ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಬಿ.ವೈ ವಿಜಯೇಂದ್ರ! ಬಿಎಸ್​​ವೈ ಫೋನ್ ಮಾಡಿದ್ರು ಎಂದ ಮುಖ್ಯಮಂತ್ರಿ!

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಬೆಂಗಳೂರು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಪುತ್ರ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ರವರು ಇವತ್ತು ಸಿಎಂ ಸಿದ್ದರಾಮಯ್ಯ ರವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾಗಿರಿವ ವಿಜಯೇಂದ್ರ  ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು ಶಕ್ತಿಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದರು.  ಬಳಿಕ  ಹುಚ್ಚರಾಯ ಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾ ಣ ವಚನ ಸ್ವೀಕರಿಸಿದ ಅವರು,  ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರನ್ನು ಭೇಟಿ ಮಾಡಿದರು. 

Shivamogga Malenadu Today

ಇದೇ ವೇಳೆ ಸಿದ್ದರಾಮಯ್ಯ ಸಹ ವಿಜಯೇಂದ್ರ ಅವರಿಗೆ ಶುಭಾಶಯ ಕೋರಿದರು.ಅಲ್ಲದೆ  ನಿಮ್ಮ ತಂದೆ ಫೋನ್ ಮಾಡಿದ್ದರು ಎಂದು ವಿಜಯೇಂದ್ರರಿಗೆ ತಿಳಿಸಿದ್ದಾರೆ. ಇಬ್ಬರು ಕೆಲ ಹೊತ್ತು ಮಾತುಕತೆ ನಡೆಸಿದರು. 

ಲಕ್ಕವಳ್ಳಿ ಭದ್ರಾ ಕಾಲುವೆಯಲ್ಲಿ ಮೂವರ ಸಾವು! ಮತ್ತೊಬ್ಬ ಯುವತಿ ಶವ ಪತ್ತೆ!

ಶಿವಮೊಗ್ಗ/ ತರಿಕೆರೆ ತಾಲ್ಲೂಕಿನ ಲಕ್ಕವಳ್ಳಿ ಭಾಗದಲ್ಲಿ ಹಾದು ಹೋಗಿರುವ ಭದ್ರಾ ಕಾಲುವೆಯಲ್ಲಿ ಕಳೆದ ಭಾನುವಾರ ಕೊಚ್ಚಿಕೊಂಡು ಹೋಗಿದ್ದ ಮೂವರ ಪೈಕಿ ಇಬ್ಬರ ಶವ ಪತ್ತೆಯಾಗಿತ್ತು. ಇನ್ನೊಬ್ಬರ ಶವಕ್ಕಾಗಿ ಹುಡುಕಾಟ ಮುಂದುವರಿದಿತ್ತು. 

ಇದೀಗ ಶಾಮವೇಣಿಯವರ ಶವ ಕೂಡ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಚಿಕ್ಕಮಗಳೂರು ಪೊಲೀಸ್ ಸಿಬ್ಬಂಧಿ ಹಾಗೂ ಸ್ಥಳೀಯ ಈಜುಗಾರರು ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದಾರೆ. ನಿನ್ನೆ ಕಾರ್ಯಾಚರಣೆ ವಿಫಲವಾಗಿದ್ದು, ಇವತ್ತು ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿದಿತ್ತು.  ಶಾಮವೇಣಿಯವರ ಶವ ಇವತ್ತು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಪತ್ತೆಯಾಗಿದೆ.  

 

 

 

Leave a Comment