ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಸಿಟಿ ಸ್ಕ್ಯಾನ್ ರಿಪೋರ್ಟ್ ತಗೆದುಕೊಂಡು ವಾಪಸ್ ಬಂದ ವ್ಯಕ್ತಿಗೆ ಎದುರಾಗಿತ್ತು ಶಾಕ್!

This Article Written by / Malenadu Today / ಜೂನ್ 15, 2023

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS

ಸಿಟಿ ಸ್ಕ್ಯಾನ್​ ರಿಪೋರ್ಟ್​ ತರಲು ಮೆಗ್ಗಾನ್​ ಆಸ್ಪತ್ರೆಗೆ ಹೋಗಿ ವಾಪಸ್ ಬರುವ ಹೊತ್ತಿಗೆ ಬೈಕ್​ ಕಳುವಾದ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಕುವೆಂಪು ರಸ್ತೆಯ ಬಳಿ ಇರುವ ಯುನಿಟಿ ಆಸ್ಪತ್ರೆ ಎದುರು ತಮ್ಮ ಸ್ಪ್ಲೆಂಡರ್ ಬೈಕ್​ ನಿಲ್ಲಿಸಿ ರಾಮಚಂದ್ರ ಎಂಬವರು ಮೆಗ್ಗಾನ್ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ರಿಪೋರ್ಟ್ ತರಲು ಹೋಗಿದ್ದರು. ಅಲ್ಲಿಂದ ಕೆಲ ಹೊತ್ತಿನಲ್ಲಿ ವಾಪಸ್ ಬರುವಾಗ ಅವರ ಸ್ಪ್ಲೆಂಡರ್ ಬೈಕ್​ನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಎಲ್ಲೆಡೆ ಹುಡುಕಾಡಿ, ಕೊನೆ ಪೊಲೀಸರಿಗೆ ಈ ಪೋರ್ಟ್​ಲ್​ ಮೂಲಕ ದೂರು ದಾಖಲಿಸಿದ್ದಾರೆ.  


ಶಿವಮೊಗ್ಗದಿಂದ ವಿಮಾನಯಾನ ಆರಂಭದ ದಿನಾಂಕ ಬದಲು! ಸಂಸದರು ಹೇಳಿದ್ದೇನು? ಸಿಗಂದೂರು ಸೇತುವೆ ವಿಚಾರಕ್ಕೂ ನೀಡಿದ್ರು ಬಿ.ವೈ.ರಾಘವೇಂದ್ರ ಸ್ಪಷ್ಟನೆ!

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ (Shivamogga airport) ನಲ್ಲಿ ವಿಮಾನಗಳ ಹಾರಾಟ ಮೊದಲು ಆಗಸ್ಟ್ 11 ರಿಂದ ಆರಂಭವಾಗಲಿದೆ ಎನ್ನಲಾಗಿತ್ತು. ಇದೀಗ ಆಗಸ್ಟ್ 8 ರಿಂದಲೇ ವಿಮಾನಯಾನ ಆರಂಭವಾಗಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ. ವರ್ತಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಂಸದರು,  ಇನ್ನೆರಡು ತಿಂಗಳಲ್ಲಿ ಮಲೆನಾಡಿನಿಂದ ವಿಮಾನಯಾನ ಆರಂಭವಾಗಲಿದೆ.  ಇಂಡಿಗೋ ಸಂಸ್ಥೆಯೊಂದಿಗೆ ಒಡಂಬಡಿಕೆ ಪೂರ್ಣಗೊಂಡಿದೆ ಎಂದಿದ್ದಾರೆ. 

ಆಗಸ್ಟ್ 8 ರಿಂದಲೇ ಆರಂಭ ವಿಮಾನಯಾನ

ಶಿವಮೊಗ್ಗದಿಂದ ನಾಗರಿಕ ವಿಮಾನ ಯಾನವು ಆಗಸ್ಟ್ 8 ರಿಂದ ಆರಂಭವಾಗಲಿದೆ. ಅಲ್ಲಿಂದ ಜಿಲ್ಲೆ ಅಲ್ಲದೆ ಮಧ್ಯ ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ.  ಕೈಗಾರಿಕೆ, ವಾಣಿಜ್ಯೋದ್ಯಮ, ಪ್ರವಾಸೋದ್ಯಮ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

 ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ 

ರೈಲ್ವೆ ಕ್ಷೇತ್ರದಲ್ಲೂ ಕೂಡ ಮಹತ್ತರ ಬದಲಾವಣೆ ಯಾಗಲಿದೆ ಎಂದ ಸಂಸದ ಬಿ.ವೈ ರಾಘವೇಂದ್ರರವರು,. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಮಾರ್ಗವು 10 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸಹ ಜಿಲ್ಲೆಯ ಸರ್ವಾ೦ಗೀಣ ಅಭಿವೃದ್ಧಿಗೆ ಸಹಕಾರಿಯಾಗುವುದರಲ್ಲಿ ಅನುಮಾನವಿಲ್ಲಎಂದರು.

ಸಿಗಂದೂರು ಸೇತುವೆ ವಿಚಾರದಲ್ಲಿ ಸ್ಪಷ್ಟನೆ!

ಲಿಂಗನಮಕ್ಕಿ ಜಲಾಶಯದ ನೀರನ್ನು ನಾವು ಕಡಿಮೆ ಮಾಡಿದ್ದೇವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಪಾದಿಸಿದ್ದಾರೆ. ಅದ್ಯಾಕೆ ಆ ರೀತಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ, ಸೇತುವೆ ನಿರ್ಮಾಣ ಮಾಡಲು, ಸಾಮಗ್ರಿಗಳನ್ನು ಸಾಗಿಸಲು ನೀರು ಬೇಕು. ನೀರು ನಾವು ಕಡಿಮೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದ್ರು. 

ಆಗಸ್ಟ್​ 15 ಕ್ಕೆ ಶಿವಮೊಗ್ಗದ ಪ್ರಮುಖ ಮೇಲ್ಸೇತುವೆ ಉದ್ಘಾಟನೆ! ತುಂಗಾನದಿಯ ಹೊಸ ಬ್ರಿಡ್ಜ್​​ ಓಪನ್​! ಕಡದಕಟ್ಟೆ, ಸವಳಂಗ ರಸ್ತೆ, ಕಾಶಿಪುರ ಓವರ್​ ಬ್ರಿಡ್ಜ್​ ಬಗ್ಗೆ ಸಂಸದರು ಹೇಳಿದ್ದೇನು?

 

#ShimogaNews,#ShivamoggaNews,SHIVAMOGGA

ಮುಂದಿನ ಸುದ್ದಿ ಒದಿ

Leave a Comment