್‌ಗೆ ಸಂಬಂಧಿಸಿದ ವಿಷಯಗಳಿಗೆ ಈ ವೇದಿಕೆ ಹೆಸರಾಗಿತ್ತು. ಇದೀಗ ಗೇಮಿಂಗ್, ತಂತ್ರಜ್ಞಾನ, ಸಂಗೀತ, ಶಿಕ್ಷಣ, ಮನರಂಜನೆ ಸೇರಿದಂತೆ ಹಲವು ವಿಭಾಗಗಳ ವಿಡಿಯೊಗಳು ಇದರಲ್ಲಿ ಅಪ್ಲೋಡ್ ಆಗುತ್ತಿದೆ.
ಅಪ್ಲೋಡ್ ಆಗುವ ಕಂಟೆಂಟ್ನ್ನ ನೋಡುವುದರೆ ಜೊತೆಗೆ ಅದಕ್ಕೆ ತಕ್ಕುದಾದ ಕಮೆಂಟ್ ನ್ನ ಹಾಕಬಹುದು. ಆ ಮೂಲಕ ಆ ಕಂಟೆಂಟ್ನ್ನ ನೋಡುತ್ತಿರುವ ಸಮುದಾಯದ ಜೊತೆಗೆ ಚಾಟ್ ಆರಂಭಿಸಬಹದು ಎಂದು ಬಿಲಿಬಿಲಿ ಹೇಳಿಕೊಳ್ಳುತ್ತಿದೆ. ಚೀನಾದಿಂದ ಹೊರಗಿನ ರಾಷ್ಟ್ರಗಳಲ್ಲಿ ಇದು ಯಾವ ರೀತಿಯಲ್ಲಿ ರೆಸ್ಪಾನ್ಸ್ ಮಾಡುತ್ತದೆ ಎಂಬುದನ್ನ ಇನ್ನಷ್ಟೆ ನೋಡಬೇಕಿದೆ.
