BIG NEWS SHIVAMOGGA | ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಕರಡಿ ಪ್ರತ್ಯಕ್ಷ! ವ್ಯಕ್ತಿಯ ಮೇಲೆ ದಾಳಿ

This Article Written by / Malenadu Today / ಫೆಬ್ರವರಿ 28, 2024

SHIVAMOGGA  Feb 28, 2024 ವಿಶೇಷ ಅಂದರೆ  ಶಿವಮೊಗ್ಗ ಸಿಟಿಯಲ್ಲಿ ಕರಡಿ ಪ್ರತ್ಯಕ್ಷವಾಗಿರುವ ಬಗ್ಗೆ ವರದಿಯಾಗಿದೆ. 

ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ಘಟನೆ ನಡೆದಿದೆ. ವಾಕಿಂಗ್‌ಗೆ ತೆರಳಿದ್ದ ವ್ಯಕ್ತಿ ಮೇಲೆ  ದಾಳಿ ಮಾಡಿದ ಕರಡಿ  ಹೊಟ್ಟೆ ಭಾಗವನ್ನ ಪರಚಿ ಪರಾರಿಯಾಗಿದೆ. 

Malenadu Today Shivamogga

ಇಂದು ಬೆಳಗ್ಗೆ ಗೋಪಾಲಗೌಡ ಬಡಾವಣೆಯ ಎಫ್‌ ಬ್ಲಾಕ್‌ನಲ್ಲಿರವ ಡಿವಿಜಿ ಪಾರ್ಕ್‌ ಸಮೀಪ  ವ್ಯಕ್ತಿಯೊಬ್ಬರು ವಾಕ್ ಮಾಡುತ್ತಿದ್ದಾಗ ಅವರಿಗೆ ಕರಡಿ ಕಾಣಿಸಿದೆ. ನಾಯಿಗಳು ಕರಡಿಯನ್ನು ಅಟ್ಟಿಸಿಕೊಂಡು ಬರುತ್ತಿರುವುದನ್ನ  ಅವರು ಗಮನಿಸಿದ್ದಾರೆ. ಈ ವೇಳೆ ಕರಡಿ ತುಕಾರಾಂ ಎಂಬವರ ಹೊಟ್ಟೆ ಭಾಗದಲ್ಲಿ ಪರಚಿ ಅಲ್ಲಿಂದ ಓಡಿ ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಕೂಂಬಿಂಗ್ ನಡೆಸ್ತಿದ್ದಾರೆ.

Malenadu Today Shivamogga

  

ಮುಂದಿನ ಸುದ್ದಿ ಒದಿ

Leave a Comment