ಜನವರಿ 29 ರಿಂದ ಫೆಬ್ರವರಿ 03 ರವರೆಗೆ ಆರು ದಿನ ಶಿವಮೊಗ್ಗದ ಈ ಭಾಗಗಳಲ್ಲಿ ಪವರ್ ಕಟ್

ಹಂಚಿಕೊಳ್ಳಿ
WhatsApp Facebook X Telegram
ಜನವರಿ 29 ರಿಂದ ಫೆಬ್ರವರಿ 03 ರವರೆಗೆ ಆರು ದಿನ  ಶಿವಮೊಗ್ಗದ ಈ ಭಾಗಗಳಲ್ಲಿ ಪವರ್ ಕಟ್

SHIVAMOGGA  |  Jan 26, 2024  | ಜ.29 ರಿಂದ ಫೆ.03 ರವರೆಗೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ ತಾಲ್ಲೂಕು, ಸಂತೇಕಡೂರು ಗ್ರಾಮದಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎಫ್-1 ಉಂಬ್ಳೇಬೈಲು, ಎಫ್-2 ಲಕ್ಕಿನಕೊಪ್ಪ, ಎಫ್-3 ಮತ್ತೂರು ಕುಡಿಯುವ ನೀರಿನ ಮಾರ್ಗಗಳ ವ್ಯಾಪ್ತಿಯಲ್ಲಿ ಹೆಚ್ಚುವರಿ ಹೊಸ 11 ಕೆವಿ ವಿದ್ಯುತ್ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. 

ಈ ಹಿನ್ನೆಲೆಯಲ್ಲಿ ಈ  ಮಾರ್ಗಗಗಳಲ್ಲಿ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಜ.29 ರಿಂದ ಫೆ.03 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ಮೆಸ್ಕಾಂ ಶಿವಮೊಗ್ಗ ವಿಭಾಗ ತಿಳಿಸಿದೆ 

ಮೆಸ್ಕಾಂ ಶಿವಮೊಗ್ಗ 

ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕ ನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರುಳಿಹಳ್ಳಿ, ಗಣಿದಾಳು ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಡ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor