ಶಿವಮೊಗ್ಗದ ಶಿಕ್ಷಕರೊಬ್ಬರಿಗೆ ಗೌರವ ಡಾಕ್ಟರೇಟ್‌ ಸೇರಿದಂತೆ ಹತ್ತು ಹಲವು ಪ್ರಶಸ್ತಿ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದ ಶಿಕ್ಷಕರೊಬ್ಬರಿಗೆ ಗೌರವ ಡಾಕ್ಟರೇಟ್‌ ಸೇರಿದಂತೆ ಹತ್ತು ಹಲವು ಪ್ರಶಸ್ತಿ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 3, 2025

ಶಿವಮೊಗ್ಗ ನಗರದ ಭಾವಸಾರ ಮಹಾಜನ ಸಮಾಜದ ಸದಸ್ಯರಾದ ಗಿರೀಶ್ ಕುಂಟೆ ಅವರಿಗೆ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಜೊತೆಗೆ ಇಂಡಿಯಾ ಎಲೈಟ್‌ ಇಂಟರ್‌ ನ್ಯಾಷನಲ್‌ ಬುಕ್ ಕರ್ನಾಟಕ ಅಚೀವರ್ ಆಕಾಡೆಮಿ ರೆಕಾರ್ಡ್ ಗೌರವ ದೊರಕಿದೆ.

ಶಿವಮೊಗ್ಗದ  ಪೋದರ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ  ಸೇವೆ ಸಲ್ಲಿಸುತ್ತಿರುವ ಗಿರೀಶ್ ಕುಂಟೆ M S C,  B E D,  D C A ಪದವೀಧರರಾಗಿದ್ದಾರೆ. ಇವರು ಕೇಂದ್ರ ಸರ್ಕಾರದ ಮೈ ಗವರ್ನಮೆಂಟ್ ಆಫ್ ನಲ್ಲಿ 1200 ಕ್ಕೂ ಆನ್ಲೈನ್ ರಸಪ್ರಶ್ನೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರವನ್ನು  ಪಡೆದಿದ್ದಾರೆ.

ಇವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಹೋಲ್ಡರ್,  ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಹೋಲ್ಡರ್‌, ಎಲೈಟ್ ಆಫ್ ರೆಕಾರ್ಡ್ ಹೋಲ್ಡರ್,  ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌, ಹೈ ಟ್ರೈಬ್ ವರ್ಲ್ಡ್ ರೆಕಾರ್ಡ್ ಹೋಲ್ಡರ್, ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ನ್ಯಾಷನಲ್ ಪ್ರೈಡ್ ರೆಕಾರ್ಡ್,  ಸ್ವಾಮಿ ವಿವೇಕಾನಂದ’ ಪ್ರೈಡ್ ಅಚೀರ್ವಸ್ ಅವಾರ್ಡ್ ಗಳನ್ನು ಪಡೆದಿದ್ದಾರೆ. ಇವರ  ಶೈಕ್ಷಣಿಕ ಸಾಧನೆಗೆ ‘ವರ್ಲ್ಡ್ ಎನ್ನಿರಾಸ್ಟೆಂಟ್ ಪ್ರೊಟೆಕ್ಷನ್ ಕಮಿಷನ್ ನ್ಯೂ ದೆಹಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಇವರು ಸಾಧನ ಅಕಾಡೆಮಿ ಶಿಕಾರಿಪುರ, ಸ್ಪರ್ಧಾ ಕರ್ನಾಟಕ ಅಕಾಡೆಮಿ ಶಿವಮೂಗ್ಗ ಸಾಧನ ಸ್ಕೂಲ್ ಶಿಕಾರಿಪುರ ಯೌಟ್ಯೂಬ್ ಚಾನೆಲ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿರುತ್ತಾರೆ.

ಇವರ ಈ ಸಾಧನೆಗೆ ಭಾವಸಾರ ಮಹಾಜನ ಸಮಾಜ’ ‘ಬಾಂಧವರು’ ‘ಅಧ್ಯಕ್ಷರಾದ ಶ್ರೀ’ ‘ಗಜೇಂದ್ರ ಸೊಸೈಟಿ’ ‘ಅಧ್ಯಕ್ಷರಾದ ಶ್ರೀ ಸಂತೋಷ್’ ‘ಸಾಕ್ರೆ ‘ಫೋದಾರ್ ಶಾಲೆಯ ಪ್ರಾಂಶುಪಾಲರಾದ ಶ್ರೀ ‘ಸುಕೇಶ್ ಸೇರಿಗಾರ’ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

SUMMARY | Girish Kunte has been awarded an honorary doctorate in recognition of his achievements and the India Elite International Book Karnataka Achiever Academy Record

KEYWORDS | Girish Kunte,  doctorate, achievements, shivamogga,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor