chikmagalur to tirupati train ಜೂನ್​ 28 : ಚಿಕ್ಕಮಗಳೂರು ಟು ತಿರುಪತಿಗೆ ನೂತನ ರೈಲು : ವಾರದಲ್ಲಿ ಈ ಒಂದು ದಿನ ಮಾತ್ರ ಸಂಚಾರ

ಹಂಚಿಕೊಳ್ಳಿ
WhatsApp Facebook X Telegram
Yesvantpur Talguppa SWR Special Train Shimoga Talaguppa Train Cancelled Shivamogga Train Timings Special Train South Western Railway train changes, Baiyyappanahalli yard work, train cancellations September 2025, train diversions SWR, train regulation Bangalore, SWR press release, train status check, SWR ticket booking, train schedule SWR, ಬೆಂಗಳೂರು ರೈಲು, ಬೈಯಪ್ಪನಹಳ್ಳಿ ಯಾರ್ಡ್, ರೈಲು ಮಾರ್ಗ ಬದಲಾವಣೆ, ರೈಲು ವೇಳಾಪಟ್ಟಿ Talaguppa-Yeshvantpur train
Yesvantpur Talguppa SWR Special Train Shimoga Talaguppa Train Cancelled TShivamogga Train Timings alaguppa-Yeshvantpur train

chikmagalur to tirupati train : ಚಿಕ್ಕಮಗಳೂರಿನಿಂದ  ತಿರುಪತಿಗೆ ನೂತನ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಬಗ್ಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ ತಮ್ಮ ಟ್ವೀಟರ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ತಮ್ಮ ಟ್ವೀಟರ್​​ ಖಾತೆಯಲ್ಲಿ ಬರೆದುಕೊಂಡಿರುವ ಅವರು ತಿರುಪತಿಯ ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ಪ್ರಯಾಣಿಸುವ ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ವಾರದ ರೈಲಿನ (Weekly Train) ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಗುರುವಾರ ತಿರುಪತಿಯಿಂದ ಚಿಕ್ಕಮಗಳೂರಿಗೆ  ಹಾಗೂ ಪ್ರತಿ ಶುಕ್ರವಾರ ಚಿಕ್ಕಮಗಳೂರಿನಿಂದ ತಿರುಪತಿಗೆ ಈ ರೈಲು ಸಂಚರಿಸಲಿದೆ.ಈ ಭಾಗದ ಜನತೆ ಈ ರೈಲಿನ ಸೌಲಭ್ಯ ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ ಎಂದಿದ್ದಾರೆ.

chikmagalur to tirupati train ಇನ್ನೂ ಈ ರೈಲಿನ ವಿವಿರ ಹಾಗೂ ನಿಲ್ದಾಣಗಳನ್ನು ನೋಡುವುದಾದರೆ. 

ರೈಲಿನ ವಿವರ

ತಿರುಪತಿಯಿಂದ ಚಿಕ್ಕಮಗಳೂರಿಗೆ  17423 ಸಂಖ್ಯೆಯ ರೈಲು ಪ್ರತಿ ಗುರುವಾರ ರಾತ್ರಿ 09 ಗಂಟೆಗೆ ತಿರುಪತಿಯಿಂದ ಹೊರಡಲಿದ್ದು, ಮರುದಿನ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಚಿಕ್ಕಮಗಳೂರು ತಲುಪಲಿದೆ.

ಚಿಕ್ಕಮಗಳೂರಿನಿಂದ ತಿರುಪತಿ  17424 ಸಂಖ್ಯೆಯ ರೈಲು ಪ್ರತಿ ಶುಕ್ರವಾರ ಸಂಜೆ 05:30ಕ್ಕೆ ಚಿಕ್ಕಮಗಳೂರಿನಿಂದ ಹೊರಡಲಿದ್ದು, ಶನಿವಾರ ಬೆಳಿಗ್ಗೆ 07:40ಕ್ಕೆ ತಿರುಪತಿ ತಲುಪಲಿದೆ.

ನಿಲ್ದಾಣಗಳು ಹೀಗಿವೆ

ಚಿತ್ತೂರು, ಕಟ್ಟಾಡಿ, ಕುಪ್ಪಂ, ಬಂಗಾರಪೇಟೆ, ವೈಟ್‌ಫೀಲ್ಡ್, ಕೆ ಆರ್ ಪುರಂ, ಎಸ್‌ಎಂವಿಬಿ ಬೆಂಗಳೂರು, ಚಿಕ್ಕ ಬಾಣಾವರ, ತುಮಕೂರು, ತಿಪಟೂರು, ಅರಸೀಕೆರೆ, ದೇವನೂರು, ಬಿರೂರು, ಕಡೂರು, ಬಿಸಲೇಹಳ್ಳಿ, ಸಕರಾಯಪಟ್ಟಣ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor