ದುಸ್ವಪ್ನದಂತೆ ಕಾಡುತ್ತಿರುವ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಭೀತಿ! ತಂಗಿ ಮದುವೆ ಟೈಂನಲ್ಲಿ ಗುತ್ತಿಗೆ ಕಾರ್ಮಿಕ ನೇಣಿಗೆ ಶರಣು! 19 ದಿನದಲ್ಲಿ ಮೂವರ ದುರ್ಮರಣ

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM | SHIVAMOGGA NEWS | BHADRAVATI TALUK

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿರುವ ವಿಐಎಸ್ಎಲ್ (Visl) ಕಾರ್ಖಾನೆ ಮುಚ್ಚುವ ಭೀತಿಯಿಂದ ಹಲವು ಗುತ್ತಿಗೆ ಕಾರ್ಮಿಕರು ಬದುಕು ಬೀದಿಗೆ ಬೀಳುತ್ತಿದೆಯಷ್ಟೆ ಅಲ್ಲದೆ  ಕೆಲವರು ಕುಟುಂಬ ನಿರ್ವಹಣೆ ಮಕ್ಕಳ ಭವಿಷ್ಯ ಹೇಗೆಂದು ಚಿಂತಿಸಿ  ಅಸಹಾಯಕಗೊಂಡು,  ಆತ್ಮ ಹತ್ಯೆಗೆ ಶರಣಾಗುತ್ತಿದ್ದಾರೆ. ಈ ಬಗ್ಸಂಗೆ ಮಾತನಾಡಿರುವ ಗುತ್ತಿಗೆ ಕಾರ್ಮಿಕರ ಸಂಘದ  ಸುರೇಶ್‌ ಹೋರಾಟ ಆರಂಭಗೊಂಡ 19 ದಿನದಲ್ಲಿ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ತಂಗಿಯ ಮದುವೆ ಶಾಸ್ತ್ರದ ವೇಳೆ ಸಹೋದರ ನೇಣಿಗೆ ಶರಣು

ಇನ್ನೂ ನಿನ್ನೆ ಭಾನುವಾರ ಬೆಳಗ್ಗೆ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ತಾಲೂಕಿನ ಕೋಮಾರನಹಳ್ಳಿಯ ವಾಸಿ ಕುಟುಂಬದ ಹೆಣ್ಣು ಮಗಳ ಮದುವೆ ಶುಭ ಕಾರ್ಯ ನಡೆಯುತ್ತಿದೆ. ಈ  ವೇಳೆ ಸಹೋದರ ಗುತ್ತಿಗೆ ಕಾರ್ಮಿಕ ಚೇತನ್​ಕುಮಾರ್  ಮರವೊಂದಕ್ಕೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿಸಿದ್ದಾರೆ. ಹೀಗಾಗಿ ವಿಐಎಸ್​ಎಲ್​ನ್ನು ಉಳಿಸಿಕೊಡುವ ಕೆಲಸವನ್ನು ಎಲ್ಲಾ ರಾಜಕೀಯ ಪಕ್ಷಗಳು ಮಾಡಬೇಕು ಎಂದು ಕಾರ್ಮಿಕ ಸಂಘಟನೆಯ ಮುಖಂಡರು  ಒತ್ತಾಯಿಸಿದ್ಧಾರೆ. 

 *ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor