SHIVAMOGGA | MALENADUTODAY NEWS | ಮಲೆನಾಡು ಟುಡೆ Jan 9, 2025
ಸದ್ಯ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರಕ್ಕೆ ಮತ್ತೊಂದು ಆನೆ ಬಂದು ಸೆರ್ಪಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಹಾಗೂ ಮಾವುತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಆನೆಯೊಂದನ್ನ ಹಿಡಿದು ಇದೀಗ ಶಿವಮೊಗ್ಗಕ್ಕೆ ಅದರ ಜೊತೆಗೆ ವಾಪಸ್ ಆಗುತ್ತಿದ್ದಾರೆ.
View this post on Instagram
ಬೆಳಗಾವಿಯ ಖಾನಾಪುರದ ಬಿಡಿ ಎನ್ನುವ ಹಳ್ಳಿಯಲ್ಲಿ ಆನೆಯೊಂದನ್ನ ಹಿಡಿಯುವ ಸಲುವಾಗಿ, ಅಲ್ಲಿನ ಅರಣ್ಯ ಇಲಾಖೆ ವಿಭಾಗ, ಶಿವಮೊಗ್ಗ ವನ್ಯಜೀವಿ ವಿಭಾಗಕ್ಕೆ ಮನವಿ ಮಾಡಿತ್ತು. ಈ ಸಂಬಂಧ ಕಾರ್ಯಾಚರಣೆಗೆ ಬಾಲಣ್ಣ, ಸೋಮಣ್ಣ, ಬಹದ್ದೂರ್, ಸಾಗರ ಎಂಬ ಹೆಸರಿನ ನಾಲ್ಕು ಆನೆಗಳು ಬೆಳಗಾವಿಗೆ ತೆರಳಿದ್ದವರು. ಪಶುವೈದ್ಯ ಡಾ|| ರಮೇಶ್ ಹಾಗೂ ಸಕ್ರೆಬೈಲ್ನ ಮಾವುತರು ಹಾಗೂ ಕಾವಾಡಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇವತ್ತು ಕಾರ್ಯಾಚರಣೆ ಮುಗಿಸಿರುವ ಸಿಬ್ಬಂದಿ ಹಿಡಿದಿರುವ ಗಂಡಾನೆಯನ್ನು ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರಕ್ಕೆ ಕರೆತರುತ್ತಿದ್ದಾರೆ. ಬಹುಶಃ ಇವತ್ತು ತಡರಾತ್ರಿ ಅಥವಾ ಬೆಳಗ್ಗೆ ಆನೆಯನ್ನು ಸಕ್ರೆಬೈಲ್ ಕ್ಯಾಂಪ್ಗೆ ತರುವ ಸಾಧ್ಯತೆ ಇದೆ.
SUMMARY | Elephant operation at Sakrebail Elephant Camp in Belgaum, Male elephant captured, male elephant captured in Khanapur
KEY WORDS | Elephant operation at Sakrebail Elephant Camp in Belgaum, Male elephant captured, male elephant captured in Khanapur