SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 13, 2024
ಶಿವಮೊಗ್ಗ | ಶಿವಮೊಗ್ಗ ಕೃಷಿ ಇಲಾಖೆ ವತಿಯಿಂದ ಸೂಕ್ಷ್ಮ ನೀರಾವರಿ ಯೋಜನೆ ಹಾಗೂ ತುಂತುರು ನೀರಾವರಿ ಯೋಜನೆಯಡಿ ಜೆಟ್ ಪೈಪು/ ಸ್ಫಿಂಕ್ಲರ್ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಇಲಾಖೆ ಜೆಟ್ ಪೈಪು/ ಸ್ಫಿಂಕ್ಲರ್ಗೆ ಶೇಕಡಾ 90 ರಷ್ಟು ಸಹಾಯ ಧನ ನೀಡುತ್ತಿದ್ದು, ಸಾಮಾನ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಈ ಸೌಲಭ್ಯಗಳನ್ನು ನೀಡಲಾಗುತ್ತಿದೆ.ಅಶ್ಯಕತೆ ಇರುವ ರೈತರು ಈ ಯೋಜನೆಯ ಉಪಯೋಗ ಪಡೆಯಲು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಜೆರಾಕ್ಸ್, ಪಹಣಿ, 2 ಪಾಸ್ಪೋರ್ಟ್ ಸೈಜ್ ಪೋಟೋ, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್, ಜಾತಿ ಪ್ರಮಾಣ ಪತ್ರ (ಪ.ಜಾತಿ ಹಾಗೂಪ.ಪಂಗಡ) ಈ ದಾಖಲೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಇಲಾಖೆ ಮಾಹಿತಿ ನೀಡಿದೆ. ಪ.ಜಾತಿ ಹಾಗೂ ಪ.ಪಂಗಡ ರೈತರಿಗೆ 7 ವರ್ಷಕೊಮ್ಮೆ ಮತ್ತು ಸಾಮಾನ್ಯ ರೈತರಿಗೆ ಒಮ್ಮೆ ಮಾತ್ರ ಈ ಸ್ವೌಲಭ್ಯ ಪಡೆಯಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ತಾಲ್ಲೂಕಿನ ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳನ್ನು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದೆಂದು ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕರು ರಮೇಶ್ ಎಸ್ ತಿಳಿಸಿದ್ದಾರೆ.

SUMMARY | Shimoga Agriculture Department has invited applications from eligible farmers belonging to Scheduled Castes and Scheduled Tribes for availing jet pipe/sprinkler facility under micro irrigation scheme and sprinkler scheme.
KEYWORDS | Shimoga, Agriculture Department, farmers, pipe/sprinkler,