SHIVAMOGGA | MALENADUTODAY NEWS | ಮಲೆನಾಡು ಟುಡೆ Oct 16, 2024
ದೆಹಲಿ | ನಾನು ಈಗ ಹುಷಾರಾಗಿದ್ದೀನಿ, ನೀವು ಸಹ ಮುಂದೆ ಹುಷಾರಾಗಿರಿ ಅಂತಾ ನಟಿ ರಶ್ಮೀಕಾ ಮಂದಣ್ಣ ವಿಡಿಯೋವೊಂದರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ಇದೀಗ ಅವರು ಸೈಬರ್ ಅಪರಾಧ ಸಮನ್ವಯ ಕೇಂದ್ರದ (Indian Cybercrime Coordination Centre) ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.
ಕೇಂದ್ರ ಗೃಹಸಚಿವಾಲಯ ತಮಗೆ ನೀಡಿರುವ ಇಂತಹದ್ದೊಂದು ಗೌರವಕ್ಕೆ ರಶ್ಮಿಕಾ ಮಂದಣ್ಣ ಧನ್ಯವಾದ ತಿಳಿಸಿದ್ದಾರೆ. ಈ ಹಿಂದೆ ಅಂದರೆ ವರ್ಷದ ಹಿಂದೆ ರಶ್ಮಿಕಾರ ಡೀಪ್ ಫೇಕ್ ವಿಡಿಯೋವೊಂದು ಹೊರಬಂದಿತ್ತು. ಅದು ಸಾಕಷ್ಟು ವೈರಲ್ ಆಗಿತ್ತು. ಆ ಬಳಿಕ ವಿಡಿಯೋ ಕುರಿತು ಕೇಸ್ ಸಹ ದಾಖಲಾಗಿತ್ತು. ಇದರ ಬಗ್ಗೆ ಮಾತನಾಡಿರುವ ರಶ್ಮಿಕಾ ಆ ಸಂದರ್ಭದಲ್ಲಿ ತಾವು ತೆಗೆದುಕೊಂಡ ನಿಲುವು ಹಾಗೂ ಕೇಂದ್ರ ಸರ್ಕಾರ ಸೈಬರ್ ಕ್ರೈಂ ವಿಭಾಗ ನೀಡಿದ ಸಹಾಯವನ್ನ ಸ್ಮರಿಸಿದ ಅವರು, ಆ ಘಟನೆಯ ನಂತರ ಸೈಬರ್ ಕ್ರೈಂಗಳ ವಿರುದ್ಧ ನಾನು ಹೋರಾಟ ಆರಂಭಿಸಿದೆ. ಇದಕ್ಕೆ ಕೇಂದ್ರ ಸರ್ಕಾರದ ನೆರವು ಸಿಕ್ಕಿದೆ. ನನ್ನನ್ನು ಬ್ರಾಂಡ್ ಅಂಬಾಸಿಡರ್ ಆಗಿ ಅವಕಾಶ ನೀಡಿದೆ. ಇನ್ಮುಂದೆ ಸೈಬರ್ ಅಪರಾಧಗಳ ಬಗ್ಗೆ ನಿಮ್ಮಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
View this post on Instagram

SUMMARY | Indian Cybercrime Coordination Centre I4C has appointed actress Rashmika Mandanna as the brand ambassador to raise awareness against cyber crimes
KEYWORDS | Indian Cybercrime Coordination Centre, I4C , actress Rashmika Mandanna, brand ambassador , raise awareness against cyber crimes