60 ವರ್ಷ ಮೇಲ್ಪಟ್ಟವರಿಗೆ ಗನ್‌ ಲೈಸನ್ಸ್‌ ಕೊಡಿ | ಕಿಮ್ಮನೆ ರತ್ನಾಕರ್‌

ಹಂಚಿಕೊಳ್ಳಿ
WhatsApp Facebook X Telegram
60 ವರ್ಷ ಮೇಲ್ಪಟ್ಟವರಿಗೆ ಗನ್‌ ಲೈಸನ್ಸ್‌ ಕೊಡಿ | ಕಿಮ್ಮನೆ ರತ್ನಾಕರ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 29, 2025

ಶಿವಮೊಗ್ಗ | 60 ವರ್ಷ ಮೇಲ್ಪಟ್ಟವರಿಗೆ ಬಂದೂಕು ಲೈಸನ್ಸ್‌ ಕೊಡುವುದಿಲ್ಲಾ ಎಂದು ಶಿವಮೊಗ್ಗ ಎಸ್‌ಪಿ ಯವರು ಆದೇಶಿಸಿದ್ದು, ಆ ಆದೇಶವನ್ನು ಹಿಂಪಡೆಯಬೇಕು ಎಂದು ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್‌ ಒತ್ತಾಯಿಸಿದರು.

ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಮಲೆನಾಡು ಸೇರಿದಂತೆ ಇತರೆ  ಭಾಗದಲ್ಲಿ ಮಕ್ಕಳು ಕೆಲಸಕ್ಕೆಂದು ವೃದ್ದ ದಂಪತಿಗಳನ್ನು ಬಿಟ್ಟು  ಬೆಂಗಳೂರಿಗೆ ಹೋಗಿರುತ್ತಾರೆ. ಆಗ ಮನೆಯಲ್ಲಿ ಅವರ ತಂದೆ ತಾಯಿ ಮಾತ್ರ ಇರುತ್ತಾರೆ. ಅವರಿಗೆ ಆತ್ಮ ರಕ್ಷಣೆಗಾಗಿ ಗನ್‌ ಅವಶ್ಯಕವಾಗಿರುತ್ತದೆ. ಅವರಿಗೆ ಗನ್‌ನ್ನು ಉಪಯೋಗಿಸಲು ಬರದಿದ್ದರೂ ಸಹ ಗನ್‌ ಲೈಸನ್ಸ್‌ನ್ನು ನೀಡಬೇಕು. ಗನ್‌ ಇದೆ ಎಂಬ ಕಾರಣಕ್ಕೆ ಕಳ್ಳರು  ಹೆದರಿಕೊಂಡು ಮನೆಗೆ ನುಗ್ಗುವುದಿಲ್ಲ. ಆದ್ದರಿಂದ ಎಸ್‌ ಪಿ ಯವರು ಗನ್‌ ನೀಡುವುದಿಲ್ಲ ಎಂಬ ಆದೇಶವನ್ನು ಹಿಂಪಡೆದುಕೊಂಡು ವೃದ್ದರಿಗೆ ಗನ್‌ ಹೊಂದಲು ಅವಕಾಶ ನೀಡಬೇಕೆಂದರು.

SUMMARY | Former education minister Kimmane Ratnakar demanded that the Shivamogga SP should withdraw the order not to issue gun licences to those above 60 years of age.

KEYWORDS |  Kimmane Ratnakar, gun licences, old agers,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor