ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆ : ರಾಂಗ್​ ಸೈಡಲ್ಲಿ ಕಾರಿಗೆ ಅಡ್ಡ ಬಂದು ಮಹಿಳೆಗೆ ಕಿರಿಕಿರಿ, ಆಟೋ ಚಾಲಕರಿಬ್ಬರಿಗೆ ದಂಡ ಎಚ್ಚರಿಕೆ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಟ್ರಾಫಿಕ್ ಪೊಲೀಸ್

ಶಿವಮೊಗ್ಗ / ಸಾರ್ವಜನಿಕರ ದೂರುಗಳಿಗೆ ಶಿವಮೊಗ್ಗ ಪೊಲೀಸರು ತಕ್ಷಣ ಸ್ಪಂದಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಘಟನೆಯೊಂದು ವರದಿಯಾಗಿದೆ. ಶಿವಮೊಗ್ಗ ಟ್ರಾಫಿಕ್ ಪೊಲೀಸರು ಈ ಬಗ್ಗೆ ಮಾಹಿತಿ ಪ್ರಕಟಿಸಿದ್ದಾರೆ. ಮಹಿಳೆಯೊಬ್ಬರಿಗೆ ದಾರಿ ಬಿಡದೆ ಕಿರಿಕಿರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋಚಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ

ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆ

ಟ್ರಾಫಿಕ್ ಪೊಲೀಸ್ ಫೇಸ್​ ಬುಕ್ ಪೋಸ್ಟ್​ನ ಮಾಹಿತಿ ಪ್ರಕಾರ, ದಿನಾಂಕ 06-04-2026 ರಂದು ನಗರದ ಉಷಾ ನರ್ಸಿಂಗ್ ಹೋಂ ವೃತ್ತದ ಬಳಿ ನಡೆದ ಘಟನೆ ಇದು. ರಾಂಗ್ ಸೈಡ್​ನಲ್ಲಿ ಆಟೋ ಚಲಾಯಿಸಿಕೊಂಡು ಬಂದ ಆಟೋ ಚಾಲಕರಿಬ್ಬರು ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಸೈಡ್ ನೀಡಿಲ್ಲ. ಮೇಲಾಗಿ ಕಾರು ಚಲಾಯಿಸುತ್ತಿದ್ದ ಮಹಿಳೆಗೆ ದಾರಿ ಬಿಡದೆ ಅನುಚಿತವಾಗಿ ವರ್ತಿಸಿದ ಬಗ್ಗೆ ಆರೋಪ ಕೇಳಿಬಂದಿದೆ.

ಶಾಲೆಯಿಂದ ತನ್ನ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ, ಆಟೋ ಚಾಲಕರಿಬ್ಬರು ರಾಂಗ್ ಸೈಡ್‌ನಲ್ಲಿ ಬಂದು ಕಾರಿಗೆ ಅಡ್ಡ ನಿಲ್ಲಿಸಿ ತೊಂದರೆ ಕೊಟ್ಟಿದ್ದರು ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣ ಆಕ್ಷನ್​ ತೆಗೆದುಕೊಂಡ ಟ್ರಾಫಿಕ್ ಪೊಲೀಸರು ಇಬ್ಬರೂ ಆಟೋ ಚಾಲಕರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.

ಮಹಿಳೆಯ ಕಾರಿಗೆ ದಾರಿ ಬಿಡದೆ ತಡೆಯೊಡ್ಡಿದ್ದಲ್ಲದೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಭಾರತೀಯ ಮೋಟಾರು ವಾಹನ ಕಾಯ್ದೆಯ (ಐ.ಎಂ.ವಿ ಕಾಯ್ದೆ) ಅಡಿಯಲ್ಲಿ ದಂಡ ವಿಧಿಸಿರುವ ಪೊಲೀಸರು, ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆ  ರಾಂಗ್​ ಸೈಡಲ್ಲಿ  ಕಾರಿಗೆ ಅಡ್ಡ ಬಂದು ಮಹಿಳೆಗೆ ಕಿರಿಕಿರಿ, ಆಟೋ ಚಾಲಕರಿಬ್ಬರಿಗೆ ದಂಡ ಎಚ್ಚರಿಕೆ Auto Drivers Fined for Misbehaving with Woman Car Driver
ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆ ರಾಂಗ್​ ಸೈಡಲ್ಲಿ ಕಾರಿಗೆ ಅಡ್ಡ ಬಂದು ಮಹಿಳೆಗೆ ಕಿರಿಕಿರಿ, ಆಟೋ ಚಾಲಕರಿಬ್ಬರಿಗೆ ದಂಡ ಎಚ್ಚರಿಕೆ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor