ಚಾರ್ಜ್‌ಶೀಟ್‌ನಲ್ಲಿ ಹೆಸರು ತೆಗೆಯಲು 1 ಲಕ್ಷ ಕೇಳಿದ ASI ಗೆ ಶಾಕ್ | ನೇತ್ರಾವತಿಯಲ್ಲಿ RSS ಕಾರ್ಯಕರ್ತ ಸಾವು| ರೈತನನ್ನ ಸಾಯಿಸಿದ ಹೆಜ್ಜೇನು

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024

ನೇತ್ರಾವತಿಯಲ್ಲಿ ಮುಳುಗಿ RSS ಕಾರ್ಯಕರ್ತ ಸಾವು

ನೇತ್ರಾವತಿ ನದಿಯಲ್ಲಿ ಈಜುವಾಗ ಮುಳುಗಿ ಆರೆಸ್ಸೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ಬೇಳಾಲು ಗ್ರಾಮದಲ್ಲಿ ಸಂಭವಿಸಿದೆ.  ಈಜಲು ತೆರಳಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ (38) ಸಾವನ್ನಪ್ಪಿದ್ದಾರೆ. ಸೋಮವಾರ ಸಂಜೆ ಈಜಾಡಲು ಮೂವರು ನೀರಿಗೆ ಇಳಿದಿದ್ದು, ಪ್ರಸಾದ್ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಜೊತೆಗಿದ್ದ ಇಬ್ಬರು ರಕ್ಷಿಸಲು ಹೋದರೂ ಸಾಧ್ಯವಾಗಿಲ್ಲ. 

ಚಾರ್ಜ್‌ಶೀಟ್‌ನಿಂದ ಹೆಸರು ತೆಗೆಯಲು ಲಂಚ | |ASI ಲೋಕಾ ಬಲೆಗೆ 

ದಾವಣಗೆರೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಿಂದ ಮೂವರ ಹೆಸರು ಕೈಬಿಡಲು 1 ಲಕ್ಷ ರೂಪಾಯಿ ಲಂಚಕ್ಕೆ ಡಿಮ್ಯಾಂಡ್‌ ಮಾಡಿದ ಎಎಸ್‌ಐ ಒಬ್ಬರು ಲೋಕಾಯುಕ್ತ ಟ್ರ್ಯಾಪ್‌ ಆಗಿದ್ದಾರೆ.  ₹50 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಕೆಟಿಜೆನಗರ ಪೊಲೀಸ್ ಠಾಣೆ ಎಎಸ್‌ಐ ಈರಣ್ಣರವರ ಎದುರು ಲೋಕಾಯುಕ್ತ ಪೊಲೀಸರು ಹಾಜರ ಆಗಿದ್ದಾರೆ. ರೆಡ್‌ ಹ್ಯಾಂಡ್‌ ಆಗಿ ಎಎಸ್‌ಐರವರನ್ನ ಹಿಡಿದ ಲೋಕಾಯುಕ್ತ ಪೊಲೀಸರು ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.  

ಹೆಜ್ಜೇನು ಕಡಿತ, ರೈತ ಸಾವು

ತೋಟಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ,  ತೀವ್ರ ಅಸ್ವಸ್ಥನಾಗಿದ್ದ ರೈತರೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನವಿಲೇಹಾಳ್‌ ಗ್ರಾಮದಲ್ಲಿ ಸಂಭವಿಸಿದೆ.  ಕೆ.ನಾಗೇಂದ್ರಪ್ಪ (66) ಮೃತ ರೈತರು. ದೊಡ್ಡಘಟ್ಟ ಗ್ರಾಮದ ಸಮೀಪವಿರುವ ತೋಟಕ್ಕೆ ತೆರಳಿದ್ದಾಗ ಹೆಜ್ಜೇನು ಇವರ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ಅವರು ಸ್ಥಳದಲ್ಲಿಯೇ ಪ್ರಜ್ಞೆ ಕಳೆದುಕೊಂಡಿದ್ದರು. ಆ ಬಳಿಕ ಅವರನ್ನ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ 

SUMMARY |  News in Shivamogga, Davanagere, Uttara Kannada, Dakshina Kannada and Udupi districts 

KEY WORDS  |News in Shivamogga, Davanagere, Uttara Kannada, Dakshina Kannada , Udupi districts 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor