ದನಕರು ಎಮ್ಮೆಕೋಣಗಳನ್ನ ತೆರವುಗೊಳಿಸಲು ಜೆಸಿಬಿ ಸಮೇತ ಬಂದ ಟ್ರಾಫಿಕ್​ ಪೊಲೀಸ್​

ಹಂಚಿಕೊಳ್ಳಿ
WhatsApp Facebook X Telegram
cattle and shop ramps removed from roads and footpaths in Shivamogga
cattle and shop ramps removed from roads and footpaths in Shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಮ್ಮೂರು ಅಂದರೆನೆ ಹಾಗೆ, ಇಲ್ಲಿ ಧನಕರಗಳನ್ನ ಬಿಟ್ಟೊಡದೇ ಅಭ್ಯಾಸ! ಅದು ಮನೆಗೆ ಬಂದಾಗ ಹಾಲು ಕರೆದು ಮತ್ತೆ ಬಿಟ್ಟೋಡೆಯೋದು ಮಾಮೂಲು, ಘಟ್ಟದ ಊರಲ್ಲಿ ಈ ಪದ್ದತಿಯು ಕಡಿಮೆ ಆಗಿದೆ, ಹುಲಿ ತಿಂದಾವು ಅನ್ನುವ ಭಯಕ್ಕಿಂತ, ಮನುಷ್ಯರು ಹಿಡ್ಕೊಂಡು ಹೋಗ್ತಾರೆ ಅನ್ನೋ ಭಯಕ್ಕೆ ಹಳ್ಳಿಗಳಲ್ಲಿ ಕಟ್ಟಿ ಸಾಕುವ ಕೆಲಸ ಆಗ್ತಿದೆ.

ಆದರೆ ಸಿಟಿಯಲ್ಲಿ ಈ ದನ ಕರ ಸಾಕಿಕೊಂಡವರು ಅವುಗಳನ್ನ ಮನೆ ಮುಂದಿನ ಪುಟ್​ಪಾತ್​ನಲ್ಲಿಯೇ ಕಟ್ಟಿ ಸಾಕುತ್ತಿದ್ದಾರೆ. ಇದು ಸಹ ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ. ಅಗಲವಾದ ರಸ್ತೆಯಲ್ಲಿ ಡಿವೈಡರ್​ ಸ್ವಲ್ಪ ಅಗಲವಿದ್ದರೆ ಅದೇ ಬಯಲು ದನದ ಕೊಟ್ಟಿಗೆ ಅನ್ನೋದರಲ್ಲಿ ಅನುಮಾನವಿಲ್ಲ! ಬೇಕಾದರೆ ಏರ್​ಪೋರ್ಟ್​ಗೆ ಹೋಗುವ ಹೈವೇಗಳಲ್ಲಿ ಈ ದೃಶ್ಯಗಳನ್ನ ಕಾಣ ಬಹುದು. ಇನ್ನೂ ಸಿಟಿಯೊಳಗೂ ಇಂತಹ ಸೀನ್​ಗೇನು ಕಡಿಮೆಯಿಲ್ಲ. ಮನೆ ಎದುರಿಗೆ ಪುಟ್​ಪಾತ್ ಖಾಲಿಯಿದ್ದರೇ, ದನ ಕಟ್ಟಿ ಅಲ್ಲಿಯೇ ಅದರ ದೈನಂದಿನ ಚಾಕರಿ ನಡೆಸ್ತಾರೆ. ಪಾಪದ್ದು ಕಾಮದೇನು ಅಲ್ವೇ ಹಾಗಾಗಿ ಉಳಿದವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ದನಕರು ಎಮ್ಮೆಕೋಣಗಳನ್ನ ತೆರವುಗೊಳಿಸಿದ ಪೊಲೀಸರು

ಆದರೆ ನಿನ್ನೆದಿನ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಇಂತಹ ದನಕರಗಳನ್ನ ತೆರವುಗೊಳಿಸಲು ಜೆಸಿಬಿ ಹಿಡಿದುಕೊಂಡೇ ಬಂದಿದ್ದರು. ನೇರವಾಗಿ ವೆಂಕಟೇಶನಗರದಲ್ಲಿ ಚಾನಲ್ ಏರಿ ಹತ್ತರ ಬಂದ ಟ್ರಾಫಿಕ್​ ಇನ್​ಸ್ಪೆಕ್ಟರ್ ದೇವರಾಜ್​ರವರ ತಂಡ, ಅಲ್ಲಿ ಕಟ್ಟಿದ್ದ ದನಕರಗಳನ್ನ, ಎಮ್ಮೆ ಕೋಣಗಳನ್ನ ತೆರವುಗೊಳಿಸದರು. ಟ್ಯಾಂಕ್​ ನೀರು ತರಿಸಿ, ಕ್ಲೀನ್ ಮಾಡಿಸಿದರು, ತಳ್ಳು ಗಾಡಿಗಳು, ಸೆಂಟ್ರಿಂಗ್​ ಐಟಂಗಳನ್ನ ತೆಗೆಸಿ ಚಾನಲ್​ ಬದಿಯ ಪುಟ್​ ಪಾತ್ ಸಾಪ್ ಸಪಾಯಿ ಮಾಡಿಸಿದ್ರು. ಚಾನಲ್​ ಬದಿಯನ್ನ ತಮ್ಮ ಮನೆಯ ಸ್ಟೋರ್​ ರೂಮ್​ ಮಾಡಿಕೊಂಡಿದ್ದವರಿಗೆ ಇನ್ಮೇಲೆ ಹಾಗಲ್ಲ ಮಾಡಿಕೊಳ್ಳುವಂತಿಲ್ಲ ಎಂದು ಎಚ್ಚರಿಸಿದ್ರು.

ನಿರ್ಮಲ ಆಸ್ಪತ್ರೆ ಹಿಂಭಾಗದಲ್ಲಿರುವ ಚಾನಲ್‌ನಿಂದ ಶರಾವತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಫುಟ್‌ಪಾತ್ ಭಾಗವನ್ನು ಒತ್ತುವರಿ ಮಾಡಿಕೊಂಡು ದನಗಳನ್ನು ಕಟ್ಟಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸಂಚಾರ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಚಾನಲ್ ಏರಿ ಮೇಲಿನ ರಸ್ತೆ ಮತ್ತು ಫುಟ್‌ಪಾತ್‌ನಲ್ಲಿ ಕಟ್ಟಲಾಗಿದ್ದ ದನಗಳನ್ನು ತೆರವುಗೊಳಿಸಿದರು.

ಇದೇ ವೇಳೆ ಲಕ್ಷ್ಮೀ ಟಾಕೀಸ್‌ನಿಂದ ಜೈಲ್ ಸರ್ಕಲ್‌ವರೆಗೆ ರಸ್ತೆ ಹಾಗೂ ಫುಟ್‌ಪಾತ್ ಭಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಹಣ್ಣಿನ ಅಂಗಡಿಗಳು ಸೇರಿದಂತೆ ವಿವಿಧ ಅಂಗಡಿಗಳ ರ‍್ಯಾಂಪ್‌ಗಳನ್ನು ಕೂಡ ತೆರವುಗೊಳಿಸಲಾಯಿತು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor