ಸಿಗಂದೂರು ಸೇತುವೆ ಮೇಲೆ ಕೊನೆ ಪೂಜೆ | ಎಲ್ಲಿವರೆಗೆ ಬಂತು ಗೊತ್ತಾ ಕೆಲಸ!?

ಹಂಚಿಕೊಳ್ಳಿ
WhatsApp Facebook X Telegram
ಸಿಗಂದೂರು ಸೇತುವೆ ಮೇಲೆ ಕೊನೆ ಪೂಜೆ | ಎಲ್ಲಿವರೆಗೆ ಬಂತು ಗೊತ್ತಾ ಕೆಲಸ!?

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌ 

ಶಿವಮೊಗ್ಗದ ಮಹತ್ವದ ಯೋಜನೆಗಳಲ್ಲಿ ಒಂದಾದ ಸಿಗಂದೂರು ಸೇತುವೆ ವಿಚಾರದಲ್ಲಿ ಮತ್ತೊಂದು ಅಪ್‌ಡೇಟ್‌ ಸಿಕ್ಕಿದೆ ಈಗಾಗಲೇ ಕೊನೆ ಹಂತದ ಕಾಮಗಾರಿಯಲ್ಲಿ ಸಿಗಂದೂರು ಬ್ರಿಡ್ಜ್‌ನ ರೋಪ್‌ ವೇ ಕಾಮಗಾರಿ ಪೂರ್ಣಗೊಂಡಿದೆ. ಶೇಕಡಾರ 90 ರಷ್ಟು ಕಾಮಗಾರಿ ಮುಗಿದ ಹಿನ್ನೆಲೆಯಲ್ಲಿ ಕಳೆದ ಬುಧವಾರ ಸೇತುವೆಯಲ್ಲಿ ಪೂಜಾ ಕಾರ್ಯ ಕೈಗೊಳ್ಳಲಾಗಿತ್ತು. ಆ ಬಳಿಕ ಮೂರು ದಿನಗಳಲ್ಲಿ ಕೇಬಲ್‌ ಅಳವಡಿಕೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. 

Malenadu Today Shivamogga

ಇನ್ನೂ ಸೇತುವೆಯಲ್ಲಿ ಸೆಪ್ಟೆಂಟ್ ಅಳವಡಿಕೆ ಕೆಲಸ ಆಗಬೇಕಿದ್ದು ಆನಂತರ ಅಪ್ರೋಚಿಂಗ್‌ ಕೆಲಸಗಳು ನಡೆಯಬೇಕಿದೆ. ಈಗಾಗಲೇ ಒಂದು ಬದಿಯಲ್ಲಿ ಸೇತುವೆಗೆ ಲಿಂಕ್‌ ನೀಡುವ ಕೆಲಸ ಪೂರ್ಣಗೊಂಡಿದ್ದು ಇನ್ನೊಂದು ಬದಿಯಲ್ಲಿ ಈ ಕಾಮಗಾರಿ ಪೂರ್ತಿಯಾಗುವ ಹಂತದಲ್ಲಿದೆ. 

ಎರಡು ಭಾಗದಲ್ಲಿ 3 ಕಿ.ಮೀ. ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಅಂದುಕೊಂಡಂತೆ ನಡೆದರೇ, ಬರುವ ಮೇ ತಿಂಗಳ ಅಂತ್ಯದಲ್ಲಿ ಸೇತುವೆ ಲೋಕಾರ್ಪಣೆಗೊಳ್ಳಲಿದೆ. 

Malenadu Today Shivamogga

SUMMARY |  sigandur bride work 

KEY WORDS |sigandur bridge work

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor