VIRAL VIDEO / ಪ್ರೀತಿಸುವ ಪ್ರೇಮಿಗಳು ಈ ವಿಡಿಯೋ ನೋಡಲೇ ಬೇಕು! ಮನೆಗೆ ಬಾ ಮಗಳೇ ಅಂತಾ ಕಾಲಿಗೆ ಬಿದ್ದು ಬೇಡುತ್ತಿದ್ಧಾನೆ ಅಪ್ಪ!

This Article Written by / Malenadu Today / ಜೂನ್ 7, 2023

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

Viral Video/  ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಒಂದಲ್ಲ ಒಂದು ವಿಡಿಯೋ ಇನ್ನಿಲ್ಲದಂತೆ ಮನಸೆಳೆಯುತ್ತದೆ. ಅಂತಹ ವಿಡಿಯೋಗಳು ಕ್ಷಣಮಾತ್ರದಲ್ಲಿ ಎಲ್ಲರ ಮೊಬೈಲ್​ಗಳಲ್ಲಿ ಫಾರವರ್ಡ್​ ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಹೀಗೆ ಸಣ್ಣ ಟೈಂನಲ್ಲಿ, ಜಗದಗಲ ಸಂಚರಿಸುವ ವಿಡಿಯೋಗಳು ವೈರಲ್​ ವಿಡಿಯೋಗಳು ವೈರಲ್​ ವಿಡಿಯೋ ಎಂದು ಕರೆಸಿಕೊಳ್ಳುತ್ತವೆ. 

ಅಪ್ಪ ಐ ಲವ್​ ಯು

ಅಂದಹಾಗೆ  ಇವತ್ತಿನ ವೈರಲ್​ ವಿಡಿಯೋ ಕೇವಲ ಮನ ಸೆಳೆಯುತ್ತಿಲ್ಲ. ಬದಲಾಗಿ ಭಾವುಕವಾಗಿಸುತ್ತಿದೆ. ಅಪ್ಪನೊಬ್ಬ ತನ್ನ ಮಗಳಿಗಾಗಿ ನೆಲಕ್ಕೆ ನೆತ್ತಿ ತಾಗಿಸಿ, ಕೈ ಮುಗಿಯುವ ದೇನಿಯ ಸ್ಥಿತಿಯ ವಿಡಿಯೋ ಇದಾಗಿದ್ದು, ಸದ್ಯ ಇಡೀ ದೇಶದಲ್ಲಿ ಪ್ರೇಮಿಗಳೆ ಈ ವಿಡಿಯೋ ನೋಡಿ ಪ್ರೀತಿಸಿ ಎಂಬಂತಹ ಸಂದೇಶ ರವಾನೆಯಾಗುವಂತೆ ಮಾಡಿದೆ. 

ಪ್ರೇಮಿಯೊಂದಿಗೆ ಹೊರಟ ಮಗಳು, ಮನೆಗೆ ಕರೆದ ಅಪ್ಪ

ಅಪ್ಪಂದಿರಿಗೆ ಎಷ್ಟೆ ಅಂದರೂ ಮಗಳು ಅಂದರೇನೆ ಪ್ರಾಣ! ಪುಟ್ಟ ಹೆಜ್ಜೆಗೆ ಗೆಜ್ಜೆ ತೊಡಿಸುವಾಗ ಸಂಭ್ರಮಿಸುವ ಅಪ್ಪ, ಮಗಳ ಕಿವಿ ಚುಚ್ಚಿದ ನೋವಿಗೆ ಅಳುವ ಅಪ್ಪ, ಮಗಳನ್ನ ಗಂಡನ ಮನೆಗೂ ಸೇರಿಸುವಾಗಲೂ ಬಿಕ್ಕಲಾಗದೇ ದುಃಖಿಸುತ್ತಾನೆ. ಅಂತಹ ಅಪ್ಪನೊಬ್ಬ ತನ್ನ ಮಗಳು ತಾನೆ ಆಯ್ಕೆ ಮಾಡಿಕೊಂಡ ಪ್ರೇಮಿಯ ಜೊತೆಗೆ ಹೊರಟಾಗ, ನಡು ಬೀದಿಯಲ್ಲಿ ಮಗಳ ಕಾಲಿಗೆ ಬಿದ್ದು ಬಾ ಮಗಳೇ ಮನೆಗೆ ಎಂದು ಬೇಡಿಕೊಳ್ತಿದ್ದಾನೆ. ಸದ್ಯ ವಿಡಿಯೋ ವೈರಲ್ ಆಗುತ್ತಿದೆ. 

ನಡೆದಿದ್ದೇನು?

ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಹುಡುಗಿಯೊಬ್ಬಳು ಕೆಲ  ಸಮಯದ ಹಿಂದೆ ಮನೆಯಿಂದ ಪ್ರೇಮಿಯ ಜೊತೆಗೆ ಓಡಿಹೋಗಿ ಮದುವೆಯಾಗಿದ್ದಳು. ಈ ಬಗ್ಗೆ ವಿಷಯ ಗೊತ್ತಿಲ್ಲದ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದ. ಪೊಲೀಸರು ಹುಡುಗಿಯನ್ನ ಕರೆದುಕೊಂಡು ಬಂದು ಫೋಷಕರ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ಆಕೆ ಅಪ್ಪ-ಅಮ್ಮ ಜೊತೆಗೆ ಹೋಗಲು ನಿರಾಕರಿಸಿ ತನ್ನ ಗಂಡನ ಜೊತೆಗೆ ಹೋಗಲು ನಿರ್ದರಿಸಿದ್ದಾಳೆ. 

ಆದರೆ ಅಪ್ಪ ಇದನ್ನ ಒಪ್ಪಲು ಸಿದ್ದನಿರಲಿಲ್ಲ, ಮಗಳೇ ಬಂದು ಬಿಡು ಮಗಳೆ ಅಂತಾ ಬೇಡಿಕೊಳ್ಳುತ್ತಾನೆ. ಮಗಳು ಕೇಳುವುದಿಲ್ಲ, ಅಪ್ಪ ಬಿಡುವುದಿಲ್ಲ, ಕೈ ಮುಗಿಯುತ್ತಾನೆ, ಕಾಲಿಗೆ ಬೀಳುತ್ತಾನೆ. ಮದುವೆಯಾದ ಹುಡುಗನ ಕಾಲಿಗೂ ಬಿದ್ದು ಬಿಟ್ಟು ಕಳಿಸಿ ಮಗಳನ್ನ ಎನ್ನುತ್ತಾನೆ, ಅಪ್ಪ ನೆಲಕ್ಕೆ ತಲೆ ಮುಟ್ಟಿಸಿ, ಕೈ ಮುಗಿವಾಗ, ಅಮ್ಮನೂ ಅಳುತ್ತಾ ಕೈ ಮುಗಿದು ಬೇಡುತ್ತಾಳೆ. ಯುವ ಮನಸ್ಸುಗಳ ನಿರ್ಧಾರ ಬದಲಾಗುವುದಿಲ್ಲ. ಆಗ ಅಪ್ಪಾ, ಬದುಕೇ ಮುಗಿದು ಹೋದ ಹಾಗೆ,, ಎರಡು ಕೈ ಬೀಸಿ ಇಷ್ಟೆ ಪರಪಂಚ ಎನ್ನುವಂತೆ ಮೇಲೆ ನೋಡುತ್ತಾನೆ…

ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದ್ದು, ಜನರು ತಮ್ಮದೆ ಆದ ರೀತಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರೇಮಿಗಳ ಬೆಂಬಲಕ್ಕೆ ನಿಂತವರೂ ಸಹ ತಂದೆಯೊಬ್ಬನ ಕುರುಡು ಪ್ರೀತಿಗೆ ಭಾವುಕರಾಗುತ್ತಿದ್ದಾರೆ. ಆ ಜಾಗದಲ್ಲಿ ತಾನಿದ್ದರೇ ಎಂಬಂತಹ ಬರಹಗಳು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿದೆ. 


 

ಮುಂದಿನ ಸುದ್ದಿ ಒದಿ

Leave a Comment