ತೋಟಕ್ಕೆ ನುಗ್ಗಿ ಹಲಸಿನ ಹಣ್ಣು ತಿನ್ನುವಾಗ ಕಾಡಾನೆಗೆ ಶಾಕ್ , ಸಾವು

ಹಂಚಿಕೊಳ್ಳಿ
WhatsApp Facebook X Telegram
ತೋಟಕ್ಕೆ ನುಗ್ಗಿ ಹಲಸಿನ ಹಣ್ಣು ತಿನ್ನುವಾಗ ಕಾಡಾನೆಗೆ ಶಾಕ್ , ಸಾವು

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 2, 2025 ‌‌ ‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಲಿಂಗದಳ್ಳಿಯಲ್ಲಿ ಕಾಡಾನೆಯೊಂದು ಸಾವನ್ನಪ್ಪಿದೆ. ಇಲ್ಲಿನ ತಣಿಗೆಬೈಲು ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ವಿದ್ಯುತ್ ತಂತಿ ತಗುಲಿ 35 ವರ್ಷದ ಗಂಡಾನೆ ಸಾವನ್ನಪ್ಪಿದೆ. 

ಇಲ್ಲಿನ ವ್ಯಕ್ತಿಯೊಬ್ಬರ ಕಾಫಿ ತೋಟದ ಮೂಲಕ ನಂದಿಗಾವೆ ದಂಡುಬಿಟ್ಟಹಾರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ತಂತಿ ಅಳವಡಿಸಲಾಗಿದೆ. ಈ ವಯರ್​ಗೆ ಆನೆಯ ಸೊಂಡಿಲು ತಾಗಿ ದುರಂತ ಸಂಭವಿಸಿದೆ. 

ಕಾಡಾನೆಯು ತೋಟದಲ್ಲಿದ್ದ ಹಲಸಿನ ಹಣ್ಣುಗಳನ್ನು ತಿನ್ನಲು ಬಂದಿತ್ತು. ಈ ವೇಳೆ ಮರವೊಂದರಿಂದ ಹಲಸಿನ ಹಣ್ಣು ಎಳೆಯುವಾಗ ಅದರ ಪಕ್ಕದಲ್ಲಿದ್ದ ಲೈನ್​ಗೆ ತಾಗಿ ವಿದ್ಯುತ್ ಶಾಕ್​ನಿಂದ ಕಾಡಾನೆ ಸಾವನ್ನಪ್ಪಿದೆ ಎಂದು ಸ್ಥಳಿಯರು ತಿಳಿಸಿದ್ಧಾರೆ.

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor