ಹೆಗ್ಗೋಡು-ಬೆಂಗಳೂರು ಬಸ್​ಗೆ ಇನ್ನೊಂದು ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ! 16 ಮಂದಿಗೆ ಗಾಯ

Another KSRTC bus collided with a Heggodu-Bengaluru bus near Haliyur in Chikkamagaluru

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Another KSRTC bus collided with a Heggodu-Bengaluru bus near Haliyur in Chikkamagaluru

KARNATAKA NEWS/ ONLINE / Malenadu today/ Apr 24, 2023 GOOGLE NEWS


ತರಿಕೆರೆ/ ಚಿಕ್ಕಮಗಳೂರು/  ಇಲ್ಲಿನ  ಹಳಿಯೂರು ಸಮೀಪ ಆಕ್ಸಿಡೆಂಟ್ ಸಂಭವಿಸಿದೆ. ಎರಡು ಕೆ.ಎಸ್​.ಆರ್​.ಟಿ.ಸಿ (KSRTC)ಬಸ್​ಗಳು ಮುಖಾಮುಖಿ ಡಿಕ್ಕಿಯಾಗಿವೆ. 

ಇವತ್ತು ಬೆಳಗ್ಗೆ ಸಂಭವಿಸಿರುವ ಘಟನೆಯಲ್ಲಿ ಬೆಂಗಳೂರು-ಹೆಗ್ಗೋಡು ನಾನ್ ಎಸಿ ಸ್ಲೀಪರ್​ ಬಸ್ ಹಾಗೂ , ರಾಜ್ಯ ಸಾರಿಗೆಯ ಸಾಮಾನ್ಯ ಬಸ್ ಡಿಕ್ಕಿಯಾಗಿದೆ

ಹೈವೆಯಲ್ಲಿಯೇ ಈ ಘಟನೆ ಸಂಭವಿಸಿದೆ, ಆಕ್ಸಿಡೆಂಟ್ (Accident) ನಲ್ಲಿ 16 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನ ತರಿಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ, ಅದೃಷ್ಟವಶಾತ್ ಯಾವುದೆ ಪ್ರಾಣಪಾಯ ಸಂಭವಿಸಿಲ್ಲ.

ಮೂಡಿಗೆರೆಯಲ್ಲಿ ಕಾರುಗಳ ನಡುವೆ ಅಪಘಾತ

ಇತ್ತ ಮೂಡಿಗೆರೆ ತಾಲ್ಲೂಕು ಹೊರಟ್ಟಿ ಗ್ರಾಮದಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು.

ತಕ್ಷಣ ವಿಷಯ ತಿಳಿದು ಸ್ಥಳಕ್ಕೆ  112 ER ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ಧಾರೆ. ಅಲ್ಲದೆ ಆಕ್ಸಿಡೆಂಟ್​ ಆದ ವಾಹನಗಳನ್ನ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಇನ್ನೂ ಅಷ್ಟರಲ್ಲಿ ಸ್ಥಳೀಯರು ಅಪಘಾತದಲ್ಲಿ ಗಾಯಗೊಂಡವರನ್ನ ಸ್ಥಳೀಯ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಕೊಡಿಸಿದ್ಧಾರೆ.

Malenadutoday.com Social media

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor