ಶಿವಮೊಗ್ಗಕ್ಕೆ ಮತ್ತೊಂದು ಮೆಗಾ ಪ್ರಾಜೆಕ್ಟ್!ಸಂಸದರ ಮನವಿಗೆ ಅಸ್ತು ಎಂದ ನಿತಿನ್ ಗಡ್ಕರಿ! ಏನದು?|

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jun 15, 2023 SHIVAMOGGA NEWS

ಸಂಸದ ಬಿ.ವೈ.ರಾಘವೇಂದ್ರ (B.Y.Raghavendra)  ಸದ್ಯ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ಭದ್ರಾವತಿಯ ವಿಐಎಸ್​ಎಲ್​   ಕಾರ್ಖಾನೆಯನ್ನು ಮುಚ್ಚದಂತೆ ಕಾರ್ಮಿಕರ ನಿಯೋಗವನ್ನು ದೆಹಲಿಗೆ ಕೊಂಡೊಯ್ದ ಅವರು, ಅದೇ ಸಂದರ್ಭದಲ್ಲಿ ಶಿವಮೊಗ್ಗ ನಗರದ ಉತ್ತರ ಭಾಗದ ಬೈಪಾಸ್ ರಸ್ತೆಗೆ ಕೇಂದ್ರದ ಅನುದಾನ ಮಂಜೂರಾತಿಗಾಗಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾದರು. 

ಸಂಸದರ ಮನವಿ ಮೇರೆಗೆ, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಶಿವಮೊಗ್ಗ ನಗರ ಉತ್ತರ ಭಾಗದ ಬೈಪಾಸ್ ರಸ್ತೆ ನಿರ್ಮಾಣ ಮಂಜೂರಾತಿಗೆ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಮಂಜೂರು ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಮೊಗ್ಗ-ಮರಿಯಮ್ಮನ ಹಳ್ಳಿ ರಾಷ್ಟ್ರೀಯ ಹೆದ್ಧಾರಿಗೆ ಬೇಡಿಕೆ

ಇನ್ನೂ ಶಿವಮೊಗ್ಗ ನಗರದಿಂದ ಹೊನ್ನಾಳಿ, ಹರಿಹರದ ಮೂಲಕ ಮರಿಯಮ್ಮನಹಳ್ಳಿ(ಹೊಸಪೇಟೆ) ಮತ್ತು ವರೆಗಿನ ರಾಜ್ಯ ಹೆದ್ದಾರಿ 25ರಲ್ಲಿ ವಾಹನಗಳ ಸಂಚಾರದ ಒತ್ತಡವಿದೆ. ಹೀಗಾಗಿ ಅದನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ 4 ಪಥದ ರಸ್ತೆ ನಿರ್ಮಿಸಬೇಕೆಂಬ ಬೇಡಿಕೆಯನ್ನು ಸಂಸದ ರಾಘವೇಂದ್ರರವರು ಸಲ್ಲಿಸಿದ್ರು. 

ಸಂಸದರ ಮನವಿಗೆ ಸ್ಪಂದಿಸಿದ  ನಿತಿನ್ ಗಡ್ಕರಿ  ಆದ್ಯತೆ ಮೇರೆಗೆ ಮೇಲ್ದರ್ಜೆಗೇರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಸಚಿವರ ಭೇಟಿ

ಇಷ್ಟೆ ಅಲ್ಲದೆ,  ರಾಜ್ಯದ ಪ್ರತಿಷ್ಠಿತ ಯೋಜನೆಯಾದ ಸಿಗಂದೂರು ಸೇತುವೆ, ವಿದ್ಯಾನಗರದ ರೈಲ್ವೆ ಮೇಲು ಸೇತುವೆ, ರಾಷ್ಟ್ರೀಯ ಹೆದ್ದಾರಿ 266ಸಿ ಮಾವಿನಕೊಪ್ಪ ವೃತ್ತದಿಂದ ಆಡುಗೋಡಿವರೆಗಿನ 13.80 ಕಿ.ಮೀ. ಉದ್ದದ ರಸ್ತೆ, ಬೆಕ್ಕೋಡಿ ಮತ್ತು ಹೊಸನಗರ ಸೇತುವೆಗಳ ಕಾಮಗಾರಿ ವೀಕ್ಷಣೆಗೆ ಬರಲು ಸಮಯ ನೀಡುವುದಾಗಿ ಭರವಸೆ ನೀಡಿದರು.

ಶಿವಮೊಗ್ಗಕ್ಕೆ ಮತ್ತೊಂದು ಮೆಗಾ ಪ್ರಾಜೆಕ್ಟ್!ಸಂಸದರ ಮನವಿಗೆ ಅಸ್ತು ಎಂದ ನಿತಿನ್ ಗಡ್ಕರಿ! ಏನದು?|


ಕಣ್ಣಮುಂದೆಯೇ ಕುಸಿದು ಬಿತ್ತು ಸೂರು! ತೀರ್ಥಹಳ್ಳಿಯಲ್ಲಿ ಎರಡು ದಲಿತ ಕುಟುಂಬಗಳ ಮನೆ ತೆರವು ! ಕಾರಣವೇನು?

ತೀರ್ಥಹಳ್ಳಿ/ ತಾಲ್ಲೂಕಿನ ಮೇಗರವಳ್ಳಿಯಲ್ಲಿ ನಿನ್ನೆ ಬುಧವಾರ ಎರಡು ದಲಿತ ಕುಟುಂಬಗಳ ಮನೆಗಳನ್ನ ಒಡೆದುಹಾಕಲಾಗಿದೆ. ಪರಿಣಾಮ, ಮನೆ ಕಳೆದುಕೊಂಡ 2 ಕುಟುಂಬಗಳ ಬದುಕಿನಲ್ಲಿಗ ಕತ್ತಲೆ ಆವರಿಸಿದೆ.

 

ಖಾಸಗಿ ಒಡೆತನಕ್ಕೆ ಸೇರಿದ ಜಾಗದ ಸಂಬಂಧ ಉದ್ಭವವಾಗಿದ್ದ ವಿವಾಧ ಕೋರ್ಟ್​ ಮೆಟ್ಟಿಲೇರಿತ್ತು. ಕೋರ್ಟ್​ ನಲ್ಲಿ ಸ್ವತ್ತು ತೆರವಿಗೆ ಆದೇಶ ಹೊರಬಿದ್ದಿದೆ. 

 

ಆದೇಶದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಮೇಗರವಳ್ಳಿ ಗ್ರಾಮದ ಸ.ನಂ. 1ರ 10 ಗುಂಟೆ ಜಾಗದಲ್ಲಿ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ. ರಾಧ, ಲಕ್ಷ್ಮೀ ಎಂಬ ಹೆಸರಿನ ದಲಿತ ಕುಟುಂಬಕ್ಕೆ ಸೇರಿದ ಮನೆಗಳು ಇದಾಗಿದ್ದು, ಮಹಿಳೆಯರ ಬದಕು ಬೀದಿಪಾಲಾಗಿದೆ.

ಇನ್ನೂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ಮನೆ ತೆರವುಗೊಳಿಸಲಾಗಿದ್ದರೂ, ನಡೆದ ಘಟನೆ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ವ್ಯಕ್ತವಾಗಿದೆ. ಕನಿಷ್ಟ ಪಕ್ಷ ಜನಪ್ರತಿನಿಧಿಗಳು ದಲಿತ ಕುಟುಂಬಗಳನ್ನು ಉಳಿಸಬಹುದಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. 


ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಯುವಕನ ಕೊಲೆ!

 

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ  ವ್ಯಕ್ತಿಯೊಬ್ಬನನ್ನ ಹತ್ಯೆ ಮಾಡಲಾಗಿದೆ. ನಗರದ ಗೋಪಾಳದಲ್ಲಿ ಈ ಘಟನೆ ಕೆಲವು ಹೊತ್ತಿಗೂ ಮೊದಲು ನಡೆದಿದ್ದು  ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. 

 

ಆಸೀಫ್​ ಎಂಬಾ 25 ವರ್ಷದ ಯುವಕನನ್ನ ಜಬಿ ಎಂಬಾತ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದ್ದು, ಈ ಸಂಬಂದ ಎಸ್​ಪಿ ಮಿಥುನ್ ಕುಮಾರ್ ಕೂಡ ವಾಟ್ಸ್ಯಾಪ್ ಮೆಸೇಜ್​ನಲ್ಲಿ ಮಾಹಿತಿ ನೀಡಿದ್ದು, ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೃತ್ಯ ಎಸೆಗಲಾಗಿದೆ ಎಂದಿದ್ಧಾರೆ. ಅಲ್ಲದೆ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ಧಾರೆ. 

 

   

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor