SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 7, 2024 | SHIVAMOGGA NEWS | ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಶೀಟರ್ಗೆ ಗುಂಡಿನ ರುಚಿ ತೋರಿಸಿದ್ದಾರೆ. ಬಂಧಿಸಲು ತೆರಳಿದ್ದಾಗ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ರೌಡಿಶೀಟರ್ ಹಬೀಬುಲ್ಲಾ ಅಲಿಯಾಸ್ ಅಮ್ಮು ಎಂಬಾತನ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಆತನ ಬಲಗಾಲಿನ ಮೊಣಕಾಲಿನವರೆಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಲಾಗಿದೆ. ಸದ್ಯ ಮೆಗ್ಗಾನ್ನಲ್ಲಿ ಆತನಿಗೆ ಟ್ರೀಟ್ಮೆಂಟ್ ಮುಂದುವರಿದಿದೆ.
ನಗರದ ಬೈಪಾಸ್ ರಸ್ತೆ ಸಮೀಪದ ಗರುಡ ಲೇಔಟ್ನಲ್ಲಿ ಇಂದು ಬೆಳಗ್ಗೆ ಹಬೀಬುಲ್ಲಾನ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ಸಂದರ್ಭ ಹಬೀಬುಲ್ಲಾ ಪೊಲೀಸ್ ಸಿಬ್ಬಂದಿ ಜಯಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಸ್ಪಿ ಮಿಥುನ್ ಕುಮಾರ್
ಇನ್ನೂ ಈ ಬಗ್ಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಸೆಪ್ಟೆಂಬರ್ 13 ರಂದು ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕ್ರೈಂ ಕೇಸ್ ಅಡಿಯಲ್ಲಿ ಪೊಲೀಸರು ಅಮ್ಮುವಿನ ಹುಡುಕಾಟದಲ್ಲಿದ್ದರು. 109 ಬಿಎನ್ಎಸ್ ಅಡಿ ದಾಖಲಾದ ಪ್ರಕರಣದಲ್ಲಿ ಓರ್ವ ವ್ಯಕ್ತಿಗೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಪರಾರಿಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆಸಿದ್ದೆವು. ಇವತ್ತು ಆತನ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಬಿಬುಲ್ಲಾ ಅಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿ, ಆತನನ್ನ ಅರೆಸ್ಟ್ ಮಾಡಲು ತೆರಳಿದ್ದರು.
ಹೀಗೆ ಪೊಲೀಸರು ಆರೋಪಿಯನ್ನ ಬಂಧಿಸುವ ಸಂದರ್ಭದಲ್ಲಿ ಆರೋಪಿ ಪೊಲೀಸ್ ಸಿಬ್ಬಂದಿ ಜಯಪ್ಪರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಇನ್ಸ್ಪೆಕ್ಟರ್ ಗುರುರಾಜ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಈತನ ವಿರುದ್ಧ 2019 ರಲ್ಲಿ ಮರ್ಡರ್ ಪ್ರಕರಣ ಇದೆ, ಅಲ್ಲದೆ ರೆಡ್ ಸ್ಯಾಂಡಲ್ ಸಾಗಣಿಕೆ ಸಂಬಂಧ ಬೆಂಗಳೂರು ಹಾಗೂ ಆಂಧ್ರಪ್ರದೇಶದಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈತನಿಗೆ ಕ್ರೈಂ ಹಿನ್ನೆಲೆಯಿದ್ದು, ಯಾರ ಪ್ರಚೋದನೆಯಿಂದ ಹೀಗೆ ಮಾಡಿದ್ದಾನೆ ಎಂಬುದನ್ನ ಇನ್ನಷ್ಟೆ ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.

Summary | Habibullah, a rowdy-sheeter of Shivamogga police, was shot in the leg. SP Mithun Kumar said.
Keywords | Habibullah, rowdy sheeter , Shivamogga police, shivamogga police fire, police shot in the leg, SP Mithun Kumar said,