SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 12, 2024
ಅಲ್ಲೂ ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ 294 ಕೋಟಿ ಕಲೆಕ್ಷನ್ ಮಾಡಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.ಇದೀಗ ಪುಷ್ಪಾ 2 ಚಿತ್ರ ಮತ್ತೊಂದು ದಾಖಲೆ ಬರೆದಿದೆ. ಅದೇನೆಂದರೆ ಪುಷ್ಪಾ 2 ಚಿತ್ರ 6 ದಿನಗಳಲ್ಲಿ 1000 ಕೋಟಿ ಕಲೆಕ್ಷನ್ ಮಾಡಿ ಅತಿ ಕಡಿಮೆ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಚಿತ್ರವಾಗಿ ಹೊರಹೊಮ್ಮಿದೆ. ಈ ಕುರಿತು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಪೋಸ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದೆ.
THE BIGGEST INDIAN FILM rewrites history at the box office ????????????#Pushpa2TheRule becomes the FASTEST INDIAN FILM to cross 1000 CRORES GROSS WORLDWIDE in 6 days❤????#PUSHPA2HitsFastest1000Cr
Sukumar redefines commercial cinema ????
Book your tickets now!
????️… pic.twitter.com/GLsTv9LeGO— Mythri Movie Makers (@MythriOfficial) December 11, 2024
ಪುಷ್ಪಾ 2, 1000 ಕೋಟಿ ಕ್ಲಬ್ ಸೇರಿದ 8 ನೇ ಚಿತ್ರ.
ಈ ಹಿಂದೆ ಆಮೀರ್ ಖಾನ್‌ರ ದಂಗಲ್. ಪ್ರಭಾಸ್ ರ ಬಾಹುಬಲಿ 2. ರಾಮ್ ಚರಣ್ ಹಾಗು ಜೂನಿಯರ್ ಎನ್ಟಿಆರ್‌ರವರ RRR . ಯಶ್‌ರ KGF 2 ಪ್ರಭಾಸ್ರ ಕಲ್ಕಿ, ಶಾರೂಖ್ ಖಾನ್‌ರ ಜವಾನ್ ಮತ್ತು ಪಠಾಣ್ ಇದುವರೆಗೆ 1000 ಕೋಟಿ ಸೇರಿದ ಚಿತ್ರಗಳಾಗಿದ್ದು, ಇದೀಗ ಆ ಸಾಲಿಗೆ ಈಗ ಅಲ್ಲೂ ಅರ್ಜುನ್ ಅಭಿನಯದ ಪುಷ್ಪ 2 ಸೇರಿದೆ. ಅಷ್ಟೇ ಅಲ್ಲದೆ ಅತಿ ಕಡಿಮೆ ಅವಧಿಯಲ್ಲಿ ಸಾವಿರ ಕೋಟಿ ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
SUMMARY | Pushpa 2 has crossed the Rs 1000 crore mark in six days and has become the first highest-grossing film in a short span of time.
KEYWORDS | Pushpa 2, 1000 crore collection, filmy news,