ಹುಂಚದ ಕಟ್ಟೆ ಬಳಿ ಬೈಕ್​ ಅಪಘಾತ! ಇಬ್ಬರಿಗೆ ಪೆಟ್ಟು ! ಓರ್ವ ಗಂಭೀರ

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS

ತೀರ್ಥಹಳ್ಳಿ/  ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗಜಿಲ್ಲೆ  ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಬಳಿ ನಡೆದಿದೆ. 

ಕೊಪ್ಪದಿಂದ ಸಾಗರಕ್ಕೆ ತೆರಳುತಿದ್ದ ಸ್ಕೂಟಿ ಹಾಗೂ ಗರ್ತಿಕೆರೆಯಿಂದ ಕೋಣಂದೂರು ಕಡೆಗೆ ತೆರಳುತಿದ್ದ ಬಜಾಜ್ CT 100 ಬೈಕ್ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಸಾಗರ ನಿವಾಸಿ ಶ್ರೀನಿವಾಸ್(61) ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಇನ್ನೊಂದು  ಬೈಕ್ ನಲ್ಲಿದ್ದ ಗರ್ತಿಕೆರೆ ಮೂಲದ ಅಭಿ(23) ಎಂಬಾತನಿಗೂ ಪೆಟ್ಟಾಗಿದೆ. ಇಬ್ಬರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.  


ಬೈಕ್​ ತಾಗಿದ್ದಕ್ಕೆ ಸೀಗೆಹಟ್ಟಿಯಲ್ಲಿ ಅನ್ಯಕೋಮಿನ ಗುಂಪಿನ ನಡುವೆ ಕಿರಿಕ್! ದಾಖಲಾಯ್ತು ಸುಮೋಟೋ ಕೇಸ್!

ಶಿವಮೊಗ್ಗ/ ನಗರದ ಸೀಗೇಹಟ್ಟಿಯಲ್ಲಿ ನಡೆದ ಅನ್ಯಕೋಮಿನ ಹುಡುಗರ ನಡುವಿನ ಗಲಾಟೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ಆಗಿದೆ. ಸುಮೋಟೊ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಓರ್ವ ಹಿಂದು ಹಾಗೂ ಹೆಸರು ದಾಖಲಿಸದ ಮುಸ್ಲಿಮ್ ಹುಡುಗರ ವಿರುದ್ಧ ಎಫ್ಐಆರ್​ ದಾಖಲಿಸಿದ್ದಾರೆ. 

ನಡೆದಿದ್ದೇನು? 

ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿರುವ ಎಫ್​ಐಆರ್​ನ ಪ್ರಕಾರ, ಈ ಘಟನೆ ಕಳೆದ ಜೂನ್ ಆರರಂದು ನಡೆದಿದೆ. ಪೊಲೀಸರು ಗಸ್ತಿನಲ್ಲಿದ್ದ ವೇಳೆ  ಸೀಗೇಹಟ್ಟಿ ಸರ್ಕಲ್ ಬಳಿ ಇರುವ ಮೌಂಟೇನ್ ಸ್ಕೂಲ್ ಹತ್ತಿರ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸ್ತಿರುವುದು ಕಂಡು ಬಂದಿದೆ. ರಸ್ತೆಯಲ್ಲಿ ಪರಸ್ಪರ ಬೈಕ್ ತಾಗಿದ ಕಾರಣಕ್ಕೆ ಯುವಕರ ಗುಂಪಿನ ನಡುವೆ ಕಿತ್ತಾಟ ಆರಂಭವಾಗಿದೆ. ಇದನ್ನ ಗಮನಿಸಿದ ಪೊಲೀಸರು ಸ್ಥಳಕ್ಕೆ ಹೋಗುತ್ತಲೇ ಸ್ತಳದಿಂದ ಯುವಕರ ಗುಂಪು ಓಡಿ ಹೋಗಿದೆ. ಇನ್ನೂ ಈ ಸಂಬಂಧ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ತರುವ ಪ್ರಯತ್ನದ ಆರೋಪದ ಅಡಿಯಲ್ಲಿ IPC 1860 (U/s-160) ನಡಿಯಲ್ಲಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 


 

Leave a Comment