KARNATAKA NEWS/ ONLINE / Malenadu today/ Jun 5, 2023 SHIVAMOGGA NEWS
ಶಿವಮೊಗ್ಗ/ ಆಯನೂರಿನ ನವರತ್ನ ಬಾರ್ ನಲ ಬಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ, ಆರೋಪಿಗಳನ್ನ ಬಂಧಿಸುವ ತೆರಳಿದ್ದ ಪೊಲೀಸರ ಮೇಲೆಯೇ ಆರೋಪಿ ಸತೀಶ್ ಹಲ್ಲೆ ಮಾಡಲು ಮುಂದಾಗಿದ್ಧಾನೆ. ಈ ವೇಳೆ ಪೊಲೀಸರು ರಕ್ಷಣಾತ್ಮಕವಾಗಿ ಆತನ ಕಾಲಿಗೆ ಗುಂಡು ಹೊಡೆದಿದ್ಧಾರೆ.
ನಿನ್ನೆ ಮಧ್ಯರಾತ್ರಿ ನಡೆದಿದ್ದ ಕೊಲೆ ಸಂಬಂಧ ಆರೋಪಿ ಸತೀಶ್ನನ್ನ ಬಂಧಿಸಲು ಪಿಎಸ್ಐ ಒಬ್ಬರು ಹಾಗೂ ಪ್ರವೀಣ್ ಹಾಗೂ ಶಿವರಾಜ್ ಎಂಬಿಬ್ಬರು ಸಿಬ್ಬಂದಿ ತೆರಳಿದ್ದರು. ಈ ವೇಳೆ ಆರೋಪಿ ಸತೀಶ್ ಪೊಲೀಸರ ಮೇಲೆ ಚಾಕುವಿನಿಂದ ಅಟ್ಯಾಕ್ ಮಾಡಲು ಪ್ರಯತ್ನಿಸಿದ್ದಾನೆ. ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹೊಡೆದ ಹೊರತಾಗಿಯು ಸತೀಶ್ ದಾಳಿಗೆ ಮುಂದಾದಾಗ ಪಿಎಸ್ಐ ರವರು ಆತನ ಕಾಲಿಗೆ ಗುಂಡು ಹಾರಿಸಿದ್ಧಾರೆ. ಘಟನೆಯಲ್ಲಿ ಓರ್ವ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನ ಹಾಗೂ ಆರೋಪಿ ಸತೀಶ್ನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.