ಸತ್ತ ಹಲ್ಲಿ ಬಿದ್ದ ಸಾಂಬರ್‌ನ್ನು ಲೈವ್‌ನಲ್ಲಿ ತಿಂದ ಉರಗ ಸಂಶೋದಕ | ನಂತರ ಆಗಿದ್ದೇನು 

ಹಂಚಿಕೊಳ್ಳಿ
WhatsApp Facebook X Telegram
ಸತ್ತ ಹಲ್ಲಿ ಬಿದ್ದ ಸಾಂಬರ್‌ನ್ನು ಲೈವ್‌ನಲ್ಲಿ ತಿಂದ ಉರಗ ಸಂಶೋದಕ | ನಂತರ ಆಗಿದ್ದೇನು 

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 18, 2025

ಹಲ್ಲಿ ಬಿದ್ದ ಆಹಾರ ಸೇವಿಸಿದರೆ ವಿಷಕಾರಕವಾಗುತ್ತದೆ ಎಂಬ ಕಲ್ಪನೆ ಎಲ್ಲರಲ್ಲಿದೆ. ಆದರೆ ಉರಗ ಸಂಶೋದಕ  ಗೌರಿ ಶಂಕ‌ರ್ ಪಲ್ಲಿ ಸತ್ತು ಹೋದ ಸಾಂಬರ್‌ನ್ನು ಲೈವ್ ನಲ್ಲಿಯೇ ತಿಂದು ಜೀರ್ಣಿಸಿಕೊಂಡಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಷಯ ಹಂಚಿಕೊಂಡಿರುವ ಗೌರಿ, ಜನರಲ್ಲಿರುವ ಗೊಂದಲವನ್ನ ನಿವಾರಣೆ ಮಾಡಿದ್ದಾರೆ. ಸಾಂಬರ್‌ನಲಿದ್ದ ಹಲ್ಲಿಯನ್ನ ತಿಂದು ನೋಡಿ ಎಂದು ಅಭಿಮಾನಿ ಹಾಕಿದ ಪೋಸ್ಟರ್ ಸವಾಲನ್ನು ಪ್ರೀತಿಯಿಂದ ಸ್ವೀಕರಿಸಿದ ಗೌರಿ ಆ ಸಮಯಕ್ಕಾಗಿ ಕಾಯುತ್ತಿದ್ದರು. ಇತ್ತೀಚೆಗೆ  ಪಲ್ಲಿ ಸಾಂಬರ್ ನಲ್ಲಿ ಬಿದ್ದು ಸತ್ತ ವಿಷಯ ಗೌರಿಗೆ ತಿಳಿಯುತ್ತಿದ್ದಂತೆ ಆ ಮನೆಗೆ ದೌಡಾಯಿಸಿದ್ದಾರೆ. ಸಾಂಬರ್ ನಲ್ಲಿ ಬಿದ್ದು ಸತ್ತ ಹಲಿಯನ್ನು ತಟ್ಟೆಗೆ ಹಾಕಿಕೊಂಡು ಫೇಸ್ ಬುಕ್ ಲೈವ್‌ಗೆ ಬಂದಿದ್ದಾರೆ.ಚೆನ್ನಾಗಿ ಬಂದ ಪಲ್ಲಿಯ ಬಾಲ ಕಟ್ ಆಗಿತ್ತು. ಸಾಂಬರ್ ಅನ್ನವನ್ನು ಮಿಶ್ರಣ ಮಾಡಿ ಸೇವಿಸಿದ್ದಾರೆ. ತದನಂತರದಲ್ಲಿ ಮಾತನಾಡಿರುವ ಗೌರಿ ಶಂಕ‌ರ್, ಪಲ್ಲಿ ಬಿದ್ದ ಸಾಂಬರ್ ನ್ನು ಸೇವಿಸಿದಾಗ ಹೊಟ್ಟೆ ಕೆಡುತ್ತದೆ. ಪ್ರಾಣ ಹೋಗುವ ಸಂದರ್ಭ ಎದುರಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ನಾನೊಬ್ಬ ಸ್ಟಂಟ್ ಮಾಸ್ಟರ್ ಅಲ್ಲ ಸಂಶೋಧಕ ಎಂದಿರುವ ಗೌರಿ, ಪಲ್ಲಿ ಬಿದ್ದ ಆಹಾರವನ್ನ ಸೇವಿಸಿದ್ದಾರೆ. ಮಾರನೆ ದಿನ ನಾನು ಬದುಕಿರುವ ವಿಡಿಯೋ ಹಾಕುತ್ತೇನೆ ಎಂದು ಪೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿ, ಹಲ್ಲಿ ವಿಷಕಾರಿ ಅಲ್ಲ ಎಂದು ಹೇಳಿದ್ದಾರೆ. ವಿಷಕಾರಿ ಹಲ್ಲಿಗಳು ಅಮೇರಿಕಾ ದೇಶದಲ್ಲಿವೆ. ಹಲ್ಲಿಗಳು ಮನುಷ್ಯ ಸ್ನೇಹಿಯಾಗಿದ್ದು, ರಾತ್ರಿ ರಕ್ಷಕನಂತೆ ಕೆಲಸ ಮಾಡುತ್ತದೆ ಎಂದು ಹಲ್ಲಿಗಳ ಮಹತ್ವವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

SUMMARY | There is a well-known notion that eating lizard-infested food can be toxic, but uraga expert Gauri Shankarpalli has digested the dead sambar by eating it live. .

KEYWORDS | lizard, Gauri Shankar, viral video,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor