Actor darshan : ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ರೇಣುಕಾ ಸ್ವಾಮಿ ಕುಟುಂಬ ನ್ಯಾಯಾಲಯದ ತೀರ್ಪಿಗೆ ಸಂತೋಷ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ನ ತೀರ್ಪಿಗೆ ಪ್ರತಿಕ್ರಿಯಿಸಿದ ರೇಣುಕಾ ಸ್ವಾಮಿ ಅವರ ತಾಯಿ ರತ್ನಪ್ರಭ, “ಕೋರ್ಟಿಗೆ ಎಲ್ಲರೂ ತಲೆ ಬಾಗಲೇಬೇಕು. ನಮಗೆ ನ್ಯಾಯ ಸಿಕ್ಕಿದೆ. ನಮ್ಮ ಮನೆಯವರು ಪೂಜೆಗೆ ಕುಳಿತಿದ್ದಾಗ ಅವರಿಗೆ ಈ ವಿಚಾರ ತಿಳಿಸಿದೆ. ಕಾನೂನಿನ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಪ್ರಕರಣದ ವಿಚಾರಣೆ ಇನ್ನೂ ನಡೆಯಬೇಕಿದೆ ಎಂದರು.
Actor darshan ಕಾನೂನು ಎಲ್ಲರಿಗೂ ಒಂದೇ: ಕಾಶಿನಾಥ್ ಶಿವನಗೌಡರ್
ರೇಣುಕಾ ಸ್ವಾಮಿ ಅವರ ತಂದೆ ಕಾಶಿನಾಥ್ ಶಿವನಗೌಡರ್ ಮಾತನಾಡಿ, “ದರ್ಶನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಅವರನ್ನು ಕೂಡಲೇ ಬಂಧಿಸುವಂತೆ ಆದೇಶ ನೀಡಲಾಗಿದೆ. ಈ ಹಿಂದೆ ದರ್ಶನ್ ಸೇರಿದಂತೆ ಇತರ ಅಪರಾಧಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ್ದಾಗ ನಮಗೆ ಆತಂಕವಾಗಿತ್ತು. ಆದರೆ ಸುಪ್ರೀಂ ಕೋರ್ಟ್ನ ಈ ತೀರ್ಪಿನಿಂದ ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ. ಕಾನೂನಿನ ಮುಂದೆ ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಪ್ರಕರಣದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ನನ್ನ ನೊಂದ ಸೊಸೆ ಸಹನಾ ಅವರಿಗೆ ಸರ್ಕಾರ ಉದ್ಯೋಗ ನೀಡಬೇಕು” ಎಂದು ಮನವಿ ಮಾಡಿದರು.
Actor darshan ಜೈಲ್ನ ಕಂಪೌಂಡ್ ವಾಲ್ 25 ಅಡಿ ಎತ್ತರಕ್ಕೆ ಏರಿಕೆ.
ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕರೆತರಲು ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಈ ಹಿಂದೆ ದರ್ಶನ್ ಅವರನ್ನು ಇರಿಸಲಾಗಿದ್ದ ಜೈಲಿನಲ್ಲಿ ಅವರ ಅಭಿಮಾನಿಗಳು ಕಾಂಪೌಂಡ್ ಗೋಡೆ ಏರಿ ಹೋಗುತ್ತಿದ್ದರು. ಈ ಕಾರಣದಿಂದಾಗಿ, ಭದ್ರತಾ ಕ್ರಮವಾಗಿ ಕಾಂಪೌಂಡ್ ಗೋಡೆಯ ಎತ್ತರವನ್ನು 25 ಅಡಿಗೆ ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ದರ್ಶನ್ ಮನೆ ಮುಂದೆ ಪೊಲೀಸರ ಭೇಟಿ
ದರ್ಶನ್ ಅವರ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯ ಪೊಲೀಸರು ದರ್ಶನ್ ಅವರ ಮೈಸೂರಿನ ಮನೆಯಾದ ‘ಮುಪಾ ಕೃಪಾ ನಿವಾಸ’ಕ್ಕೆ ಭೇಟಿ ನೀಡಿದ್ದಾರೆ. ಈ ಘಟನೆಯ ನಂತರ ದರ್ಶನ್ ಅವರ ಮನೆ ಬಳಿ ಜನರಿಲ್ಲದೆ ಬಿಕೋ ಎನ್ನುತ್ತಿದೆ ಎಂದು ವರದಿಯಾಗಿದೆ. ಈ ತೀರ್ಪಿನಿಂದ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಸಾಭೀತಾಗಿದೆ.
ರಾಜ್ಯದ ದೇವಾಲಯಗಳಿಗೆ ಹೊಸ ಕಾನೂನು: ಮೀರಿದರೆ ಕ್ರಿಮಿನಲ್ ಪ್ರಕರಣ. ಏನದು https://malenadutoday.com/karnataka-tempel/
