ರಿಪ್ಪನ್​ಪೇಟೆ ಪೊಲೀಸರ ಕಾರ್ಯಾಚರಣೆ ! 15 ದಿನಗಳಲ್ಲಿ ಸಿಕ್ಕಿಬಿದ್ದ ಮೂವರು ಕಳ್ಳರು!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jun 25, 2023 SHIVAMOGGA NEWS

ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಸ್ಟೇಷನ್​ ಪೊಲೀಸರು ಕಳ್ಳತನ ಪ್ರಕರಣವೊಂದನ್ನ ಭೇದಿಸಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಿರುವ ಪೊಲೀಸರು, ಆರೋಪಿಯಿಂದ ಚಿನ್ನಾಭರಣಗಳನ್ನ ಜಪ್ತಿ ಮಾಡಿದ್ದಾರೆ. 

ಈ ಸಂಬಂಧ 15 ದಿನಗಳ ಹಿಂದಷ್ಟೆ ಕೇಸ್ ದಾಖಲಾಗಿತ್ತು. ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಂದ್ರಳ್ಳಿ ಗ್ರಾಮದ ಗೋವಿಂದನಾಯ್ಕರ ಮನೆಯಲ್ಲಿ ಕಳ್ಳತನವಾಗಿತ್ತು. ಸುದರ್ಶನ ಕೆ.ಎನ್  23 ವರ್ಷ, ಆದರ್ಶ ಎಸ್ 23 ವರ್ಷ,  ಮಧುಸೂದನ್ 30 ವರ್ಷ ಬಂದಿತರು. 


ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಶಿವಮೊಗ್ಗ ಜಿಲ್ಲಾ ಸಮಿತಿಯಲ್ಲಿ ಮಹತ್ವದ ಬದಲಾವಣೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯಾದ್ಯಂತ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಪುನಃರಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಸಮಿತಿಯನ್ನು ನೂತನವಾಗಿ ರಚಿಸಲಾಗಿದೆ

ಪ್ರಸ್ತುತ 7 ಜನರಿರುವ ಈ ಸಮಿತಿಗೆ ಶಿವಮೊಗ್ಗ ಗ್ರಾಮೀಣದವರಾದ  ಪ್ರಭು ಎಸ್. ಕೆ. ಅವರು ಜಿಲ್ಲಾಧ್ಯಕ್ಷರಾಗಿದ್ದು, ತೀರ್ಥಹಳ್ಳಿಯ ಅರುಣ್ ಕಾನಹಳ್ಳಿಯವರು ಉಪಾಧ್ಯಕ್ಷರು, ಭದ್ರಾವತಿಯ ಶಬರೀಶ್ ಎಂ. ಅವರು ಜಿಲ್ಲಾ ಪ್ರಧಾನ ಕಾರ್ಯುದರ್ಶಿಯಾಗಿ, ಶಿಕಾರಿಪುರದ ರವಿಕುಮಾರ್ ನಾಯಕ್, ಶಿವಮೊಗ್ಗದ ನಿರಂಜನ ಇ. ಮತ್ತು ಶ್ರೀ ರಫೀಕ್ ಅಹ್ಮದ್ ಅವರುಗಳು ಕಾರ್ಯದರ್ಶಿಗಳಾಗಿ ಮತ್ತು ಭದ್ರಾವತಿಯ ಪ್ರದೀಪ್ ವೈ. ಅವರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor