ಸಮೀಪಿಸ್ತಿದೆ ಮಲೆನಾಡ ಮತ್ತೊಂದು ಮೆಗಾ ಇವೆಂಟ್ | ಸಿಗಂದೂರು ಸೇತುವೆ ಕಾಮಗಾರಿ! ಅಪ್‌ಡೇಟ್ಸ್
sigandur bridge work almost complete , sigandur bridge ready to inauguration

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 10, 2025
ಶಿವಮೊಗ್ಗ ಜಿಲ್ಲೆಯ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಸಿಗಂದೂರು ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಕೆಲವೇ ಕೆಲವು ಕಾಮಗಾರಿಗಳು ಬಾಕಿ ಉಳಿದಿದ್ದು, ಸೇತುವೆ ಲೋಕಾರ್ಪಣೆಯ ದಿನದ ಬಗ್ಗೆ ಕುತೂಹಲವೂ ಜನರಲ್ಲಿ ಶುರುವಾಗಿದೆ.
ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಪೂರ್ಣ
ಪ್ರಸ್ತುತ ಸಿಗಂದೂರು ಸೇತುವೆ ಕಾಮಗಾರಿಯಲ್ಲಿ 604 ಸೆಗ್ಮೆಂಟ್ ಪೈಕಿ 578 ಸೆಗ್ಮೆಂಟ್‌ಗಳನ್ನು ಅಳವಡಿಕೆ ಪೂರ್ಣಗೊಂಡಿದ್ದು ಉಳಿದ ಸೆಗ್ಮೆಂಟ್‌ಗಳ ಅಳವಡಿಕೆ ಕೆಲಸ ನಡೆಯುತ್ತಿದೆ. ಜೊತೆಯಲ್ಲಿ ಸೇತುವೆಯ ಎರಡು ಬದಿಯಲ್ಲಿ ಸೇತುವೆ ಲಿಂಕ್ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಳಸವಳ್ಳಿ ಭಾಗದಲ್ಲಿ ತಡೆಗೋಡೆ ಕಾಮಗಾರಿಯು ಪೂರ್ಣಗೊಂಡಿದೆ. ಇನ್ನೂ ಕೇಬಲ್ ಅಳವಡಿಕೆಯ ಕಾಮಗಾರಿಯು ಚುರುಕುಗೊಂಡಿದ್ದು, ಸೆಗ್ಮೆಂಟ್ ಅಳವಡಿಕೆ ಪೂರ್ಣಗೊಂಡ ಬಳಿಕ ಈ ಕೆಲಸವೂ ಪೂರ್ತಿಗೊಳ್ಳಲಿದೆ.
ಮೇ ತಿಂಗಳಿನಲ್ಲಿ ಸಿಗಂದೂರು ಸೇತುವೆ ಉದ್ಘಾಟನೆ
ಅಂದುಕೊಂಡಂತೆ ಕೆಲಸ ಮುಗಿದ ಪಕ್ಷದಲ್ಲಿ ಮೇ ತಿಂಗಳ ಹೊತ್ತಿಗೆ ಸಿಗಂದೂರು ಸೇತುವೆಯ ಉದ್ಘಾಟನೆ ನಡೆಯುವ ಸಾಧ್ಯತೆ ಇದ್ದು ಮಲೆನಾಡು ಭಾಗದ ದೊಡ್ಡ ಇವೆಂಟ್ ಆಗಿ ಕಾರ್ಯಕ್ರಮ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ. ಇದರ ಜೊತೆಯಲ್ಲಿ ಶಿವಮೊಗ್ಗ ಹಾಗೂ ಕರಾವಳಿಯ ಸಂಪರ್ಕಕ್ಕೆ ಮತ್ತೊಂದು ರಹದಾರಿ ಸೇತವೆಯ ಅನಾವರಣದಿಂದ ಸಿಗಲಿದೆ. ಸೇತುವೆ ಮೇಲಿನ ಸಂಚಾರಕ್ಕೆ ಈಗಾಗಲೇ ಮಲೆನಾಡು ಸೇರಿದಂತೆ ಹೊರ ಜಿಲ್ಲೆಯ ಮಂದಿಯು ಸಹ ಕುತೂಹಲದಿಂದ ಕಾಯುತ್ತಿದ್ದಾರೆ.
ರಾಜ್ಯದ ಎರಡನೇ ಅತಿ ಉದ್ದದ ಸೇತುವೆ
ಒಟ್ಟು 2.44 ಕಿಲೋಮೀಟರ್ ಉದ್ದ ಸೇತುವೆ ರಾಜ್ಯದೆ ಎರಡನೇ ಹಾಗೂ ದೇಶದ ಏಳನೇ ಅತಿ ಉದ್ದದ ಸೇತುವೆ ಎನಿಸಲಿದೆ. ಸೇತುವೆ ಸಂಪರ್ಕದಿಂದ ತುಮರಿ ಸುತ್ತಮುತ್ತಲಿನ ಭಾಗದ ಜನರಿಗೆ ಯಾವುದೇ ಅಡೆತಡೆ ಇಲ್ಲದೆ ಸಾಗರ ಸಂಪರ್ಕ ಸುಲಭವಾಗಿ ಲಭಿಸಲಿದೆಯಷ್ಟೆ ಅಲ್ಲದೆ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವವರಿಗೆ ಲಾಂಚ್ ಓಡಾಟದ ನಡುವೆ ಆಗುತ್ತಿದ್ದ ಸಮಸ್ಯೆಗಳು ತಪ್ಪಲಿದೆ. ಆದರೆ ಸೇತುವೆ ಆರಂಭವಾದ ಬಳಿಕ ಲಾಂಚ್ ಸೇವೆ ಹಾಗೂ ಅದನ್ನೆ ನಂಬಿಕೊಂಡಿರುವ ಎರಡು ಬದಿಯ ವ್ಯಾಪಾರಕ್ಕೆ ದಕ್ಕೆಯಾಗಲಿದೆ. ಸಾಗರದಿಂದ ಬರುವ ಜನರು ನೇರವಾಗಿ ಸೇತುವೆ ಮೂಲಕ ಸಿಗಂದೂರು ತಲುಪುದರಿಂದ ಲಾಂಚ್ ಮೇಲಿನ ಅವಲಂಭನೆ ಕಡಿಮೆಯಾಗಲಿದೆ.
ಈಗಾಗಲೇ ಸಿಗಂದೂರು ಸೇತುವೆಯ ಡ್ರೋಣ್ ವಿಡಿಯೋಗಳು ವೈರಲ್ ಆಗುತ್ತಿದ್ದು, ಮಲೆನಾಡಿನ ವಿಡಿಯೋ ತಜ್ಞರು ಚಿತ್ರ ವಿಶೇಷವಾಗಿ ಸಿಗಂದೂರು ಸೇತುವೆಯನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಅವರಿಗೂ ಸಿಗಂದೂರು ಸೇತುವೆಯ ಕಾಮಗಾರಿ ಪೂರ್ಣಗೊಳ್ಳುವ ಕ್ಷಣವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯುವ ಕುತೂಹಲ ಹೆಚ್ಚಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದ ಬಳಿಕ ನಡೆಯಲಿರುವ ದೊಡ್ಡ ಇವೆಂಟ್ ಆಗಿ ಸಿಗಂದೂರು ಸೇತುವೆ ಕಾಮಗಾರಿಯ ಉದ್ಘಾಟನೆ ರೂಪುಗೊಳ್ಳಲಿದ್ದು, ಅದಕ್ಕಾಗಿ ತೆರೆಮರೆಯ ಸಿದ್ಧತೆಗಳು ಸಹ ಆರಂಭಗೊಂಡಿದೆ. ರಾಜಕಾರಣದ ಲಾಭದ ಬಾಬ್ತು ವಿಚಾರ ಮಧ್ಯಪ್ರವೇಶ ಮಾಡದ ಪಕ್ಷದಲ್ಲಿ ಪಕ್ಷಾತೀತವಾಗಿ ಸೇತುವೆ ಲೋಕಾರ್ಪಣೆಗೊಳ್ಳಲಿದೆ.
SUMMARY | sigandur bridge work almost complete and sigandur bridge ready to inauguration
KEY WORDS | sigandur bridge work almost complete , sigandur bridge ready to inauguration