ಶಿವಮೊಗ್ಗ : ಭದ್ರಾವತಿಯ ಡಾಂಬರು ವ್ಯಾಪಾರಿಯೊಬ್ಬರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ (NHAI) ನೋಂದಣಿ ಮಾಡಿಸಿಕೊಡುವುದಾಗಿ ನಂಬಿಸಿ ಬರೋಬ್ಬರಿ 31,06,300 ರೂಪಾಯಿಗಳನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್ (CEN) ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯುವ ಕಾಂಗ್ರೆಸ್ನಿಂದ ರೈಲು ತಡೆಗೆ ಯತ್ನ, ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ, ಕಾರಣವೇನು
Bhadravathi ಘಟನೆಯ ವಿವರ
ದೂರುದಾರರಿಗೆ ಸುಮಾರು ಐದು ವರ್ಷಗಳ ಹಿಂದೆ ಜಸ್ಟ್ ಡಯಲ್ (Justdial) ಮೂಲಕ ಹನಿಸಿಂಗ್ ಸಬರ್ ವಾಲ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆತ ತಾನು ಕಂಪನಿಯೊಂದರ ಎಂಬ ಕಂಪನಿಯ ಎಂ.ಡಿ ಎಂದು ಪರಿಚಯಿಸಿಕೊಂಡಿದ್ದನು. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಾಪಾರಿಗೆ ಕರೆ ಮಾಡಿದ ಆತ, ತಾನು ಕರ್ನಾಟಕದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು, ಅದಕ್ಕೆ ಬೇಕಾದ ಡಾಂಬರು ಪೂರೈಕೆ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದನು.
ನಂತರ ನೋಂದಣಿ ಪ್ರಕ್ರಿಯೆಯ ನೆಪದಲ್ಲಿ ವಂಚಕರು ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಿ, ಹಂತ ಹಂತವಾಗಿ ಹಣ ಪಾವತಿಸುವಂತೆ ಹೇಳಿದ್ದಾರೆ. ಇದನ್ನು ನಂಬಿದ ವ್ಯಾಪಾರಿಯು ಸೆಪ್ಟೆಂಬರ್ 30 ರಿಂದ ಡಿಸೆಂಬರ್ 22ರ ಅವಧಿಯಲ್ಲಿ ಆರೋಪಿಗಳು ನೀಡಿದ್ದ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗೆ ಒಟ್ಟು 31,06,300 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಇಷ್ಟು ಹಣ ಪಾವತಿಸಿದರೂ ಯಾವುದೇ ನೋಂದಣಿ ಪತ್ರ ನೀಡದ ಆರೋಪಿಗಳು, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಹಣ ನೀಡಿದರೂ ಕೆಲಸವಾಗದಿದ್ದಾಗ ಮತ್ತು ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದಾಗ ಅನುಮಾನಗೊಂಡ ವ್ಯಾಪಾರಿಯು ತಮ್ಮ ಸ್ನೇಹಿತರೊಡನೆ ಚರ್ಚಿಸಿದ್ದಾರೆ. ಆಗ ತಮಗೆ ವಂಚನೆಯಾಗಿರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆ ಶಿವಮೊಗ್ಗದ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
