ಚಿಕ್ಕಮಗಳೂರು | ಧರ್ಮಸ್ಥಳಕ್ಕೆ ಹೊರಟಿದ್ದ ಮೈಸೂರು ಬಸ್‌ ಪಲ್ಟಿ | 9 ಮೂಟೆ ಅಡಿಕೆ ಚಿನ್ನ ಕದ್ದವರಿಗೆ ಶಾಕ್

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌ 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕುನಲ್ಲಿ ಟೂರಿಸ್ಟ್‌ ಬಸ್‌ವೊಂದು ಮರಕ್ಕೆ ಡಿಕ್ಕಿ ಹೊಡೆದು ಅಪ್‌ಸೆಟ್‌ ಆಗಿದೆ. ಇಲ್ಲಿನ ಬಿದರಹಳ್ಳಿ ಬಳಿ ಈ ಘಟನೆ ನಿನ್ನೆ ದಿನ ನಡೆದಿದೆ. ಘಟನೆಯಲ್ಲಿ ನಾಲ್ವರಿಗೆ ಜಾಸ್ತಿ ಪೆಟ್ಟು ಬಿದ್ದಿದೆ, 11 ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು, ಎಲ್ಲರೂ ಬಚಾವ್‌ ಆಗಿದ್ದಾರೆ. ಗಾಯಾಳುಗಳು ಮೈಸೂರು ಜಯದೇವ ಆಸ್ಪತ್ರೆ ಸಿಬ್ಬಂದಿ ಎಂದು ಹೇಳಲಾಗಿದೆ. ಬಸ್‌ ಧಮಸ್ಥಳಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹೀಗಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್‌ ನೇರವಾಗಿ ರಸ್ತೆ ಪಕ್ಕದಲ್ಲಿ ಬೆಳದಿದ್ದ ಮರಕ್ಕೆ ಡಿಕ್ಕಿಯಾಗಿದೆ. ಮೂಡಿಗೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಅಡಿಕೆ ಚಿನ್ನ ಕದ್ದು ಸಿಕ್ಕಿಬಿದ್ದರು

ಚಿಕ್ಕಮಗಳೂರು ಜಿಲ್ಲೆ ಕಳಸ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 9 ಮೂಟೆ ಅಡಿಕೆ ಹತ್ತು ಗ್ರಾಮ್‌ ಚಿನ್ನ ರಿಕವರಿ ಮಾಡುವಲ್ಲಿ ಪೊಲೀಸರು ಸಕ್ಸಸ್‌ ಆಗಿದ್ದಾರೆ. ಇಲ್ಲಿನ ಮಾವಿನಕೆರೆಯಲ್ಲಿ ಕಳ್ಳತನ ನಡೆದಿತ್ತು. ಕೇಸ್‌ ಸಂಬಂಧ  ಕೋಟೆಹೊಳೆ ಕಿರಣ್(27), ಮಾವಿನಕೆರೆ ಗ್ರಾಮ ಗಣಪತಿಕಟ್ಟೆ ರವಿ(50), ಕಳಸ ಹೊರನಾಡು ರಸ್ತೆಯ ಮೇಲಂಗಡಿ ಯು.ನಿತೀಶ್(33) ಎಂಬವರನ್ನು ಬಂಧಿಸಿದ್ದಾರೆ. 

 

SUMMARY | chikmagalur news today

KEY WORDS |chikmagalur news today

Leave a Comment