ಆಲೂಗಡ್ಡೆ ಹುಟ್ಟಿದ್ದು ಟೊಮ್ಯಾಟೋದಿಂದಾ? 9 ಮಿಲಿಯನ್ ವರ್ಷಗಳ ಹಿಂದಿನ ಸತ್ಯ!???

ಹಂಚಿಕೊಳ್ಳಿ
WhatsApp Facebook X Telegram
Agricultural Sciences
Agricultural Sciences

Agricultural Sciences ಮಲೆನಾಡು ಟುಡೆ ಸುದ್ದಿ ವಿಶೇಷ : ನಮ್ಮ ವಿಜ್ಞಾನಿಗಳು ಆಗಾಗ ಅಚ್ಚರಿ ಎನ್ನುವಂತಹ ವಿಷಯಗಳನ್ನು ಸಂಶೋಧನೆ ಮಾಡುತ್ತಿರುತ್ತಾರೆ. ಇದೀಗ ಅಂತದ್ದೆ ಒಂದು ಸಂಶೋಧನೆಯನ್ನು ಮಾಡಿದ್ದು, ಆ ವಿಚಾರ ನಿಜಕ್ಕೂ ಹೌದಾ! ಅಂತಾ ಕೇಳುವ ಹಾಗೆ ಮಾಡುತ್ತದೆ. ಏಕೆಂದರೆ, ವಿಜ್ಞಾನಿಗಳ ಸಂಶೋಧನೆಯು ನಮ್ಮ ದಿನನಿತ್ಯದ ಜೀವನದ ಭಾಗವಾಗಿರುವ ವಸ್ತುಗಳ ಮೇಲೆ ನಡೆದಿದೆ. ಅದೇನು? ಇಷ್ಟಕ್ಕೂ ಆ ಸಂಶೋಧನೆಯಾದರೂ ಏನು ಎನ್ನುವುದನ್ನ ಹೇಳುವುದಾದರೆ, ಸದ್ಯ   ನಾವೇನು ಆಲುಗಡ್ಡೆ ಅಥವಾ ಬಟಾಟೆ ಅಂಥಾ ಕರೆಯುತ್ತೇವೆ, ಅದು ಟೊಮ್ಯೋಟಾದಿಂದ ಹುಟ್ಟಿದೆ ಎನ್ನುವಂತಹ ಸಂಶೋಧನೆಯ ಸತ್ಯವನ್ನು ಇತ್ತೀಚೆಗೆ ಕಂಡುಕೊಳ್ಳಲಾಗಿದೆ. 

Agricultural Sciences ಆಲೂಗಡ್ಡೆಯ ಉಗಮದ ಕುರಿತಾಗಿ ಇದ್ದ ರಹಸ್ಯವನ್ನು ಕೃಷಿ ವಿಜ್ಞಾಮನಿಗಳು ಈ ಮೂಲಕ ಬಯಲು ಮಾಡಿದ್ದಾರೆ. ಅಲ್ಲದೆ  ಸುಮಾರು 9 ದಶಲಕ್ಷ ವರ್ಷಗಳ ಹಿಂದೆ ದಕ್ಷಿಣ ಅಮೆರಿಕದಲ್ಲಿ ಟೊಮ್ಯಾಟೊ ತರಹದ ಸಸ್ಯ ಮತ್ತು ಗೆಡ್ಡೆ ಬೆಳೆಯದ ಎಟುಬೆರೋಸಮ್ (Etuberosum,) ಎಂಬ ಸಸ್ಯಗಳಿಂದಾಗಿ ಈ ಆಲೂಗಡ್ಡೆ ಹುಟ್ಟಿಕೊಂಡಿದೆ ಎಂಬುದು ಸದ್ಯ ಹೊರಬಿದ್ದಿರುವ ಹೊಸ ವಾದ. interspecies union ನಿಂದ ಈ ಆಲೂಗಡ್ಡೆ ಹುಟ್ಟಿಕೊಂಡಿತು. ಆನಂತರ ಇದರ ವಿವಿಧ ವೈರೈಟಿಗಳು ಸೃಷ್ಟಿಯಾದವು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ಎರಡು ಜಾತಿಯ ಸಂಯೋಗದಿಂದಾಗಿ ಗಡ್ಡೆ ಬಿಡುವ ಸಸ್ಯವೊಂದು ಉತ್ಪತ್ತಿಯಾಗಿದೆ ಎಂಬುದು ಆಲೂಗಡ್ಡೆ ಜನನ ರಹಸ್ಯದ ವಾದ. ಅಂದಹಾಗೆ, ಈ ಸಂಶೋಧನಾ ಸತ್ಯವನ್ನು  ಚೀನೀ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್‌ನ ಸನ್‌ವೆನ್ ಹುವಾಂಗ್ ನೇತೃತ್ವದ ವಿಜ್ಞಾನಿಗಳ ತಂಡ ಪತ್ತೆಹಚ್ಚಿದೆ.

ಇದನ್ನೂ ಓದಿ : ಶಿವಮೊಗ್ಗವೂ ಸೇರಿ 9 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್! ಬೆಂಗಳೂರಲ್ಲೂ ಮಳೆ ಆರ್ಭಟ! https://malenadutoday.com/yellow-alert-issued-for-9-districts/ 

ಟೊಮ್ಯಾಟೊ ತಳಿಯಿಂದ ಬಂದ SP6A ಜೀನ್ ಗೆಡ್ಡೆ ರಚನೆಯನ್ನು ಪ್ರಾರಂಭಿಸುವ “ಮಾಸ್ಟರ್ ಸ್ವಿಚ್” ಆಗಿ ಕೆಲಸ ಮಾಡುತ್ತದೆ. ಅದೇ ಸಮಯದಲ್ಲಿ, ಎಟುಬೆರೋಸಮ್‌ನಿಂದ ಬಂದ IT1 ಜೀನ್ ಗೆಡ್ಡೆಗಳಾಗಿ ಬೆಳೆಯುವ ಭೂಗತ ಕಾಂಡಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಈ ಜೀನ್​ ಗಳು ಒಂದಾಗಿ, ಆಲೂಗಡ್ಡೆಯು ಬೆಳೆಯಲು ಆರಂಭವಾಯ್ತು  

ಸುಮಾರು 9 ದಶಲಕ್ಷ ವರ್ಷಗಳ ಹಿಂದೆ ಆಂಡಿಸ್ ಪರ್ವತಗಳಲ್ಲಿ ಇದು ಸೃಷ್ಟಿಯಾಗಿರಬಹುದು ಎಂಬದು ಮತ್ತೊಂದು ವಾದವಾಗಿದೆ. ಇದರ ಜೊತೆಗೆ ನಿಮಗೆ ಇನ್ನೊಂದು ವಿಷಯ ಗೊತ್ತಿರಲಿ ಜಗತ್ತಿನಲ್ಲಿ ಅಕ್ಕಿ, ಗೋದಿ ಬಿಟ್ಟರೆ ಅತಿ ಪ್ರಮುಖವಾದ ಬೆಳೆ ಅಂದರೆ, ಆಲೂಗಡ್ಡೆಯಂತೆ. 

 

Agricultural Sciences

car decor

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor