ಕೆಎಸ್‌ಆರ್‌ಟಿಸಿ ಬಸ್‌ನ ಟಯರ್ ಸ್ಫೋಟ; ಅನಾಹುತ ಜಸ್ಟ್ ಮಿಸ್!

ಹಂಚಿಕೊಳ್ಳಿ
WhatsApp Facebook X Telegram
KSRTC Bus Tyre Bursts Near Kommanalu in Shivamogga, Passengers Safe
KSRTC Bus Tyre Bursts Near Kommanalu in Shivamogga, Passengers Safe

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಾಲೂಕಿನ ಕೊಮ್ಮನಾಳು ಬಳಿ ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗದ ಟಯರ್ ಬ್ಲಾಸ್ಟ್ ಆದ ಘಟನೆ ನಿನ್ನೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ. ಆದರೆ ಬಸ್​ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಹಾಗೊಂದು ವೇಳೆ ಡ್ರೈವರ್​ನ ಕಂಟ್ರೋಲ್​ಗೆ ಸಿಗದೇ ಹೋಗಿದ್ದರೇ ಬಸ್​ ಮಗುಚಿ ಬೀಳುವ ಅಪಾಯವಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಸುತ್ತುಕೋಟೆಯಿಂದ ಬೂದಿಗೆರೆ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನ ಟಯರ್​ ಕೊಮ್ಮನಾಳು ಸಮೀಪ ತಲುಪುತ್ತಿದ್ದಂತೆ ಸ್ಫೋಟಗೊಂಡಿದೆ. ಪರಿಣಾಮ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಟಯರ್ ಸ್ಫೋಟಗೊಂಡ ತಕ್ಷಣ ಪರಿಸ್ಥಿತಿಯನ್ನು ಅರಿತ ಚಾಲಕ, ಬಸ್ ಮಗುಚಿ ಬೀಳದಂತೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನಗಳಿಗೆ ಡಿಕ್ಕಿಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಬಸ್ ರಸ್ತೆ ಬದಿಯ ಚರಂಡಿಗೆ ಇಳಿದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರಿಗೆ ನೆರವಾಗಿದ್ದಾರೆ. ನಂತರ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor