ಮಕ್ಕಳ ಕೈಗೆ ಬೈಕ್ ಕೊಟ್ಟರೆ ತಂದೆ ತಾಯಿ ಕೋರ್ಟ್​ನಲ್ಲಿ ನಿಲ್ಲಬೇಕಾಗುತ್ತೆ! ಮಗನ ತಪ್ಪಿಗೆ ಅಪ್ಪನಿಗೆ ಬಿತ್ತು 20 ಸಾವಿರ ದಂಡ

This Article Written by / Malenadu Today / ಜೂನ್ 20, 2023

KARNATAKA NEWS/ ONLINE / Malenadu today/ Jun 21, 2023 SHIVAMOGGA NEWS

ಶಿವಮೊಗ್ಗ/ ಮಕ್ಕಳ ಕೈಲಿ ಬೈಕ್ ಕೊಡಬೇಡಿ ಅಂದರೂ ಕಾನೂನು ನಿರ್ಲಕ್ಷ್ಯ ಮಾಡಿದ್ರೆ ಏನಾಗುತ್ತದೆ ಎಂದರೇ ತಂದೆ ತಾಯಿಗಳು ದಂಡ ಕಟ್ಟಬೇಕಾದ ಪ್ರಸಂಗ ಎದುರಿಸಬೇಕಾಗುತ್ತದೆ. 

ಇದಕ್ಕೆ ಸಾಕ್ಷಿಎಂಬಂತೆ ತೀರ್ಥಹಳ್ಳಿಯಲ್ಲಿ ಪ್ರಕರಣವೊಂದು ನಡೆದಿದೆ.  ದಿನಾಂಕಃ-19-06-2023  ರಂದು ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್​ಪಿ   ಗಜಾನನ ವಾಮನ ಸುತರ ವಾಹನ ತಪಾಸಣೆ ನಡೆಸ್ತಿದ್ದರು. ಈ ವೇಳೆ  ಕುಶಾವತಿಯ ಬಳಿ 17 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬ ಬೈಕ್​ ಚಲಾಯಿಸ್ತಿರುವುದು ಕಂಡುಬಂದಿದೆ.   ಕೆಎ-14 ಇವೈ-5452 ನೋಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಆತ ಚಲಾಯಿಸುತ್ತಿದದ್ದ. ಕೊನೆಪಕ್ಷ ಹೆಲ್ಮೆಟ್ ಸಹ ಹಾಕಿರಲಿಲ್ಲ. 

ಹೀಗಾಗಿ ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ  ಪ್ರಮೋದ್ ಎಸ್. ಕೆ. 35 ವರ್ಷ, ಕಳ್ಳಿಗದ್ದೆ ಗ್ರಾಮ ತೀರ್ಥಹಳ್ಳಿ ಈತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿದ್ದರು. 

ಆನಂತರ ಈ ಸಂಬಂಧ  ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಲಾಗಿತ್ತು. ಇದೀಗ , ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ದ್ವಿಚಕ್ರ ವಾಹನದ ಮಾಲೀಕರಾದ ಪ್ರಮೋದ್​ರಿಗೆ   ರೂ 20,000/- ದಂಡ ವಿಧಿಸಿದೆ. 

Malenadu Today Shivamogga


ಶಿವಮೊಗ್ಗ ಅಪರಾಧ ಸುದ್ದಿಗಳು

ಸಾಗರ ತಾಲ್ಲೂಕಿನ ನೆಹರೂ ನಗರ ಬಡಾವಣೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್‌ ರಫೀಕ್ (24), ನೇಹರ್ (19) ಬಂಧಿತರು. ಅಸಹಜವಾಗಿ ವರ್ತಿಸುತ್ತಿದ್ದ ಆರೋಪಿಗಳ ವಿಚಾರಣೆ ನಡೆಸಿದಾಗ ಅವರು ಮಾದಕ ವಸ್ತು ಸೇವಿಸಿರುವುದು ಗೊತ್ತಾಗಿದೆ. ವೈದ್ಯಕೀಯ ತಪಾಸಣೆ ನಂತರ ಪ್ರಕರಣ ದಾಖಲಿಸಲಾಗಿದೆ.

ಕೆವೈಸಿ ಅಪ್‌ಡೇಟ್ ನೆಪದಲ್ಲಿ 1.95 ಲಕ್ಷ ರೂ. ವಂಚನೆ ಸಾಗರ: 

ಕವೈಸಿ ಅಪ್‌ ಡೇಟ್ ನೆಪದಲ್ಲಿ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ವ್ಯಕ್ತಿಯೊಬ್ಬರನ್ನು ವಂಚಿಸಿದ ಘಟನೆಗೆ ಸಂಬಂಧಿಸಿದಂತೆ ಸಾಗರ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಿಗೆ ಜೂ.15ರಂದು ಅಪರಿಚಿತ ವ್ಯಕ್ತಿಯೊಬ್ಬ ತಾವು ಬ್ಯಾಂಕ್‌ ವೊಂದರ ವ್ಯವಸ್ಥಾಪಕ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಆನಂತರ  ಬ್ಯಾಂಕ್‌ ಖಾತೆ ವಿವರ ಮತ್ತು ಡೆಬಿಟ್ ಕಾರ್ಡ್ ಸಂಖ್ಯೆ ಕೇಳಿದ್ದಾನೆ. ಇದನ್ನು ನಂಬಿದ ದೂರುದಾರರು ತಮ್ಮ ಬ್ಯಾಂಕ್ ವಿವರ ಮತ್ತು ಡೆಬಿಟ್ ಕಾರ್ಡ್ ಸಂಖ್ಯೆಯನ್ನು ತಿಳಿಸಿದ್ದಾರೆ. ಬಳಿಕ ಮೊಬೈಲಿಗೆ ಬಂದ ಒಟಿಪಿ ಸಂಖ್ಯೆ ಹೇಳುವಂತೆ ಕೇಳಿದಾಗ  ಅದನ್ನು ಸಹ ಕೊಟ್ಟಿದ್ದಾರೆ. ಇದರ ಬೆನ್ನಲ್ಲೆ  ಬ್ಯಾಂಕ್ ಖಾತೆಯಿಂದ ಒಂದು ಬಾರಿ 94 ಸಾವಿರ ರೂ., ಮತ್ತೊಮ್ಮೆ 88 ಸಾವಿರ ರೂ. ಸೇರಿದಂತೆ ಒಟ್ಟು 1,95,409 ರೂ. ವರ್ಗಾವಣೆಯಾಗಿದೆ. ಘಟನೆ ಬಳಿಕ ಎಚ್ಚೆತ್ತ ದೂರುದಾರರು ಸೋಮವಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೇಟೆ ಠಾಣೆಗೆ ದೂರು ನೀಡಿದ್ದಾರೆ.

ಚಿಕಿತ್ಸೆ ಫಲಿಸದೇ ವ್ಯಕ್ತಿ ಸಾವು

ಮಂಡಘಟ್ಟಸಮೀಪ ಬೈಕ್ ಡಿಕ್ಕಿ ಹೊಡೆದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದಾರೆ. ಮಂಡಘಟ್ಟ, ನಿವಾಸಿ ಮಲ್ಲೇಶಪ್ಪ(65) ಮೃತರು. ಕಳೆದ ಜೂನ್  17ರಂದು ರಸ್ತೆಯಲ್ಲಿನಡೆದುಕೊಂಡು ಹೋಗುವಾಗ ಬೈಕ್‌ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಇವರನ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕುಂಸಿ

ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೋರಿಯಲ್ಲಿ ಶವ ಪತ್ತೆ ಶಿವಮೊಗ್ಗ: 

ರಾಗಿಗುಡ್ಡದ ಸಮೀಪದ ಮೋರಿಯಲ್ಲಿ ಪುರುಷನೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಂಡಸಿನ ಶವ ಕೊಳಚೆ ನೀರಿನಲ್ಲಿ ದೊರೆತಿದ್ದು ಮಳೆ ನೀರು ಚರಂಡಿಯಲ್ಲಿ ಹರಿದು ಬಂದ ಕಾರಣ ಶವ ತೇಲಿ ಬಂದಿದೆ. ಶವದ ಎಡಗೈನಲ್ಲಿ ಅಮ್ಮ ಎಂಬ ಹಚ್ಚೆ ಇದೆ ಎಂದು ತಿಳಿದುಬಂದಿದೆ. ಗುರುತು ಪತ್ತೆಯಾದರೆ ಗ್ರಾಮಾಂತರ ಶಿವಮೊಗ್ಗ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.

ಬೈಕ್ ಸವಾರ ಸಾವು ಶಿವಮೊಗ್ಗ 

ನಗರದ ಚಾಲುಕ್ಯ ಬಾರ್ ಸಮೀಪದ ಪಾದಾಚಾರಿ ರಸ್ತೆಗೆ ಬೈಕ್ ನುಗ್ಗಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.

ಗೌತಮ್ (21) ಮೃತರು. ಮಂಗಳವಾರ ಬೆಳಗಿನ ಜಾವ ಬೈಕಿನಲ್ಲಿ ಮನೆಗೆ ತೆರಳುವಾಗ ಕ್ರಾಸ್‌ನಲ್ಲಿ ಬೈಕ್‌ ನಿಯಂತ್ರಣಕ್ಕೆ ಸಿಗದೇ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವದ ವಿವಿಧ ಪೂರ್ವ ತಯಾರಿಗಳನ್ನು ಮಾಡಿಕೊಂಡು ಮನೆಗೆ ತೆರಳುತ್ತಿದ್ದ ಎಂದು ತಿಳಿದುಬಂದಿದೆ. ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

ದಾಖಲಾಗಿದೆ.

#ShimogaNews,#ShivamoggaNews,SHIVAMOGGA

ಮುಂದಿನ ಸುದ್ದಿ ಒದಿ

Leave a Comment