ಸಾರ್ವಜನಿಕ ಸ್ಥಳದಲ್ಲಿ ಚಾಕು ಹಿಡಿದು ಬೆದರಿಕೆ/ ಹಿಡಿಯಲು ಬಂದ ಪೊಲೀಸ್​ಗೆ ಇರಿಯಲು ಯತ್ನ!

KARNATAKA NEWS/ ONLINE / Malenadu today/ May 6, 2023 GOOGLE NEWS

ಭದ್ರಾವತಿ/ ಶಿವಮೊಗ್ಗ/  ಇಲ್ಲಿನ ಸಿಂಗನಮನೆ ಗ್ರಾಮದಲ್ಲಿ ಯುವಕನೊಬ್ಬ ಮತ್ತಿನಲ್ಲಿ ಚಾಕು ಹಿಡಿದು ಸಾರ್ವಜನಿಕರಿಗೆ ಹೆದರಿಸಿದ್ದಷ್ಟೆ ಅಲ್ಲದೆ, ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಯತ್ನಿಸಿ ಇರಿಯಲು ಮುಂದಾದ ಘಟನೆ ನಡೆದಿದೆ. ಈ ಸಂಬಂಧ 05-05-2023 ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್​ಎಫ್​ಐಆರ್ ಆಗಿದೆ. 

ನಡೆದಿದ್ದೇನು?

ಬಿ.ಆರ್.ಪಿ ಪೊಲೀಸ್ ಉಪಠಾಣೆಯಲ್ಲಿ ಕೆಲಸ ಮಾಡುತ್ತಿದ್ದ   ಸುನೀಲ್​ ಎಂಬವರಿಗೆ ಕಳೆದ ನಾಲ್ಕನೇ ತಾರೀಖು ಬಿಆರ್​ಪಿ ಡ್ಯಾಂ  ಬಳಿ ಇರುವ ಚೆಕ್​ಪೋಸ್ಟ್​ನಿಂದ ಅವರ ಸಹೋದ್ಯೋಗಿ ಕರೆ ಮಾಡಿದ್ದಾರೆ. ಸಿಂಗನಮನೆ ಬಳಿ ಇರುವ ದೇವಾಲಯದ ಬಳಿಯಲ್ಲಿ ಯುವಕನೊಬ್ಬ ಸಾರ್ವಜನಿಕರಿಗೆ ಚಾಕು ತೋರಿಸಿ ಹೆದರಿಸ್ತಿದ್ದಾನೆ. ಬೇಗ ಬಾ ಎಂದು ಕರೆದಿದ್ಧಾರೆ. ಸುನೀಲ್ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಶಿವು ಎಂಬಾತ ಕೈಯಲ್ಲಿ ಡ್ರ್ಯಾಗರ್ ಹಿಡಿದು ಹೆದರಿಸ್ತಿರುವುದು ಕಂಡು ಬಂದಿದೆ. 

ತಕ್ಷಣ ಆತನ ಕೈಯಿಂದ ಡ್ರ್ಯಾಗರ್ ಕಿತ್ತುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಸುನೀಲ್​ರಿಗೆ ಹಲ್ಲೆ ಮಾಡಿದ ಶಿವು ಚಾಕುವಿನಿಂದ ಚುಚ್ಚಲು ಮುಂದಾಗಿದ್ದಾನೆ. ಈ ವೇಳೆ ತಪ್ಪಿಸಿಕೊಂಡಿದ್ದರಿಂದ ಅನಾಹುತ ತಪ್ಪಿದೆ. ಇನ್ನೂ ಘಟನೆ ಬೆನ್ನಲ್ಲೆ ಶಿವು ಅಲ್ಲಿಂದ ಪರಾರಿಯಾಗಿದ್ಧಾನೆ. ಸದ್ಯ ಈ ಸಂಬಂಧ ಪೇದೆ ನೀಡಿದ ದೂರಿನನ್ವಯ ಎಫ್​ಐಆರ್ ಆಗಿದೆ. 

ಪ್ರಯಾಣಿಕರಲ್ಲಿ ವಿನಂತಿ/ 2 ದಿನ ಸರ್ಕಾರಿ ಸಾರಿಗೆ ಬಸ್​ ಸಂಚಾರದಲ್ಲಿ ವ್ಯತ್ಯಯ!

ಶಿವಮೊಗ್ಗ Karnataka election/ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ- 09 ಮತ್ತು 10 ರಂದು ಜಿಲ್ಲೆಯಲ್ಲಿ ಸಾರಿಗೆ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು; ಸಹಕರಿಸಲು ಸಾರಿಗೆ ನಿಗಮ ಮನವಿ ಮಾಡಿದೆ. 

ಮೇ-10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ಸಿಬ್ಬಂದಿಗಳನ್ನು ಕರೆದೊಯ್ಯಲು  ಕ.ರಾ.ರ.ಸಾ.ನಿಗಮ ಶಿವಮೊಗ್ಗ ವಿಭಾಗದ ವತಿಯಿಂದ 262 ಬಸ್‍ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ. 

ಆದ್ದರಿಂದ ಮೇ-09 ಮತ್ತು 10 ರಂದು ಜಿಲ್ಲಾ ವ್ಯಾಪ್ತಿಯ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಹಾಗೂ ಶಾಲಾ/ಕಾಲೇಜು ವಿದ್ಯಾರ್ಥಿಗಳು ನಿಗಮದೊಂದಿಗೆ ಸಹಕರಿಸುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೋರಿರುತ್ತಾರೆ.

ಬಿಜೆಪಿಗೂ ತಟ್ಟಿದ ಕೇಸ್/ ಅಮಿತ್ ಶಾ ರೋಡ್​ ಶೋ ಕಾರ್ಯಕ್ರಮದ ವಿಚಾರದಲ್ಲಿ ದಾಖಲಾಯ್ತು ಎಫ್​ಐಆರ್

ಶಿವಮೊಗ್ಗ/ ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಸಾಲು ಸಾಲ ಎಫ್​ಐಆರ್​ಗಳು ರಿಜಿಸ್ಟರ್ ಆಗುತ್ತಿವೆ. ಮತಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಸಂಬಂಧ ಜೆಡಿಎಸ್​, ಉತ್ತಮ ಪ್ರಜಾಕೀಯದ ಅಭ್ಯರ್ಥಿ ವಿರುದ್ಧ ಕೇಸ್ ಆದ ಬೆನ್ನಲ್ಲೆ ಇದೀಗ ಬಿಜೆಪಿ ರಾಷ್ಟ್ರೀಯ ಮುಖಂಡ ಕೇಂದ್ರ ಗೃಹಸಚಿವ ಅಮಿತ್ ಶಾ ಪಾಲ್ಗೊಂಡಿದ್ದ ರೋಡ್​ ಶೋ ಸಂಬಂಧ ಕೇಸ್​ವೊಂದು ದಾಖಲಾಗಿದೆ. 

ದಿನಾಂಕ: 01-05-2023 ರಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಕೇಂದ್ರ ಗೃಹ ಸಚಿವ  ಅಮಿತ್ ಶಾ ರವರ  ರೋಡ್ ಶೋ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಳಾಗಿತ್ತು. 

ಶಿವಮೊಗ್ಗ ನಗರದಲ್ಲಿ ನಡೆದಿದ್ದ ರ್ಯಾಲಿ

ಬಿಹೆಚ್ ರಸ್ತೆಯ ಶಿವಪ್ಪ ನಾಯಕ ಸರ್ಕಲ್ ನಿಂದ ಲಕ್ಷ್ಮಿ ಟಾಕೀಸ್ ವೃತ್ತದವರೆಗೆ ಈ ರೋಡ್​ ಶೋ ಅದ್ದೂರಿಯಾಗಿ ನಡೆದಿತ್ತು.  ಈ ವೇಳೆ ಚುನಾವಣಾ ಪ್ರಚಾರಕ್ಕೆ 4-5 ಜನ ಮಕ್ಕಳನ್ನ ಬಳಸಿಕೊಳ್ಳಲಾಗಿದೆ ಎಂಬ ಆರೋಪದಡಿ ಎಫ್​ಐಆರ್ ದಾಖಲಾಗಿದೆ. 

ಬಿಜೆಪಿ ಪಕ್ಷದ ಬಾವುಟ ಮತ್ತು ಪಕ್ಷದ ಚಿಹ್ನೆಗಳಿರುವ ಶಾಲ್ ಗಳನ್ನು  ಮಕ್ಕಳಿಗೆ ಕೊಟ್ಟು ಅವರನ್ನು ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ರೋಡ್ ಶೋ ಕಾರ್ಯಕ್ರಮಕ್ಕೆ ಬಳಸಿಕೊಂಡಿರುವುದು ವಿಡಿಯೋ ಸರ್ವೆಲೆನ್ಸ್ ತಂಡದವರು ಮಾಡಿರುವ ವಿಡಿಯೋ ಚಿತ್ರೀಕರಣದಲ್ಲಿ ಕಂಡು ಬಂದಿದೆ. 

ಚುನಾವಣಾ ಪ್ರಚಾರದಲ್ಲಿ, ಚಿಕ್ಕ ಮಕ್ಕಳನ್ನು ಬಳಸಿಕೊಳ್ಳುವುದು CHILD LABOUR (PROHIBITION & REGULATION) ACT, 1986 (U/s-14) ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್​ ಸ್ಕ್ವ್ಯಾಡ್​ ತಂಢದ ಅಧಿಕಾರಿಗಳು  ಪರಿಶೀಲನೆ ನಡೆಸಿ ಕಾನೂನ ಕ್ರಮಕ್ಕೆ ಸೂಚಿಸಿದ್ದಾರೆ. ಪ್ರಕರಣ ಸಂಬಂಧ ಆನಂದಪ್ಪ ಎಂಬ ಅಧಿಕಾರಿ ದೂರು ನೀಡಿದ್ದು, ಬಿಜೆಪಿ ಪಕ್ಷದ ಕಾರ್ಯದರ್ಶಿ ವಿರುದ್ಧ, ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್  ಆಗಿದೆ. 

Malenadutoday.com Social media

Leave a Comment