ಶಿವಮೊಗ್ಗ ನಗರದ ಶರಾವತಿ ಗೇಟ್ ಬಳಿ ಅಪರಿಚಿತ ಶವ ಪತ್ತೆ! ವಿಳಾಸ ಪತ್ತೆಗಾಗಿ ಹುಡುಕಾಟ

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ನಗರದ ಸಾಗರ ರಸ್ತೆ ಶರಾವತಿ ನಗರ ಗೇಟ್ ಹತ್ತಿರ ಸುಮಾರು 55 ವರ್ಷದ ಅನಾರೋಗ್ಯ ಪೀಡಿತ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಮಾ. 07 ರಂದು ಮೃತಪಟ್ಟಿರುತ್ತಾನೆ. ಈ ವ್ಯಕ್ತಿಯು ಡಾಕ್ಯ ನಾಯ್ಕ ಬಿನ್ ಲಿಂಗನಾಯ್ಕ ಎಂದು ತಿಳಿದಿದ್ದು, ಸರಿಯಾದ ವಿಳಾಸ ಪತ್ತೆಯಾಗಿರುವುದಿಲ್ಲ. ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. 

READ | ಸಾರ್ವಜನಿಕರ ಗಮನಕ್ಕೆ ! 19 ವರ್ಷದೊಳಗಿನವರಿಗೆ ಜಂತು ಹುಳು ನಿವಾರಣಾ ಮಾತ್ರೆ ಕೊಡಿ! ಉಚಿತವಾಗಿ ವಿತರಿಸ್ತಿದೆ ಆರೋಗ್ಯ ಇಲಾಖೆ! ವಿವರ ಇಲ್ಲಿದೆ

 ಮೃತನು 5.9 ಅಡಿ ಎತ್ತರವಿದ್ದು ಕೋಲು ಮುಖ, ತೆಳುವಾದ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು,  ತಲೆಕೂದಲು ಮತ್ತು ಗಡ್ಡ ಬಿಟ್ಟಿರುತ್ತಾನೆ. ಮೃತನ ಬಲಗೈ ಮುಂಗೈನ ಒಳಭಾಗದಲ್ಲಿ ಶ್ರೀ ಸೇವಾಲಾಲ್ ಹಾಗೂ ಎಡಗೈ ಮುಂಗೈ ಮೇಲೆ ಮಂಜು ಎಂಬ ಹಜ್ಜೆ ಗುರುತು ಇರುತ್ತದೆ. ಮೈಮೇಲೆ ಕೆಂಪು ಬಣ್ಣದ ತುಂಬು ತೋಲಿನ ಸ್ವೆಟರ್, ಬಿಳಿ ಮಾಸಲು ಬಣ್ಣದ ಟೀಶರ್ಟ್ ಹಾಗೂ ಕಂದು ಬಣ್ಣದ ಚಡ್ಡಿ ಧರಿಸಿರುತ್ತಾನೆ. ಈ ಅಪರಿಚಿತ ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ. ಸಂಖ್ಯೆ 08182-261414/ 9644761255 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor