ಲಕ್ಕವಳ್ಳಿ ಭದ್ರಾ ಕಾಲುವೆಯಲ್ಲಿ ಮೂವರ ಸಾವು! ಮತ್ತೊಬ್ಬ ಯುವತಿ ಶವ ಪತ್ತೆ!

Three dead in Lakkavalli Bhadra canal The body of another young woman was found!

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Three dead in Lakkavalli Bhadra canal The body of another young woman was found!

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಶಿವಮೊಗ್ಗ/ ತರಿಕೆರೆ ತಾಲ್ಲೂಕಿನ ಲಕ್ಕವಳ್ಳಿ ಭಾಗದಲ್ಲಿ ಹಾದು ಹೋಗಿರುವ ಭದ್ರಾ ಕಾಲುವೆಯಲ್ಲಿ ಕಳೆದ ಭಾನುವಾರ ಕೊಚ್ಚಿಕೊಂಡು ಹೋಗಿದ್ದ ಮೂವರ ಪೈಕಿ ಇಬ್ಬರ ಶವ ಪತ್ತೆಯಾಗಿತ್ತು. ಇನ್ನೊಬ್ಬರ ಶವಕ್ಕಾಗಿ ಹುಡುಕಾಟ ಮುಂದುವರಿದಿತ್ತು. 

ಇದೀಗ ಶಾಮವೇಣಿಯವರ ಶವ ಕೂಡ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಚಿಕ್ಕಮಗಳೂರು ಪೊಲೀಸ್ ಸಿಬ್ಬಂಧಿ ಹಾಗೂ ಸ್ಥಳೀಯ ಈಜುಗಾರರು ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದಾರೆ. ನಿನ್ನೆ ಕಾರ್ಯಾಚರಣೆ ವಿಫಲವಾಗಿದ್ದು, ಇವತ್ತು ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿದಿತ್ತು.  ಶಾಮವೇಣಿಯವರ ಶವ ಇವತ್ತು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಪತ್ತೆಯಾಗಿದೆ.  

ಶಿವಮೊಗ್ಗ ಜಿಲ್ಲೆ ಸೊರಬ ಮತ್ತು ಶಿವಮೊಗ್ಗ ಗ್ರಾಮಾಂತರ ಶಾಸಕರಿಂದ ಪ್ರಮಾಣವಚನ!

ಶಿವಮೊಗ್ಗ/ ನೂತರ ಸರ್ಕಾರ ಅಸ್ತಿತ್ವ ಬಂದ ಬೆನ್ನಲ್ಲೆ, ಮೂರು ದಿನಗಳ ಅಧಿವೇಶನವನ್ನು ಕರೆಯಲಾಗಿದೆ. ಈ ಅಧಿವೇಶನದ ವೇಳೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಎಂಎಲ್​ಎ ಚನ್ನಬಸಪ್ಪರವರು ಆರಗ ಜ್ಞಾನೇಂದ್ರ ಮತ್ತು ಬೇಳೂರು ಗೋಪಾಲಕೃಷ್ಣರವರು ಪ್ರಮಾಣ ವಚನ ಪಡೆದಿದ್ದರು. ಇವತ್ತು 

ಸಂವಿಧಾನ ಮತ್ತು ದೇವರ ಹೆಸರಿನಲ್ಲಿ ವಿಧಾನಸೌಧದಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆಯವರ ಸಮ್ಮುಖದಲ್ಲಿ ಶಾಸಕರಾಗಿ ಶಾರದಾ ಪೂರ್ಯಾ ನಾಯ್ಕ್ ಪ್ರಮಾಣ ಸ್ವೀಕರಿಸಿದ್ಧಾರೆ. ಈ ವಿಷಯ ತಿಳಿಸಿರುವ ಅವರು, ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ. ನುಡಿದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡುತ್ತೇನೆ ಎಂದಿದ್ಧಾರೆ. ಇನ್ನೊಂದೆಡೆ ಸೊರಬ ಶಾಸಕ ಮಧು ಬಂಗಾರಪ್ಪರವರು ಸಹ ಹಂಗಾಮಿ ಸ್ಪೀಕರ್ ಆರ್​ವಿ ದೇಶಪಾಂಡೆಯವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು.  

 

 

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor