ರಸ್ತೆ ದಾಟುತ್ತಿದ್ದ ಜಿಂಕೆಗೆ ವಾಹನ ಡಿಕ್ಕಿ ! ಪೆಟ್ಟು ತಿಂದು ಒದ್ದಾಡುತ್ತಿದ್ದ ವನ್ಯಜೀವಿಗೆ ದಾರಿಹೋಕರಿಂದ ಆರೈಕೆ ! ವಿಡಿಯೋ ವೈರಲ್​

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM | SHIVAMOGGA NEWS | SHIVAMOGGA TALUK 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸಕ್ರೆಬೈಲ್​ ನಲ್ಲಿನ ದೃಶ್ಯವೊಂದು ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ವಾಹನ ಸವಾರರ ಮಾನವೀಯತೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇಲ್ಲಿನ ಕಾಡಿನ ಹಾದಿಯಲ್ಲಿ ರಸ್ತೆ ದಾಟುತ್ತಿದ್ದ ಜಿಂಕೆಯೊಂದು ವಾಹನಕ್ಕೆ ಬಡಿದು,ಪೆಟ್ಟು ತಿಂದು ನರಳಾಡುತ್ತಿತ್ತು. ಇದನ್ನ ಗಮನಿಸಿದ ವಾಹನ ಸವಾರರು ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿ ಜಿಂಕೆಯ ಬಳಿ ಬಂದು ಅದರ ಆರೈಕೆಗೆ ಮುಂದಾಗಿದ್ದಾರೆ. ಕಾಲಿಗೆ ತೀವ್ರ ಪೆಟ್ಟು ತಿಂದ ಜಿಂಕೆ ಮೇಲಕ್ಕೆ ಏಳಲು ಸಾಧ್ಯವಾಗದೇ ಒದ್ದಾಡುತ್ತಿತ್ತು.

ಟ್ರಾಫಿಕ್​ ಫೈನ್​ ಕಟ್ಟಲು 50 ಪರ್ಸೆಂಟ್ ಡಿಸ್ಕೌಂಟ್! ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ದಂಡ ಕಟ್ಟಲು ಇದೆ ಅವಕಾಶ! ವಿವರ ಇಲ್ಲಿದೆ

ಇದನ್ನ ನೋಡಿದ ಅಲ್ಲಿದ್ದ ಸ್ಥಳೀಯರು ಹಾಗೂ ವಾಹನ ಸವಾರರು ಜಿಂಕೆಗೆ ನೀರು ಕುಡಿಸಿ ಅದನ್ನು ಸಾವರಿಸಿದ್ದಾರೆ. ಬಳಿಕ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಜಿಂಕೆಗೆ ಚಿಕಿತ್ಸೆ ಸಿಗುವಂತೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆ ನಡೆದಿದ್ದು ಯಾವಾಗ ಎಂಬುದರ ಬಗ್ಗೆ ವಿಷಯ ತಿಳಿದುಬಂದಿಲ್ಲವಾದರು ಸದ್ಯ ವಾಹನಸವಾರರು ಹಾಗೂ ಸ್ಥಳೀಯರ ಮಾನವೀಯತೆಗೆ ಸಾಕ್ಷಿಯಾಗಿ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor