ಭದ್ರಾವತಿಯಲ್ಲಿ ದರೋಡೆಗೆ ಸ್ಕೆಚ್ ಕೇಸ್! ಕಡೆಕಲ್ ಅಬೀದ್ ಸೇರಿ ಐವರಿಗೆ 10 ವರುಷ ಶಿಕ್ಷೆ

Bhadravati Robbery Conspiracy Case Five ಶಿವಮೊಗ್ಗ : ಭದ್ರಾವತಿಯಲ್ಲಿ ದರೋಡೆಗೆ ಸ್ಕೆಚ್​ ಹಾಕಿದ ಪ್ರಕರಣದಲ್ಲಿ ಟಿಪ್ಪು ನಗರದ ನಿವಾಸಿಗಳು ಸೇರಿದಂತೆ ಒಟ್ಟು ಐವರು ಅಪರಾಧಿಗಳಿಗೆ ಕೋರ್ಟ್ 10 ವರ್ಷ ಕಠಿಣ ಸಜೆ ಮತ್ತು ದಂಡ ವಿಧಿಸಿದೆ 

ಭದ್ರಾವತಿ ದರೋಡೆ ಸಂಚು ಪ್ರಕರಣ:ಕಡೆಕಲ್ ಅಬೀದ್ ಸೇರಿ  ಐವರು ಅಪರಾಧಿಗಳಿಗೆ 10 ವರ್ಷ ಕಠಿಣ ಸಜೆ Bhadravati Robbery Conspiracy Case Five Convicted to 10 Years Rigorous
ಭದ್ರಾವತಿ ದರೋಡೆ ಸಂಚು ಪ್ರಕರಣ:ಕಡೆಕಲ್ ಅಬೀದ್ ಸೇರಿ  ಐವರು ಅಪರಾಧಿಗಳಿಗೆ 10 ವರ್ಷ ಕಠಿಣ ಸಜೆ Bhadravati Robbery Conspiracy Case Five Convicted to 10 Years Rigorous

ಭದ್ರಾವತಿಯಲ್ಲಿ ದಿನಾಂಕ 01-02-2019 ರಂದು ನಡೆದಿದ್ದ ಪ್ರಕರಣ/Bhadravati Robbery Conspiracy Case Five

ಭದ್ರಾವತಿಯ ಗೋಂದಿ ಕೈಮರದ ಬಳಿ ನಡೆದಿದ್ದ ಘಟನೆ ಇದಾಗಿದದೆ. ದರೋಡೆಗೆ ಸ್ಕೆಚ್​ ಹಾಕುತ್ತಿದ್ದ ಐವರು ಆರೋಪಿತರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ , ಎಲ್ಲಾ ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ 

01-02-2019 ರ ರಾತ್ರಿ ಐವರು ಆರೋಪಿಗಳು ಮರದ ದೊಣ್ಣೆ, ಚಾಕು, ಖಾರದ ಪುಡಿ ಮತ್ತು ರಾಡ್​ಗಳನ್ನ ಬಳಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಅಡ್ಡಹಾಕಲು ಯತ್ನಸ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ರೇಡ್​ ನಡೆಸಿದ್ದ ಪೊಲೀಸರ ಕೈಯಿಂದ ಓರ್ವ ಆರೋಪಿ ತಪ್ಪಿಸಿಕೊಂಡಿದ್ದ. ಉಳಿದವರನ್ನ ಬಂಧಿಸಿದ್ದ ಪೊಲೀಸರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 399 ಮತ್ತು 402 ರ ಅಡಿಯಲ್ಲಿ ಕೇಸ್​ ದಾಖಲಿಸಿದ್ದರು. ಆನಂತರ ಅಂದಿನ ತನಿಖಾಧಿಕಾರಿ ಎಎಸ್ಐ ಹುಚ್ಚಪ್ಪ ಆರೋಪಿಗಳ ವಿರುದ್ಧ  ಚಾರ್ಜ್​ಶೀಟ್​ ಸಲ್ಲಿಸಿದ್ದರು. ಕೋರ್ಟ್​ನಲ್ಲಿ ಪ್ರಕರಣದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ  ವಾದ ಮಂಡಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್  ನಿನ್ನೆ ದಿನ ಅಂದರೆ, 03-01-2026 ರಂದು ತೀರ್ಪು ನೀಡಿದ್ದಾರೆ. ಶಿವಮೊಗ್ಗದ ಟಿಪ್ಪು ನಗರದ ಇಮ್ರಾನ್ ಷರೀಫ್ (33), ಹನೀಫುಲ್ಲಾ ಖಾನ್ (22) ಹಾಗೂ ಕಡೇಕಲ್ಲಿನ ಅಬೀದ್ ಖಾನ್ (35), ಮುಜಾಹಿದ್ (40) ಮತ್ತು ನಸ್ರುಲ್ಲಾ (29) ಗೆ ಶಿಕ್ಷೆ ವಿಧಿಸಿದ್ದಾರೆ. 

ಭದ್ರಾವತಿ ದರೋಡೆ ಸಂಚು ಪ್ರಕರಣ:ಕಡೆಕಲ್ ಅಬೀದ್ ಸೇರಿ  ಐವರು ಅಪರಾಧಿಗಳಿಗೆ 10 ವರ್ಷ ಕಠಿಣ ಸಜೆ Bhadravati Robbery Conspiracy Case Five Convicted to 10 Years Rigorous

ಭದ್ರಾವತಿ ಕೋರ್ಟ್ ತೀರ್ಪಲ್ಲಿ ಏನಿದೆ/Bhadravati Robbery Conspiracy Case Five

ಐಪಿಸಿ ಕಲಂ 399 ರ ಅಡಿಯಲ್ಲಿ 10 ವರ್ಷ ಕಠಿಣ ಸಜೆ ಮತ್ತು ತಲಾ 50,000 ರೂಪಾಯಿ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 5 ತಿಂಗಳು ಸಾದಾ ಸೆರೆವಾಸ ವಿಧಿಸಿದೆ. ಹಾಗೆಯೇ ಐಪಿಸಿ ಕಲಂ 402 ರ ಅಡಿಯಲ್ಲಿ 7 ವರ್ಷ ಕಠಿಣ ಸಜೆ ಮತ್ತು ತಲಾ 30,000 ರೂಪಾಯಿ ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲರಾದರೆ 3 ತಿಂಗಳು ಸಾದಾ ಸಜೆ ಅನುಭವಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದೆ.

 ಸೂಚನೆ : ಕೋರ್ಟ್​ ತೀರ್ಪಿಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕಟಣೆಯ ಸುದ್ದಿ ಇದಾಗಿದೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಭದ್ರಾವತಿ ದರೋಡೆ ಸಂಚು ಪ್ರಕರಣ:ಕಡೆಕಲ್ ಅಬೀದ್ ಸೇರಿ  ಐವರು ಅಪರಾಧಿಗಳಿಗೆ 10 ವರ್ಷ ಕಠಿಣ ಸಜೆ Bhadravati Robbery Conspiracy Case Five Convicted to 10 Years Rigorous

ಭದ್ರಾವತಿ ದರೋಡೆ ಸಂಚು ಪ್ರಕರಣ:ಕಡೆಕಲ್ ಅಬೀದ್ ಸೇರಿ  ಐವರು ಅಪರಾಧಿಗಳಿಗೆ 10 ವರ್ಷ ಕಠಿಣ ಸಜೆ Bhadravati Robbery Conspiracy Case Five Convicted to 10 Years Rigorous

malenadutoday add

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು